ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೋಂಕಿನಿಂದ ಸಾವು ಹೇಗೆ? ಸೀಕ್ರೆಟ್ ಬಿಚ್ಚಿಟ್ಟ ವಿಕ್ಟೋರಿಯಾ ಆಸ್ಪತ್ರೆ ವೈದ್ಯಾಧಿಕಾರಿ!

|
Google Oneindia Kannada News

ಬೆಂಗಳೂರು, ಮೇ. 04: ಕೊರೊನಾ ಸೋಂಕಿಗೆ ವ್ಯಾಕ್ಸಿನ್ ಹಾಕಿಸಿಕೊಂಡವರು ಏನಾಗುತ್ತಿದ್ದಾರೆ. ವ್ಯಾಕ್ಸಿನ್ ಬಗ್ಗೆ ಉಡಾಫೆ ಮಾತು ಆಡಿದವರು ಏನಾದರು ? ಅಂದಹಾಗೆ ರಾಜ್ಯದಲ್ಲಿ ಲಭ್ಯವಿರುವ ಕೋವ್ಯಾಕ್ಸಿನ್ ಒಳ್ಳೆಯದಾ? ಅಥವಾ ಕೋವಿಶೀಲ್ಡ್ ಸುರಕ್ಷಿತವೇ? ಈ ಕುರಿತು ಜನರಲ್ಲಿ ಮೂಡಿರುವ ಗೊಂದಲಗಳಿಗೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಶಿವಕುಮಾರ್ ಅಚ್ಚರಿ ಸಂಗತಿಗಳನ್ನು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಉಡಾಫೆ ಮೆರೆದವರು ಏನಾದರು ?

ಉಡಾಫೆ ಮೆರೆದವರು ಏನಾದರು ?

ಕೊರೊನಾ ಸೋಂಕಿಗೆ ವ್ಯಾಕ್ಸಿನ್ ತೆಗೆದುಕೊಂಡವರೇ ಸೋಂಕಿಗೆ ಬಲಿಯಾಗುತ್ತಿದ್ದಾರಂತೆ. ಅಯ್ಯೋ ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳುವುದಕ್ಕಿಂತಲೂ ಸುಮ್ಮನೆ ಇರುವುದೇ ವಾಸಿ..! ಇಂಥ ಮನಸ್ಥಿತಿಯಿಂದ ವ್ಯಾಕ್ಸಿನ್ ಹಾಕಿಸಿಕೊಳ್ಳದೇ ನಿರ್ಲಕ್ಷ್ಯತೆ ತೋರಿದ ಮಂದಿಯೇ ಕೊರೊನಾ ಸೋಂಕಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ವಿಪರ್ಯಾಸವೆಂದರೆ ವ್ಯಾಕ್ಸಿನ್ ಪಡೆದ ವೃದ್ಧರು ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಂಡರೂ ಮೂರೇ ದಿನದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ರೂಪಾಂತರಿ ಕೊರೊನಾ ಸೋಂಕಿಗೆ ತುತ್ತಾಗಿ ಮೃತಪಡುತ್ತಿರುವ ಶೇ. 99 ರಷ್ಟು ಮಂದಿ ವ್ಯಾಕ್ಸಿನ್ ಹಾಕಿಸಿಕೊಳ್ಳದೇ ನಿರ್ಲಕ್ಷ್ಯತೆ ತಾಳಿದವರು. ವ್ಯಾಕ್ಸಿನ್ ಹಾಕಿಸಿಕೊಳ್ಳದೇ ಯಾರೂ ದಡ್ಡತನ ಮೆರೆಯಬಾರದು ಎಂಬ ಸಂಗತಿಯನ್ನು ಡಾ. ಶಿವಕುಮಾರ್ ತಿಳಿಸಿದ್ದಾರೆ.

ಕೋ ವ್ಯಾಕ್ಸಿನ್ ಸೂಪರ್

ಕೋ ವ್ಯಾಕ್ಸಿನ್ ಸೂಪರ್

ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ಕೋವ್ಯಾಕ್ಸಿನ್ ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಭಾರತೀಯ ನೆಲೆದಲ್ಲಿ ತಯಾರಾಗಿರುವ, ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ಕೋ ವ್ಯಾಕ್ಸಿನ್ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಕೋ ವ್ಯಾಕ್ಸಿನ್ ಎರಡು ಡೋಸ್ ಪಡೆದವರಲ್ಲಿ ಕೊರೊನಾ ಸೋಂಕೇ ಕಾಣಿಸಿಕೊಳ್ಳುತ್ತಿಲ್ಲ. ಕಾಣಿಸಿಕೊಂಡರೂ ಅವರ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ. ರೂಪಾಂತರಿ ಕೊರೊನಾ ವೈರಸ್ ನಿಂದಲೂ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಕೋವಿಶೀಲ್ಡ್ ಕೂಡ ಅಷ್ಟೇ ಪರಿಣಾಮಕಾರಿಯಾಗಿದ್ದರೂ, ಒಬ್ಬ ಪ್ರಾಮಾಣಿಕ ವೈದ್ಯನಾಗಿ, ಈವರೆಗೂ ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ಪ್ರಕರಣಗಳನ್ನು ಉಲ್ಲೇಖಿಸಿ ಹೇಳುವುದಾದರೆ, ಕೋವ್ಯಾಕ್ಸಿನ್ ತೆಗೆದುಕೊಳ್ಳುವುದು ಸೂಕ್ತ. ವ್ಯಾಕ್ಸಿನ್ ತೆಗೆದುಕೊಳ್ಳುವ ವಿಚಾರದಲ್ಲಿ ಯಾರೂ ಆಲಕ್ಸಿಸಬೇಡಿ ಎಂದು ಅವರು ಕಿವಿಮಾತು ಹೇಳಿದ್ದಾರೆ. ಭಾರತ್ ಬಯೋಟೆಕ್ ತಯರಿಸುತ್ತಿರುವ ಕೋವ್ಯಾಕ್ಸಿನ್ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿ ಸಹಯೋಗದೊಂದಿಗೆ ಭಾರತೀಯವಾಗಿ ಕೋವ್ಯಾಕ್ಸಿನ್ ತಯಾರಿಸಲಾಗುತ್ತಿದೆ.

ಯುವಕರ ಸಾವು ಯಾಕೆ?

ಯುವಕರ ಸಾವು ಯಾಕೆ?

ದೇಶೀಯ ರೂಪಾಂತರಿ ಕೊರೊನಾ ವೈರೆಸ್ ತುಂಬಾ ಅಪಾಯಕಾರಿಯಾಗಿದೆ. ಆರ್‌ಟಿ-ಪಿಸಿಅರ್ ಮತ್ತು ಆಂಟಿಜನ್ ಟೆಸ್ಟ್‌ನಲ್ಲಿ ನೆಗಟಿವ್ ಬರುತ್ತಿದೆ. ಹಾಗಂತ ಆಲಕ್ಷಿಸಿದರೆ ಶ್ವಾಸಕೋಶಕ್ಕೆ ತೊಂದರೆ ಯಾಗಿ ಅನೇಕರು ಉಸಿರು ನಿಲ್ಲಿಸುತ್ತಿದ್ದಾರೆ. ಅದರಲ್ಲಿ 30 ರಿಂದ 40 ವಯೋಮಾನದ ದವರೇ ಹೆಚ್ಚಾಗಿ ಈ ಸೋಂಕಿಗೆ ಬಲಿಯಾಗುತ್ತಿದ್ದಾರೆ. ವ್ಯಾಕ್ಸಿನ್ ಪಡೆದಿದ್ದಲ್ಲಿ ಈ ಅನಾಹುತ ಆಗುತ್ತಿರಲಿಲ್ಲ. ಬಹುತೇಕರು ಉಸಿರಾಟದ ಸಮಸ್ಯೆಗೆ ಒಳಗಾಗಿ ಜೀವ ತೆತ್ತುದ್ದಾರೆ. ಇಡೀ ಸಮುದಾಯಕ್ಕೆ ಕೊರೊನಾ ಸೋಂಕು ಹಬ್ಬಿದೆ. ಹೀಗಾಗಿ ಮೊದಲು ವ್ಯಾಕ್ಸಿನ್ ತೆಗೆದುಕೊಂಡು ಜೀವ ಉಳಿಸಿಕೊಳ್ಳಿ ಎಂದು ಶಿವಕುಮಾರ್ ಸಲಹೆ ಮಾಡಿದ್ದಾರೆ.

ವಿಶ್ವದ ವ್ಯಾಕ್ಸಿನ್‌ಗಳ ಪರಿಚಯ

ವಿಶ್ವದ ವ್ಯಾಕ್ಸಿನ್‌ಗಳ ಪರಿಚಯ

ಚೀನಾದ ವುಹಾನ್ ನಲ್ಲಿ ಕೊರೊನಾ ಕಾಣಿಸಿಕೊಂಡ ಬಳಿಕ ಜಗತ್ತಿನಲ್ಲೆಡೆ ವ್ಯಾಕ್ಸಿನ್ ಅನ್ವೇಷಣೆ ಪ್ರಯತ್ನಗಳು ನಡೆದಿದೆ. ಜಗತ್ತಿನ 222 ರಾಷ್ಟ್ರಗಳಿಗೆ ಸಾಂಕ್ರಾಮಿಕ ಪಿಡುಗಾಗಿ ಕಾಣಿಸಿಕೊಂಡಿರುವ ಕೊರೊನಾ ನಿಯಂತ್ರಣಕ್ಕೆ ಸದ್ಯದಲ್ಲಿ ಹತ್ತಕ್ಕೂ ಹೆಚ್ಚು ವ್ಯಾಕ್ಸಿನ್ ಬಳಸಲಾಗುತ್ತಿದೆ. ಏಪ್ರಿಲ್ ಅಂತ್ಯದ ವೇಳೆಗೆ ಜಗತ್ತಿನಲ್ಲಿ 13 ಲಸಿಕೆ ಬಳಸಲು ಅವಕಾಶ ಕಲ್ಪಿಸಲಾಗಿದೆ. ಜಗತ್ತಿನಲ್ಲಿ ಇನ್ನೂ 308 ಮಾದರಿಯ ಲಸಿಕೆಗಳು ಟ್ರಯಲ್ ಹಂತದಲ್ಲಿವೆ. 73 ಕ್ಲಿನಿಕಲ್ ಸಂಶೋಧನೆ ಹಂತದಲ್ಲಿದ್ದು, ಅದರಲ್ಲಿ 21 ಮೊದಲ ಹಂತದ ಟ್ರಯಲ್ ನಲ್ಲಿವೆ. 33 ವ್ಯಾಕ್ಸಿನ್ 2 ನೇ ಹಂತದ ಕ್ಲಿನಿಕಲ್ ಟ್ರಯಲ್ ತಲುಪಿದ್ದು, ಉಳಿದ 16 ವ್ಯಾಕ್ಸಿನ್ 3 ನೇ ಹಂತದ ಟ್ರಯಲ್ ನಲ್ಲಿವೆ.

Recommended Video

ಮಂಡ್ಯದ ಜನ ಆಕ್ಸಿಜನ್ ನಿಂದ ಸಾಯಬಾರದು ಎಂದು ಧೃಡ ನಿರ್ಧಾರ ಮಾಡಿದ ಸುಮಲತಾ | Oneindia Kannada
ಯಾವ ದೇಶದಲ್ಲಿ ಯಾವ ವ್ಯಾಕ್ಸಿನ್ ಬಳಕೆ

ಯಾವ ದೇಶದಲ್ಲಿ ಯಾವ ವ್ಯಾಕ್ಸಿನ್ ಬಳಕೆ

ಭಾರತ - ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್

ಅಮೆರಿಕಾ - ಮೊಡೆರ್ನಾ, ಜಾನ್ಸನ್ ಅಂಡ್ ಜಾನ್ಸನ್, ಆಕ್ಷಫರ್ಡ್ ಆಸ್ಟ್ರಾಜನಿಕಾ,

ರಷ್ಯಾ - ಸ್ಪುಟ್ನಿಕ್ ವಿ.

ಬ್ರೆಜಿಲ್ - ಕರೊನಾವಾಕ್,

ಯುಕೆ - ನೋವಾವ್ಯಾಕ್ಸ್

ಅಂತಾರಾಷ್ಟ್ರೀಯವಾಗಿ ಬಳಕೆ: ಫೈಜರ್, ಆಕ್ಸಫರ್ಡ್ ಆಸ್ಟ್ರಾಜನಿಕಾ, ಬಿಬಿಐಬಿಪಿ-ಕೊರಾನಾ ವ್ಯಾಕ್ಸ್, ಜಾನ್ಸನ್ ಅಂಡ್ ಜಾನ್ಸನ್,

English summary
Victoria hospital Doctor Shiva Kumar explained inside story of corona vaccine. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X