ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಮನಬಿಲ್ಲು ಶಾಲೆಯಲ್ಲಿ 'ಕಾಮುಕ' ಟ್ವೀಟ್ ಕಿಡಿ

By Mahesh
|
Google Oneindia Kannada News

ಬೆಂಗಳೂರು, ಜು.17: 'ಶಾಲೆ ರಕ್ಷಣೆಗೆ ಗನ್ ಮ್ಯಾನ್ ಗಳನ್ನು ನೇಮಿಸುವ ಶಾಲಾ ಆಡಳಿತ, ರೇಪಿಸ್ಟ್ ಗಳಿಂದ ಮಕ್ಕಳನ್ನು ರಕ್ಷಿಸಲು ಆಗದೆ ಕೈಕಟ್ಟಿ ಕುಳಿತಿದೆ. ವಿಬ್ ಗಯಾರ್ ಎಂದು ಕಾಮನಬಿಲ್ಲಿನ ಬಣ್ಣದ ಹೆಸರಿಟ್ಟುಕೊಂಡ ಶಾಲೆಯಲ್ಲಿ ಕಾಮುಕರಿದ್ದಾರೆ ಎಚ್ಚರ' ಎಂದು ಆಕ್ರೋಶ ಭರಿತ ಪೋಷಕರು ಸೇರಿದಂತೆ ಸಾರ್ವಜನಿಕರು ಸಾಮಾಜಿಕ ಜಾಲ ತಾಣಗಳಲ್ಲಿ ಕಿಡಿ ಕಾರಿದ್ದಾರೆ.

ಬೆಂಗಳೂರಿನ ಪ್ರತಿಷ್ಠಿತ ಐಸಿಎಸ್ ಇ ಮಾಧ್ಯಮ ಶಾಲೆ VIBGYOR HIGH ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿತ್ತು. ಅದರೆ, ಒಳ್ಳೆ ವಿಷಯಕ್ಕಂತೂ ಅಲ್ಲ ಎಂಬುದನ್ನು ಹೇಳಬೇಕಾಗಿಲ್ಲ.

ಬೆಂಗಳೂರಿನ ಹೊರವಲಯದ ಮಾರತ್ ಹಳ್ಳಿಯ ವಿಬ್‌ಗಯಾರ್ ಶಾಲೆಯ 1ನೇ ತರಗತಿ ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದಲೇ ನಡೆದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಗಳು ಕಂಡು ಬಂದಿವೆ. ಈ ನಡುವೆ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆಯನ್ನು ಪೋಷಕರು ತಾತ್ಕಾಲಿಕವಾಗಿ ಹಿಂಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ರಕ್ಷಣೆ ನಮ್ಮ ಹೊಣೆಯಲ್ಲ ಎನ್ನುವ ಮೂಲಕ ಪೋಷಕರನ್ನು ಮತ್ತಷ್ಟು ಕೆರಳುವಂತೆ ಆಡಳಿತ ಮಂಡಳಿ ಮಂಡಳಿ ಮಾಡಿತ್ತು.[ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ: ಪೋಷಕರ ಪ್ರತಿಭಟನೆ]

ಶಿಕ್ಷಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ವಿಬ್‌ಗಯಾರ್ ಶಾಲಾ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲ ರುಸ್ತುಂ ಕೇರಾವಾಲ ಭರವಸೆ ನೀಡಿದ ಮೇಲೆ ಪೋಷಕರು ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ. ಇದಕ್ಕೂ ಮುನ್ನ ಉದ್ರಿಕ್ತ ಗುಂಪೊಂದು ಶಾಲಾ ಆವರಣದಲ್ಲಿನ ಪೀಠೋಪಕರಣಗಳನ್ನು ಮತ್ತು ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು. ಬೆಂಗಳೂರಿನ ಕಾಮನ ಬಿಲ್ಲಿನ ಹೆಸರಿನ ಶಾಲೆ ಕಪ್ಪು ಬಣ್ಣದ ಮಸಿ ಬಳಿದು ಕೊಂಡಿದ್ದು ಈ ಬಗ್ಗೆ ಬಂದಿರುವ ಟ್ವೀಟ್ ಗಳ ಸಂಗ್ರಹ ಇಲ್ಲಿದೆ...

ಪೊಲೀಸರಿಂದ ಇಬ್ಬರು ವಶಕ್ಕೆ ತನಿಖೆ ಆರಂಭ

ಪೊಲೀಸರಿಂದ ಇಬ್ಬರು ವಶಕ್ಕೆ ತನಿಖೆ ಆರಂಭ

ಘಟನೆ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಶಾಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಮತ್ತು ಅಗತ್ಯ ದಾಖಲೆಗಳನ್ನು ನೀಡುತ್ತೇವೆ. ಮತ್ತು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಶಾಲಾ ಪ್ರಾಂಶುಪಾಲ ರುಸ್ತುಂ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಮ್ ತರಬೇತುದಾರ ಮತ್ತು ಓರ್ವ ಸೆಕ್ಯೂರಿಟಿ ಗಾರ್ಡ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜಿಮ್ ತರಬೇತುದಾರ ಮುಖ್ಯ ಆರೋಪಿ ಎನ್ನಲಾಗಿದೆ.

Vibgyor High ಶಾಲೆ ಬಗ್ಗೆ

Vibgyor High ಶಾಲೆ ಬಗ್ಗೆ

Vibgyor High ಶಾಲೆ 2004ರಲ್ಲಿ ಮೊದಲಿಗೆ ಮುಂಬೈ ಹಾಗೂ ಗುರ್ ಗಾಂವ್ ನಲ್ಲಿ ಆರಂಭಗೊಂಡಿತು. ರುಸ್ತುಂ ಕೇರಾವಾಲ ಅವರು ಸ್ಥಾಪಿಸಿದ ಐಸಿಎಸ್ ಇ, ಐಜಿಸಿಎಸ್ ಇ ಹಾಗೂ ಸಿಬಿಎಸ್ ಇ ಮಾದರಿ ಶಾಲೆ ಹತ್ತು ವರ್ಷಗಳಲ್ಲಿ 17ಕ್ಕೂ ಅಧಿಕ ಹೊಸ ಶಾಲೆಗಳನ್ನು ವಿಸ್ತರಿಸಲಾಗಿದೆ. ಬೆಂಗಳೂರಿನ ಮಾರತ್ ಹಳ್ಳಿ ಬಳಿಯ ಶಾಲೆ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಕಳೆದ ವಾರ ನಡೆದ ಲೈಂಗಿಕ ಕಿರುಕುಳ ಪ್ರಕರಣ ತಡವಾಗಿ ಬೆಳಕಿ ಬಂದಿದೆ.

ಮೋದಿ ಸರ್ಕಾರದ ಯೋಜನೆಗಳ ಅಣಕ

ಮೋದಿ ಸರ್ಕಾರದ ಯೋಜನೆ 'ಬೇಟಿ ಬಚಾವೋ ಬೇಟಿ ಪಠಾವೋ' ಅಣಕವಾಗುತ್ತಿದೆ.

ಶಾಲಾ ಆಡಳಿತ ಮಂಡಳಿ ಉದಾಸೀನತೆ

ಶಾಲಾ ಆಡಳಿತ ಮಂಡಳಿ ಉದಾಸೀನತೆ ಬಗ್ಗೆ ಪೋಷಕರ ಕಿಡಿ

ಮಾಧ್ಯಮಗಳಲ್ಲಿ ಶಾಲೆ ಹೆಸರು ಬರ್ತಿಲ್ಲ ಏಕೆ?

ಕೆಲವು ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ವಿಬ್ ಗಯಾರ್ ಶಾಲೆ ಹೆಸರನ್ನು ಉಲ್ಲೇಖಿಸದೆ ಸುದ್ದಿ ಪ್ರಸಾರ ಮಾಡುತ್ತಿರುವುದರ ಬಗ್ಗೆ ಆಕ್ರೋಶ

ಈ ರೀತಿ ಘಟನೆ ಇದೇ ಮೊದಲಲ್ಲ

ಈ ರೀತಿ ಘಟನೆ ಇದೇ ಮೊದಲಲ್ಲ ಬೆಂಗಳೂರಿನಲ್ಲಿ ಈ ಹಿಂದೆ ಕೂಡಾ ನಡೆದಿತ್ತು.

ವಿಬ್ ಗಯಾರ್ ಶಾಲೆ ಟ್ರೆಂಡಿಂಗ್

ವಿಬ್ ಗಯಾರ್ ಶಾಲೆ ಟ್ರೆಂಡಿಂಗ್ ಅದರೆ, ಕೆಟ್ಟ ಕಾರಣಕ್ಕೆ ಎಂಬುದು ಗಮನಾರ್ಹ

ವಿವಾದಿತ ಅರ್ಜಿ ಸಹಿ ಹಾಕುವಂತೆ ಒತ್ತಡ

ಶಾಲೆಯಲ್ಲಿ ಮಕ್ಕಳ ರಕ್ಷಣೆ ನಮ್ಮ ಹೊಣೆಯಲ್ಲ ಎಂದು ಶಾಲೆ ಆಡಳಿತ ಮಂಡಳಿ ನೀಡಿರುವ ಅರ್ಜಿಗೆ ಒಪ್ಪಿಗೆ ಸೂಚಿಸಿ ಸಹಿ ಹಾಕುವಂತೆ ಪೋಷಕರಿಗೆ ಒತ್ತಾಯ

ಬೆಂಗಳೂರಿನ ಮತ್ತೊಂದು ಶಾಲೆಯ ಕಥೆ

ಬೆಂಗಳೂರಿನ ಮತ್ತೊಂದು ಶಾಲೆಯಲ್ಲೂ ವಿವಾದಿತ ನಿಯಮ ಜಾರಿಯಲ್ಲಿದೆ

ಪ್ರತಿಭಟನೆಯನ್ನು ಪೋಷಕರು ಹಿಂಪಡೆದಿದ್ದಾರೆ

ಪ್ರತಿಭಟನೆಯನ್ನು ಪೋಷಕರು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ

ಸಂಸದ ರಾಜೀವ್ ಚಂದ್ರ ಶೇಖರ್ ಖೇದ

ಸಂಸದ ರಾಜೀವ್ ಚಂದ್ರ ಶೇಖರ್ ಖೇದ ವ್ಯಕ್ತಪಡಿಸಿ, ಸೂಕ್ತ ಕ್ರಮ ಜರುಗಿಸುವಂತೆ ಕೋರಿಕೆ

ಹಣದ ಹಿಂದೆ ಬಿದ್ದರೆ ಅನಾಹುತ ಖಂಡಿತ

ಶಾಲಾ ಆಡಳಿತ ಮಂಡಳಿ ಹಣದ ಹಿಂದೆ ಬಿದ್ದರೆ ಅನಾಹುತ ಖಂಡಿತ

English summary
They have armed police to protect the school management and the rapists, but no security to protect the innocent kids #vibgyorhigh is now trending in Bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X