ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶೀಘ್ರ ಒಂದೇ ಸೂರಿನಡಿ ಎಲ್ಲಾ ಚಿಕಿತ್ಸೆ ಲಭ್ಯ!

By Nayana
|
Google Oneindia Kannada News

ಬೆಂಗಳೂರು, ಜೂನ್ 12: ಸರ್ಕಾರಿ ಆಸ್ಪತ್ರೆಯಲ್ಲಿಯೂ ಕೂಡ ಹತ್ತಾರು ವೈದ್ಯಕೀಯ ಸೌಲಭ್ಯಗಳು ದೊರೆಯುವ ಕಾಲ ಹತ್ತಿರವಾಗಿದೆ. ಖಾಸಗಿ ಆಸ್ಪತ್ರೆಗಳ ಮಾದರಿಯಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಸರ್ಕಾರದ ಅನುಮತಿ ಪಡೆದು ತನ್ನ ವ್ಯಾಪ್ತಿಯಲ್ಲಿ ಬರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಐದು ಹೆಚ್ಚುವರಿ ಮಹಡಿ ನಿರ್ಮಾಣಕ್ಕೆ ಮುಂದಾಗಿದೆ.

ಒಟ್ಟು 30 ಕೋಟಿ ವೆಚ್ಚದಲ್ಲಿ ಈ ಮಹಡಿ ನಿರ್ಮಾಣವಾಗುತ್ತಿದೆ. ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಪರೀಕ್ಷೆ ಹಾಗೂ ಚಿಕಿತ್ಸೆಗೆ ಒಂದು ಕೇಂದ್ರದಿಂದ ಮತ್ತೊಂದು ಕೇಂದ್ರಕ್ಕೆ ಅಲೆಯುವುದು ಇನ್ನುಮುಂದೆ ತಪ್ಪಲಿದೆ. ಕೇವಲ ಖಾಸಗಿ ಆಸ್ಪತ್ರೆಯಲ್ಲಿ ಮಾತ್ರವಲ್ಲ ಸರ್ಕಾರಿ ಆಸ್ಪತ್ರೆಯಲ್ಲೂ ಈ ಬಗೆಯ ಸೌಲಭ್ಯಗಳು ದೊರೆಯಲಿದೆ ಎನ್ನುವುದು ಸಾಭೀತಾಗಲಿದೆ.

ಚಿಕಿತ್ಸೆ ಬಳಿಕ ವ್ಹೀಲ್‌ ಚೇರ್ ಇಲ್ಲದೆ ತೆವಳಿಕೊಂಡೇ ಸಾಗಿದ ವೃದ್ಚಿಕಿತ್ಸೆ ಬಳಿಕ ವ್ಹೀಲ್‌ ಚೇರ್ ಇಲ್ಲದೆ ತೆವಳಿಕೊಂಡೇ ಸಾಗಿದ ವೃದ್

ಇದೀಗ ವಿಕ್ಟೋರಿಯಾದಲ್ಲಿ 5 ಮಹಡಿ ಕಟ್ಟಡ ನಿರ್ಮಾಣವಾದರೆ ಸಾಮಾನ್ಯ ಚಿಕಿತ್ಸೆಯನ್ನು ಇಲ್ಲಿಯೇ ಪಡೆದುಕೊಂಡು, ಹೆಚ್ಚಿನ ಚಿಕಿತ್ಸೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಬಹುದು. ಅಷ್ಟಕ್ಕೂ ನೂತನ ಕೇಂದ್ರದಲ್ಲಿ ಕೇವಲ ಹೊರ ರೋಗಿಗಳಿಗೆ ಮಾತ್ರ ಸೇವೆ ನೀಡಲು ನಿರ್ಧರಿಸಲಾಗಿದೆ.

ಖಾಸಗಿಯಂತೆ ಸರ್ಕಾರಿ ಆಸ್ಪತ್ರೆಯಲ್ಲೂ ಒಂದೇ ಕಡೆಯಲ್ಲಿ ಹತ್ತಾರು ಸೌಲಭ್ಯ

ಖಾಸಗಿಯಂತೆ ಸರ್ಕಾರಿ ಆಸ್ಪತ್ರೆಯಲ್ಲೂ ಒಂದೇ ಕಡೆಯಲ್ಲಿ ಹತ್ತಾರು ಸೌಲಭ್ಯ

ಮಲ್ಟಿ ಸ್ಪೆಷಾಲಿಟಿ ಖಾಸಗಿ ಆಸ್ಪತ್ರೆಗಳಲ್ಲಿ ಒಂದೆಡೆಯಲ್ಲೇ ಹಲವು ವೈದ್ಯಕೀಯ ಸೇವೆಗಳು ದೊರೆಯುತ್ತದೆ ಹಾಗಾಘು ರೋಗಿಗಳು ಸರ್ಕಾರ ಆಸ್ಪತ್ರೆ ಬಿಟ್ಟು ಖಾಸಗಿ ಆಸ್ಪತ್ರೆಗೆ ತೆರಳುತ್ತಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಂದೇ ಸೂರಿನಡಿ ಸಾಕಷ್ಟು ಚಿಕಿತ್ಸೆ ದೊರೆಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

ರೋಗಿಗಳ ಅಲೆದಾಟಕ್ಕೆ ಇನ್ನುಮುಂದೆ ಬ್ರೇಕ್

ರೋಗಿಗಳ ಅಲೆದಾಟಕ್ಕೆ ಇನ್ನುಮುಂದೆ ಬ್ರೇಕ್

ಇಷ್ಟು ವರ್ಷಗಳು ಕಣ್ಣಿನ ಸಮಸ್ಯೆಯಿದ್ದರೆ ಮಿಂಟೊ ಆಸ್ಪತ್ರೆ, ಮಕ್ಕಳಿಗೆ ಅಪೌಷ್ಠಿಕತೆ ತೊಂದರೆ ಇದ್ದರೆ ವಾಣಿವಿಲಾಸ ಆಸ್ಪತ್ರೆ, ಅದೇ ರೀತಿ ವಿವಿಧ ಕಾಯಿಲೆಗೆ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದರು.ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಪರಿಣಾಮ ಸಾಮಾನ್ಯ ಚಿಕಿತ್ಸೆಗೂ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವಂತಾಗಿದೆ ಇದನ್ನು ನಿವಾರಿಸುವ ನಿಟ್ಟಿನಲ್ಲಿ ಮಹಡಿಯನ್ನು ನಿರ್ಮಿಸಲಾಗುತ್ತಿದೆ.

ಕಾಯಿಲೆಗಳಿಗೆ ಅನುಗುಣವಾಗಿ ನಿರ್ಮಾಣವಾಗಲಿದೆ ಚಿಕಿತ್ಸಾ ವಿಭಾಗ

ಕಾಯಿಲೆಗಳಿಗೆ ಅನುಗುಣವಾಗಿ ನಿರ್ಮಾಣವಾಗಲಿದೆ ಚಿಕಿತ್ಸಾ ವಿಭಾಗ

ಕಿವಿ, ಕಣ್ಣು, ಮೂಗು, ಗಂಟಲು, ಕಿಡ್ನಿ, ಹೃದಯ, ಲಿವರ್, ನರರೋಗ, ಅಪೌಷ್ಠಿಕತೆ ಸೇರಿ ವಿವಿಧ ಸಮಸ್ಯೆಯಿಂದ ಬಳಲುತ್ತಿರುವುವವರು ಒಂದೇ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಬಹುದು. ಇನ್ನು ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ವಾಣಿ ವಿಲಾಸ ಆಸ್ಪತ್ರೆ, ಮಿಂಟೋ ಆಸ್ಪತ್ರೆ, ಇಎನ್‌ಟಿ ವಿಭಾಗ, ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ ಕೇಂದ್ರ ಇತರೆ ವಿಭಾಗಗಳನ್ನು ಸಂಪರ್ಕಿಸಬಹುದು.

ಐದು ಹೆಚ್ಚುವರಿ ಮಹಡಿ ನಿರ್ಮಾಣ

ಐದು ಹೆಚ್ಚುವರಿ ಮಹಡಿ ನಿರ್ಮಾಣ

ವಿಕಟೋರಿಯಾ ಆಸ್ಪತ್ರೆಯಲ್ಲಿ ಒಟ್ಟು 30 ಕೋಟಿ ವೆಚ್ಚದಲ್ಲಿ 5 ಹೆಚ್ಚುವರಿ ಮಹಡಿಯನ್ನು ನಿರ್ಮಾಣಮಾಡಲಾಗುತ್ತದೆ. ಜತೆಗೆ ಒಂದೇ ಕೇಂದ್ರದಲ್ಲಿ ಎಲ್ಲಬಗೆಯ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.

English summary
Bengaluru Medical college and research institute has prepared Ra.30 crores project to build five more floors at Victoria hospital to open multi speciality ward soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X