ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಬ್ ಗಯಾರ್ ಶಾಲೆಯ ಸಂಸ್ಥಾಪಕನ ಬಂಧನ

|
Google Oneindia Kannada News

ಬೆಂಗಳೂರು, ಜು. 23 : ಬೆಂಗಳೂರಿನ ಹೊರವಲಯದ ಮಾರತ್ ಹಳ್ಳಿಯ ವಿಬ್‌ ಗಯಾರ್ ಶಾಲೆಯ 1ನೇ ತರಗತಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಸಂಸ್ಥಾಪಕ ರುಸ್ತುಂ ಕೇರವಾಲಾ ಅವರನ್ನು ಬುಧವಾರ ಪೊಲೀಸರು ಬಂಧಿಸಿಸ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ದಿಯು ದಾಮನ್ ದ್ವೀಪದಲ್ಲಿ ವಿಬ್ ಗಯಾರ್ ಶಾಲೆಯ ಸಂಸ್ಥಾಪಕ ರಸ್ತುಂ ಕೇರವಾಲಾ ಅವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು. ಐಪಿಸಿ ಸೆಕ್ಷನ್ 21, 201 ಕಾಯ್ದೆಯ ಅಡಿ ರಸ್ತುಂ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.

Vibgyor school Chairman R

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಸ್ಕೇಟಿಂಗ್ ತರಬೇತುದಾರ ಮುಸ್ತಫಾನನ್ನು ಬಂಧಿಸಲಾಗಿತ್ತು. ಶಾಲೆಯ ಸಂಸ್ಥಾಪಕ ಕೇರವಾಲಾ ಸಾಕ್ಷಿಗಳನ್ನು ನಾಶ ಪಡಿಸಲು ಪ್ರಯತ್ನ ನಡೆಸಿದ್ದ, ತನಿಖೆಗೆ ಸಹಕಾರ ನೀಡದ ಹಿನ್ನಲೆಯಲ್ಲಿ ಆತನನ್ನು ಬಂಧಿಸಲಾಗಿದೆ. ವಿಬ್ ಗಯಾರ್ ಶಾಲೆಯ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಾಗ ರುಸ್ತುಂ ಶಾಲೆಗೆ ಆಗಮಿಸಿದ್ದರು. ಮಾಧ್ಯಮಗಳ ಮುಂದೆ ಮಾತನಾಡಿದ್ದರು. [ಪೋಷಕರಿಗೆ ಸುಳ್ಳು ಮಾಹಿತಿ ನೀಡಿದ ಶಾಲೆ]

ನಂತರ ಪ್ರಕರಣದ ಬಗ್ಗೆ ಭಾರೀ ಪ್ರತಿಭಟನೆ ವ್ಯಕ್ತವಾದ ನಂತರ ತಲೆ ಮರಿಸಿಕೊಂಡಿದ್ದರು. ಶಾಲೆಯ ವಿರುದ್ಧ ಸರಣಿ ಪ್ರತಿಭಟನೆ ನಡೆದರೂ ರುಸ್ತುಂ ಶಾಲೆಗೆ ಆಗಮಿಸಿರಲಿಲ್ಲ. ಅವರಿಗಾಗಿ ಹುಡುಕಾಟ ನಡೆಸುತ್ತಿದ್ದ ವಿಶೇಷ ತಂಡ ಬುಧವಾರ ರಸ್ತುಂ ಕೇರವಾಲಾ ಅವರನ್ನು ಬಂಧಿಸಿದೆ. ಅತ್ತ ವಿಗ್ ಗಯಾರ್ ಶಾಲೆಯಲ್ಲಿ ಇಂದು ಪೋಷಕರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ನಡೆಯುತ್ತಿದೆ. [ ಆರೋಪಿ ಮುಸ್ತಫಾ ಬಂಧನ]

English summary
Vibgyor school Chairman Rustom Kerawalla arrested in connection with the alleged rape of a six-year-old student said, MN Reddy police commissioner of Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X