ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Exclusive: ನೆಗೆಟಿವ್ ಇದ್ದವ್ರಿಗೂ ಕೊರೊನಾ ಪಾಸಿಟಿವ್ ಎಂದು ವಿಕ್ಟೋರಿಯಾ ಎಡವಟ್ಟು

|
Google Oneindia Kannada News

ಬೆಂಗಳೂರು, ಜುಲೈ 10: ಕೊರೊನಾವೈರಸ್ ಸುದ್ದಿ ಕೇಳಿಯೇ ಜನ ಹೆದರಿ ಬೆವರುತ್ತಿದ್ದಾರೆ . ಆ ಮಹಾಮಾರಿ ನಮ್ಮ ಬಳಿ ಸುಳಿಯದಿರಲಿ ಎಂದು ಏನೇನೋ ಸಾಹಸ ಮಾಡುತ್ತಿದ್ದಾರೆ. ಹೀಗಿರುವಾಗ ಸರ್ಕಾರದ ನಂಬರ್ ಒನ್ ಆಸ್ಪತ್ರೆಯೇ ಎಡವಟ್ಟು ಮಾಡಿ ಸಾರ್ವಜನಿಕರನ್ನು ಬೆದರಿಸುತ್ತಿದೆ.

Recommended Video

Negative ಇದ್ರು Positive ಇದೆ ಬನ್ನಿ ಅಂತಾರೆ ಹುಷಾರ್ | Victoria Hospital | Oneindia Kannada

ಕೊರೊನಾ ನೆಗೆಟಿವ್ ಎಂದು ವರದಿ ಪಡೆದಿರುವ ಬೆಂಗಳೂರು ನಾಗರಿಕರಿಗೆ ನಿಮಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಕಳೆದ ಮೂರ್ನಾಲ್ಕು ದಿನಗಳಿಂದ ವಿಕ್ಟೋರಿಯಾ ಹಾಗೂ ಬಿಬಿಎಂಪಿ ಸಿಬ್ಬಂದಿ ಕಾಡಿಸುತ್ತಿದ್ದಾರೆ. ವರದಿ ತಯಾರಿಕೆ ಹಾಗೂ ಡಾಟಾ ಎಂಟ್ರಿ ಪ್ರಕ್ರಿಯೆಯಲ್ಲಿ ವಿಕ್ಟೋರಿಯಾ, ಬಿಬಿಎಂಪಿ ಎಡವಟ್ಟಿನಿಂದ ಅನವಶ್ಯಕ ಕಿರುಕುಳ ನೀಡಲಾಗುತ್ತಿದೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಚಿವ ಡಾ. ಸುಧಾಕರ್ ಗರಂ!ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಚಿವ ಡಾ. ಸುಧಾಕರ್ ಗರಂ!

ಮಹಿಳೆಯೊಬ್ಬರು ಯಾವುದೇ ಲಕ್ಷಣವಿಲ್ಲದಿದ್ದರೂ ಅವರ ನೆಮ್ಮದಿಗಾಗಿ ಅಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿದ್ದರು, ಅವರ ಎಣಿಕೆಯಂತೆ ರಿಪೋರ್ಟ್ ಕೂಡ ಬಂದಿತ್ತು, ಮನೆಗೆ ತೆರಳಿದ ಬಳಿಕ ಬಿಬಿಎಂಪಿಯವರು ಕರೆ ಮಾಡಿ ನಿಮಗೆ ಕೊರೊನಾ ಪಾಸಿಟಿವ್ ಇದೆ ಆಸ್ಪತ್ರೆಗೆ ಬಂದು ದಾಖಲಾಗಿ ಎಂದು ಹೇಳಿದ್ದರು.

Victoria Hospital Mentioned Corona Negative Person As A Positive Patient

ಆದರೆ ಅವರಿಗೆ ವರದಿ ನೆಗೆಟಿವ್ ಬಂದಿದ್ದ ಕಾರಣ ಮತ್ತೊಮ್ಮೆ ಲ್ಯಾಬ್‌ಗೆ ಹೋಗಿ ಕೇಳಿದಾಗ ಮೊಬೈಲ್ ನಂಬರ್ ವ್ಯತ್ಯಾಸ ಮಾಡಿದ್ದು ಬೆಳಕಿಗೆ ಬಂದಿತ್ತು, ಬಳಿಕ ಬಿಬಿಎಂಪಿಗೆ ತಕ್ಷಣವೇ ಇ-ಮೇಲ್ ಕಳುಹಿಸಲಾಗಿತ್ತು. ಆದರೂ ಕಳೆದ ಮೂರು ದಿನಗಳಿಂದ ಅವರಿಗೆ ಕಾಲ್ ಬರುತ್ತಲೇ ಇದೆ ಎಂದು ದೂರಿದ್ದಾರೆ.

ಕೊರೊನಾ ಬಗ್ಗೆ ಅಲ್ಪ ಸ್ವಲ್ಪ ಜ್ಞಾನವಿದ್ದವರು ಮತ್ತೊಮ್ಮೆ ಪರಿಶೀಲಿಸುತ್ತಾರೆ, ಇಲ್ಲವಾದರೆ ಬಿಬಿಎಂಪಿಯಿಂದ ಕಾಲ್ ಬಂದಿದೆ ಅಂದಾಕ್ಷಣ ಆಸ್ಪತ್ರೆಗೆ ಹೋಗಿ ದಾಖಲಾಗುತ್ತಾರೆ, ಇದರಿಂದ ಕೊರೊನಾ ಸೋಂಕು ಇಲ್ಲದಿರುವವರಿಗೂ ಹಬ್ಬುವ ಸಾಧ್ಯತೆ ಇರುತ್ತದೆ. ಹೀಗಾಗಿ ಆಸ್ಪತ್ರೆ ಹಾಗೂ ಬಿಬಿಎಂಪಿ ಬೇಜವಾಬ್ದಾರಿ ದೂರವಿಟ್ಟು, ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂಬುದು ಆಶಯವಾಗಿದೆ.

Exclusive: ಕೋವಿಡ್ ಹಾಟ್‌ಸ್ಪಾಟ್‌ ಆಗಲಿದೆಯಾ ವಿಕ್ಟೋರಿಯಾ ಆಸ್ಪತ್ರೆ? ಪ್ರತ್ಯಕ್ಷ ವರದಿ!Exclusive: ಕೋವಿಡ್ ಹಾಟ್‌ಸ್ಪಾಟ್‌ ಆಗಲಿದೆಯಾ ವಿಕ್ಟೋರಿಯಾ ಆಸ್ಪತ್ರೆ? ಪ್ರತ್ಯಕ್ಷ ವರದಿ!

ಹಾಗೆಯೇ ಕೊರೊನಾ ಪಾಸಿಟಿವ್ ಬಂದಿರುವ ವ್ಯಕ್ತಿಗೆ ನೆಗೆಟಿವ್ ವರದಿಯನ್ನು ನೀಡಿದ್ದಾರೆ. ಈ ವಿಕ್ಟೋರಿಯಾ ಹಾಗೂ ಬಿಬಿಎಂಪಿ ಎಡವಟ್ಟಿನಿಂದ ಸಾಕಷ್ಟು ಮಂದಿ ಇದೇ ರೀತಿಯ ತೊಂದರೆಯನ್ನು ಅನುಭವಿಸಿರಬಹುದು.

ಬಿಬಿಎಂಪಿ ಹಾಗೂ ಪ್ರಯೋಗಾಲಯ ಕೇಂದ್ರಗಳು ಇದೇ ರೀತಿ ಇನ್ನಷ್ಟು ಎಡವಟ್ಟು ಮಾಡಿ, ಸೋಂಕು ರಹಿತರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆಯೋ ಎನ್ನುವ ಆತಂಕ ಎದುರಾಗಿದೆ.

English summary
Government owned Victoria Hospital In Bengaluru, and BBMP made an mistake as Coronavirus Nagative person mentioned in positive patients list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X