ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಡೊಝೀಯಿಂದ ನಿರಂತರ ರೋಗಿ ಮೇಲ್ವಿಚಾರಣಾ ವ್ಯವಸ್ಥೆ ಅಳವಡಿಕೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 17: ಭಾರತದ ಮೊದಲ ಕಾಂಟ್ಯಾಕ್ಟ್ ಲೆಸ್ ರಿಮೋಟ್ ಹೆಲ್ತ್ ಮಾನಿಟರಿಂಗ್ ಕಂಪನಿಯಾಗಿರುವ ಡೊಝೀ ಬೆಂಗಳೂರಿನ ವಿಕ್ಟೋರಿಯಾ ಮತ್ತು ಇಎಸ್‍ಐಸಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರಿಮೋಟ್ ಮಾನಿಟರಿಂಗ್ ಸಾಮರ್ಥ್ಯಗಳೊಂದಿಗೆ ಆಸ್ಪತ್ರೆಗಳನ್ನು ಸಜ್ಜುಗೊಳಿಸುತ್ತಿದೆ.

ಸಂಪರ್ಕವಿಲ್ಲದೇ ಅಂದರೆ ಕಾಂಟ್ಯಾಕ್ಟ್ ಲೆಸ್ ಮೂಲಕ ರೋಗಿಗಳ ಆರೋಗ್ಯ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ಡೊಝೀ 100 ಡಿವೈಸ್‍ಗಳನ್ನು ನಿಯೋಜನೆ ಮಾಡಿದೆ. ಇವುಗಳ ಮೂಲಕ ರೋಗಿಗಳ ಆರೋಗ್ಯ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ವೈದ್ಯರು ರೋಗಿಗಳನ್ನು ಖುದ್ದಾಗಿ ಸಂಪರ್ಕಿಸದೇ ಈ ಸಾಧನಗಳಿಂದ ಮೇಲ್ವಿಚಾರಣೆ ನಡೆಸಬಹುದಾಗಿದೆ.

ಟೆಲಿ ಐಸಿಯು ವ್ಯವಸ್ಥೆ ಬಳಸದಿರುವುದಕ್ಕೆ ಸುಧಾಕರ್ ಗರಂಟೆಲಿ ಐಸಿಯು ವ್ಯವಸ್ಥೆ ಬಳಸದಿರುವುದಕ್ಕೆ ಸುಧಾಕರ್ ಗರಂ

ರೋಗಿಗಳ ಹೃದಯ ಬಡಿತ ಪ್ರಮಾಣ, ಉಸಿರಾಟದ ಪ್ರಮಾಣ ಮತ್ತು ಆಮ್ಲಜನಕದ ಪ್ರಮಾಣ ಸೇರಿದಂತೆ ಇನ್ನಿತರೆ ಅಂಶಗಳನ್ನು ನಿಖರವಾಗಿ ಪಡೆದುಕೊಳ್ಳಲು ಈ ಡೊಝೀ ಸಾಧನಗಳು ಆಸ್ಪತ್ರೆಯ ಸಿಬ್ಬಂದಿಗೆ ನೆರವಾಗಲಿವೆ. ಈ ಮೂಲಕ ವೈದ್ಯಕೀಯ ಸಿಬ್ಬಂದಿ ರೋಗಿಯ ಪರಿಸ್ಥಿತಿಯನ್ನು ಅವಲೋಕನ ಮಾಡಿ ತ್ವರಿತವಾಗಿ ಅವರಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗುತ್ತದೆ.

Victoria Hospital gets India’s First Contactless Remote Health Monitoring Dozee

ಅಂದರೆ, ರೋಗಿಯ ಆರೋಗ್ಯ ಪರಿಸ್ಥಿತಿ ಬಿಗಡಾಯಿಸುವ ಮುನ್ನ ಅದರ ಅವಲೋಕನ ಮಾಡಿ ಅವರಿಗೆ ತಜ್ಞರಿಂದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ವೈದ್ಯರು ಮತ್ತು ಆರೋಗ್ಯ ರಕ್ಷಣೆ ತಂಡಗಳು ಒಂದೇ ಸ್ಕ್ರೀನ್‍ನಲ್ಲಿ ರೋಗಿಯ ಆರೋಗ್ಯ ಸ್ಥಿತಿಯನ್ನು ನಿರ್ವಹಣೆ ಮಾಡಬಹುದಾಗಿದೆ. ಇದರ ಪರಿಣಾಮ ನರ್ಸ್‍ಗಳು ಖುದ್ದಾಗಿ ರೋಗಿಯ ಬಳಿ ಪದೇ ಪದೆ ಹೋಗುವ ಪ್ರಕರಣಗಳನ್ನು ಕಡಿಮೆ ಮಾಡುತ್ತದೆ. ಪ್ರತಿಯೊಬ್ಬ ರೋಗಿಗೂ ಕಸ್ಟಮ್ ಅಲರ್ಟ್‍ಗಳನ್ನು ಹಾಕಲಾಗಿರುತ್ತದೆ, ಇದು ವೈದ್ಯರಿಗೆ ಚಿಕಿತ್ಸೆ ನೀಡಲು ನೆರವಾಗುತ್ತದೆ ಮತ್ತು ರೋಗಿಯ ಆರೋಗ್ಯ ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇಡಲು ಸಹಕಾರಿಯಾಗಲಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಸಾವು: ಆಮ್‌ ಆದ್ಮಿ ಪಕ್ಷದ ಆರೋಪಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಸಾವು: ಆಮ್‌ ಆದ್ಮಿ ಪಕ್ಷದ ಆರೋಪ

ಈ ಬಗ್ಗೆ ಮಾತನಾಡಿದ ಡೊಝೀ ಸಿಇಒ & ಸಹ-ಸಂಸ್ಥಾಪಕ ಮುದಿತ್ ದಂಡವತೆ ಅವರು, ''ಬೆಂಗಳೂರಿನ ವಿಕ್ಟೋರಿಯಾ ಮತ್ತು ಇಎಸ್‍ಐಸಿ ಆಸ್ಪತ್ರೆಗಳೊಂದಿಗೆ ಪಾಲುದಾರಿಕೆ ಹೊಂದುತ್ತಿರುವುದಕ್ಕೆ ನಮಗೆ ಸಂತಸವಾಗುತ್ತಿದೆ. ಈ ಸಾಂಕ್ರಾಮಿಕದ ಸಂದರ್ಭದಲ್ಲಿ ತಮ್ಮ ಸಿಬ್ಬಂದಿಯನ್ನು ಸುರಕ್ಷಿತವಾಗಿಟ್ಟು ಸಾಧ್ಯವಾದಷ್ಟೂ ಅತ್ಯುತ್ತಮ ಆರೋಗ್ಯ ಸೇವೆಯನ್ನು ನೀಡುವುದು ಆರೋಗ್ಯ ರಕ್ಷಣೆ ಸಂಸ್ಥೆಗಳಿಗೆ ಸವಾಲಿನ ಕೆಲಸವಾಗಿದೆ. ಈ ಅವಧಿಯಲ್ಲಿ ರಿಮೋಟ್ ಹೆಲ್ತ್‍ಕೇರ್ ಮಾನಿಟರಿಂಗ್ ಅತ್ಯಂತ ಸುರಕ್ಷಿತ ಮತ್ತು ಸಮರ್ಪಕವಾದ ವ್ಯವಸ್ಥೆಯಾಗಿದೆ. ಈ ಹಿನ್ನೆಲೆಯಲ್ಲಿ ಡೊಝೀ ವೃದ್ಧರಾಗಿರುವ ನಮ್ಮ ರೋಗಿಗಳ ಆರೋಗ್ಯ ಸ್ಥಿತಿ ಬಿಗಡಾಯಿಸುವುದನ್ನು ತಪ್ಪಿಸುತ್ತದೆ ಮತ್ತು ಆರೋಗ್ಯ ಸಿಬ್ಬಂದಿ ನೇರವಾಗಿ ರೋಗಿಗಳನ್ನು ಭೇಟಿ ಮಾಡದೇ ಈ ವ್ಯವಸ್ಥೆಯಿಂದ ರೋಗಿಗಳ ಪರಿಸ್ಥಿತಿಯನ್ನು ಅವಲೋಕಿಸಬಹುದಾಗಿದೆ'' ಎಂದು ತಿಳಿಸಿದರು.

Recommended Video

Air Indiaದಲ್ಲಿ ಹಿರಿಯ ನಾಗರಿಕರಿಗೆ 50% ಕಡಿಮೆ ದರದಲ್ಲಿ ಟಿಕೆಟ್ | Oneindia Kannada
Victoria Hospital gets India’s First Contactless Remote Health Monitoring Dozee


ಇಎಸ್‍ಐ ಆಸ್ಪತ್ರೆಯ ಜನರಲ್ ಮೆಡಿಸಿನ್‍ನ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಎಚ್.ಆರ್.ಅವಿನಾಶ್ ಅವರು ಮಾತನಾಡಿ, ''ನಮ್ಮ ರೋಗಿಗಳಿಗೆ ಅತ್ಯುತ್ತಮ ಗುಣಮಟ್ಟದ ಆರೈಕೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಮತ್ತು ನಮ್ಮ ವೈದ್ಯಕೀಯ ಹಾಗೂ ನರ್ಸಿಂಗ್ ಸಿಬ್ಬಂದಿಯ ಕೆಲಸದ ಹೊರೆಯನ್ನು ಕಡಿಮೆ ಮಾಡಲು ಮತ್ತು ರೋಗಿಗಳೊಂದಿಗೆ ದೈಹಿಕ ಸಂಪರ್ಕವನ್ನು ಕಡಿಮೆ ಮಾಡಲು ಸುಧಾರಿತ ತಂತ್ರಜ್ಞಾನವನ್ನು ಸಜ್ಜುಗೊಳಿಸುತ್ತಿದ್ದೇವೆ. ನರ್ಸ್‍ಗಳು ಇನ್ನು ಮುಂದೆ ರೋಗಿಗಳ ಜೊತೆಗೆ ಗಂಟೆಗಟ್ಟಲೆ ಇರುವಂತಿಲ್ಲ ಮತ್ತು ಡೊಝೀ ಒದಗಿಸುವ ಡ್ಯಾಶ್‍ಬೋರ್ಡ್ ಮೂಲಕ ನೀಡುವ ಡೇಟಾಗಳ ಆಧಾರದಲ್ಲಿ ಮೇಲ್ವಿಚಾರಣೆ ಮಾಡಲು ವೈದ್ಯರಿಗೆ ಸಾಧ್ಯವಾಗಲಿದೆ'' ಎಂದು ತಿಳಿಸಿದರು.

English summary
Victoria Hospital gets India’s First Contactless Remote Health Monitoring Dozee that tracks heart health, respiration, sleep quality and stress levels with 98.4% accuracy as compared to medical devices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X