ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನ್ಮದಿನದ ಹಣವನ್ನು ಪರಿಹಾರ ನಿಧಿಗೆ ನೀಡಿದ ವಿಭೂತಿಪುರ ಶ್ರೀಗಳು

|
Google Oneindia Kannada News

ಬೆಂಗಳೂರು, ಜೂನ್ 3: ಕೊರೊನಾ ವಿರುದ್ಧ ಹೋರಾಟ ನಡೆಸಲು ಈಗಾಗಲೇ ಕರ್ನಾಟಕದ ಅನೇಕ ಮಠಗಳು ಹಣಕಾಸಿನ ನೆರವು ನೀಡಿವೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿವೆ. ಇದೀಗ ವಿಭೂತಿಪುರದ ವೀರಸಿಂಹಾಸನ ಮಠ ಸಹ ಸಹಾಯ ಹಸ್ತಾ ಚಾಚಿದೆ.

ನಾಗಮಂಗಲದ ಶ್ರೀ ವಿಭೂತಿಪುರ ವೀರಸಿಂಹಾಸನ ಮಠದ ಪೂಜ್ಯ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಇಂದು ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿ ಮಾಡಿ ಪರಿಹಾರ ನಿಧಿಗೆ ಹಣ ನೀಡಿದ್ದಾರೆ. 5 ಲಕ್ಷ ದೇಣಿಗೆ ನೀಡಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಲಿಂಗಾಯಿತ ಶ್ರೀಗಳಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ಲಿಂಗಾಯಿತ ಶ್ರೀಗಳಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ

''ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳದೆ, ಆ ನಿಮಿತ್ತ ಭಕ್ತರ ಮೂಲಕ ಸಂಗ್ರಹವಾಗಿದ್ದ 5 ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳ 'ಕೋವಿಡ್19' ಪರಿಹಾರ ನಿಧಿಗೆ ಅರ್ಪಿಸಿದ ಶ್ರೀ ವಿಭೂತಿಪುರ ವೀರಸಿಂಹಾಸನ ಮಠದ ಪೂಜ್ಯ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಶ್ರೀಗಳ ಸಮಾಜಮುಖಿ ಕಾಯಕನಿಷ್ಠೆಗೆ ಪ್ರಣಾಮಗಳು.'' ಎಂದು ಯಡಿಯೂರಪ್ಪ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ.

ಅಂದಹಾಗೆ, ಈಗಾಗಲೇ ಅನೇಕ ಮಠಗಳು ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡುವ ಮೂಲಕ ಸರ್ಕಾರ ಜೊತೆಗೆ ಕೈಜೋಡಿಸಿವೆ. ಶ್ರೀ ಸಿದ್ಧಗಂಗಾ ಮಠದಿಂದ 50 ಲಕ್ಷ ರೂಪಾಯಿ ದೇಣಿಗೆ ನೀಡಲಾಗಿದೆ. ಆದಿಚುಂಚನಗಿರಿ ಮಹಾ ಸಂಸ್ಥಾನ ಕೂಡ 50 ಲಕ್ಷ ರೂಪಾಯಿ ಪರಿಹಾರ ನಿಧಿಗೆ ನೀಡಿದೆ. ಸುತ್ತೂರು ಮಠವೂ 50 ಲಕ್ಷವನ್ನು ದೇಣಿಗೆ ಕೊಟ್ಟಿದೆ.

Vibhutipura Mutt Swamiji Handover A Cheque To Yediyurappa For Covid Relief Fund

ಉಳಿದಂತೆ, ಮೂರು ಸಾವಿರ ಮಠ, ಶ್ರವಣಬೆಳಗೊಳ ಜೈನ ಮಠ ಹೀಗೆ ಸಾಕಷ್ಟು ಮಠಗಳು, ಲಿಂಗಾಯಿತ ಶ್ರೀಗಳು ಪರಿಹಾರ ನಿಧಿಗೆ ಹಣ ನೀಡಿದ್ದಾರೆ.

English summary
Vibhutipura mutt Mahanthalinga Shivacharya swamiji handover 5 lakh cheque to CM BS Yediyurappa for Covid Relief Fund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X