ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಲದ ಸುಳಿ: ಕನ್ನಡಿಗರು ಉದ್ಯಮ ಕಟ್ಟಲು ಹೆದರುತ್ತಾರೇಕೆ?

|
Google Oneindia Kannada News

ಚಿಕ್ಕಮಗಳೂರಿನ ಕಾಫಿಗೆ ಜಾಗತಿಕ ಬ್ರ್ಯಾಂಡ್ ಮೌಲ್ಯ ತಂದುಕೊಟ್ಟ, ಕೆಫೆ ಕಾಫಿ ಡೇ ಎಂಬ ಮಳಿಗೆ ಮೂಲಕ ಕಾಫಿ ಸಂಸ್ಕೃತಿಗೆ ಹೊಸ ಮಾರ್ಗ ತೋರಿದ ಯಶಸ್ವಿ ಉದ್ಯಮಿ ವಿ.ಜಿ ಸಿದ್ದಾರ್ಥ ಅವರು ಕಳಿಸಿದ್ದಾರೆ ಎನ್ನಲಾದ ಕೊನೆಯ ಇಮೇಲ್ ನಲ್ಲಿ ತಮ್ಮ ವ್ಯಾಪಾರ, ವಹಿವಾಟು ವೈಫಲ್ಯದ ಬಗ್ಗೆ ಬರೆದಿದ್ದಾರೆ.. ಈ ನಿಟ್ಟನಲ್ಲಿ ಸೌಮ್ಯ ಸ್ವಭಾವದ ಕನ್ನಡಿಗರು ಈ ದೇಶದಲ್ಲಿ ಉದ್ಯಮ ಕಟ್ಟಿ ಬೆಳೆಸಿ, ಉಳಿಸಿಕೊಳ್ಳುವುದು ಎಷ್ಟು ಕಷ್ಟ ಎಂಬುದನ್ನು ಒನ್ಇಂಡಿಯಾ ಕನ್ನಡ ಓದುಗ ಗಿರೀಶ್ ಕಾರ್ಗದ್ದೆ ಇಲ್ಲಿ ತಿಳಿಸಿದ್ದಾರೆ.

ಸಂಕ್ಷಿಪ್ತ ವ್ಯಕ್ತಿಚಿತ್ರ : ಭಾರತದ 'ಕಾಫಿ ಕಿಂಗ್' ವಿ. ಜಿ. ಸಿದ್ದಾರ್ಥ ಹೆಗ್ಡೆ from ಚೇತನಹಳ್ಳಿ ಎಸ್ಟೇಟ್ಸಂಕ್ಷಿಪ್ತ ವ್ಯಕ್ತಿಚಿತ್ರ : ಭಾರತದ 'ಕಾಫಿ ಕಿಂಗ್' ವಿ. ಜಿ. ಸಿದ್ದಾರ್ಥ ಹೆಗ್ಡೆ from ಚೇತನಹಳ್ಳಿ ಎಸ್ಟೇಟ್

ಮೂರ್ನಾಲ್ಕು ತಲೆಮಾರುಗಳಿಂದ ಕಾಫಿಯನ್ನೇ ಬೆಳೆಯುತ್ತಿರುವ ದೊಡ್ಡ ಕಾಪಿ ಬೆಳೆಗಾರರೂ ಸಹ ಕಷ್ಟವೋ ನಷ್ಟವೋ ಕಾಪಿ ಬೆಳೆದು ಮೂಟೆಕಟ್ಟಿ ಬಂದ ಬೆಲೆಗೆ ಮಾರುತ್ತಾರೆಯೇ ಹೊರತು, ತಲೆಮಾರುಗಳಿಂದ ತಾವು ಬೆಳೆಯುತ್ತಿರುವ ಕಾಫಿಯ ಮಾರುಕಟ್ಟೆಯ ಬಗೆಗಾಗಲೀ, ಅದು ಎಲ್ಲೆಲ್ಲಾ, ಹೇಗೆಲ್ಲಾ ಮೌಲ್ಯವರ್ಧನೆಯಾಗುತ್ತದೆಯೆಂಬುದನ್ನು ಇಂದಿಗೂ ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ.

ವೃತ್ತಿಪರ ತಂಡವಿದೆ, ಉದ್ಯಮ ನಿಲ್ಲಿಸೊಲ್ಲ: ಷೇರು ಮಾರುಕಟ್ಟೆಗಳಿಗೆ ಕಾಫಿ ಡೇ ಪತ್ರ ವೃತ್ತಿಪರ ತಂಡವಿದೆ, ಉದ್ಯಮ ನಿಲ್ಲಿಸೊಲ್ಲ: ಷೇರು ಮಾರುಕಟ್ಟೆಗಳಿಗೆ ಕಾಫಿ ಡೇ ಪತ್ರ

ಇಂತವರ ನಡುವೆ ಬೇರೆಯಾಗಿ ನಿಂತವರು ಸಿದ್ದಾರ್ಥ ಹೆಗ್ಡೆ. ಪೂರ್ಣಚಂದ್ರ ತೇಜಸ್ವಿಯರು ಕಾಫಿಯ ಮುಕ್ತ ಮಾರುಕಟ್ಟೆಗಾಗಿ ಅವಿರತವಾಗಿ ಹೋರಾಟ ನಡೆಸುತ್ತಿದ್ದಾಗ ಅವರ ಒಡನಾಡಿಯಾಗಿದ್ದ ಸಿದ್ದಾರ್ಥ, ಕಾಫಿಯ ಮುಕ್ತಮಾರುಕಟ್ಟೆಯಿಂದ ಸೃಷ್ಟಿಯಾದ ಅವಕಾಶ ಮತ್ತು ಸಾದ್ಯತೆಗಳಿಂದಾಗಿ ಒಂದು ಒಳ್ಳೆಯ ಕಾಫಿ ಉದ್ಯಮವನ್ನು ಹುಟ್ಟು ಹಾಕಿದರು. ಮಲೆನಾಡಿನ ಬಾಗದಲ್ಲಿ ಕಳೆದ ಕೆಲವು ದಶಕಗಳಿಂದ ಕೆಲಸಗಳು ಏನಾದರೂ ಹುಟ್ಟಿಕೊಂಡಿದ್ದರೆ ಅದು ಎಬಿಸಿ ಕಂಪನಿಯಿಂದ ಮಾತ್ರ.

VG Siddhartha missing: Why Kannadigas afraid do Business reader reaction

ಐವತ್ತು ಸಾವಿರಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗ ಕೊಟ್ಟ, ಪರೋಕ್ಷವಾಗಿ ಸಾವಿರಾರು ಕುಟುಂಬಗಳ ಬದುಕಿಗೆ ಆಸರೆಯಾಗಿದ್ದರೂ ಸಹ ಸಾಮಾನ್ಯರಂತೆ ಸಿದ್ದಾರ್ಥ ಬದುಕುತ್ತಾರೆ. ಹೀಗೆ ಮೂವತ್ತೇಳು ವರ್ಷಗಳಿಂದ ಅದೆಷ್ಟು ಕೋಟಿ ತೆರಿಗೆಯನ್ನು ಕಂಪನಿ ಕಟ್ಟಿರಬಹುದು, ಇನ್ನು ಕಂಪನಿಯ ಉದ್ಯೋಗಿಗಳು ಕಟ್ಟಿರುವ ವರಮಾನ ತೆರಿಗೆ, ವ್ಯಾಪಾರದಿಂದ ಸೇಲ್ಸ್ ಟ್ಯಾಕ್ಸ್, ಸರ್ವಿಸ್ ಟ್ಯಾಕ್ಸ್, ಜಿ.ಎಸ್.ಟಿ, ಕಾರ್ಪೋರೇಟ್ ಟ್ಯಾಕ್ಸ್, ಆಮದು-ರಫ್ತಿನ ಶುಲ್ಕಗಳು ಹೀಗೆ ಕಂಪನಿ ಮತ್ತು ಅದರ ಮೇಲೆ ಅವಲಂಬಿತರಾದವರು ಅದೆಷ್ಟು ತೆರಿಗೆಯನ್ನು ಸರ್ಕಾರದ ಬೊಕ್ಕಸಕ್ಕೆ ತುಂಬಿರಬಹುದು.

ಮಾಲೀಕ ವಿಜಿ ಸಿದ್ದಾರ್ಥ ಕಣ್ಮರೆ, ಕಾಫಿ ಡೇ ಷೇರುಗಳು ಕುಸಿತ ಮಾಲೀಕ ವಿಜಿ ಸಿದ್ದಾರ್ಥ ಕಣ್ಮರೆ, ಕಾಫಿ ಡೇ ಷೇರುಗಳು ಕುಸಿತ

ಈ ರೀತಿಯ ಉದ್ಯಮವನ್ನು ಕಟ್ಟಿದವರು ಹಲವರ ಬದುಕಿಗೆ ಬೆಳಕಾದವರು ಉದ್ದೇಶಪೂರ್ವಕವಲ್ಲದೆ ಸಂಕಷ್ಟಕ್ಕೆ ಸಿಲುಕಿದಾಗ ಅವರನ್ನು ಮೇಲೆತ್ತುವಂತಹ ಹಲವಾರು ಪಾಲಿಸಿಗಳು ಬೇರೆ ಬೇರೆ ದೇಶಗಳಲ್ಲಿವೆ. ಅಲ್ಲಿನ ಉದ್ಯಮಿಗಳಿಗೆ ಅದು ವರದಾನವಾಗುತ್ತದೆ. ಡೊನಾಲ್ಡ್ ಟ್ರಂಪ್ ನಂತವರೂ ಸಹ ಒಂದು ಕಾಲಕ್ಕೆ ಸಾಲಗಳ ಸುಳಿಗೆ ಸಿಕ್ಕವರು. ದುರದೃಷ್ಟವಶಾತ್ ಮುಳುಗಿದ ಉದ್ಯಮಿಗಳು ಮತ್ತೆ ಮೇಲಕ್ಕೆ ಬರುವಂತೆ ರೂಪಿಸಿರುವ ಅಲ್ಲಿನ ಪಾಲಿಸಿಗಳನ್ನು ಗಮನಿಸಿದಾಗ ನಮ್ಮ ದೇಶದಲ್ಲಿ ಅದೇಕೆ ಉದ್ಯಮ ಕಟ್ಟಲು ಅದರಲ್ಲೂ ಕನ್ನಡಿಗರಂತಹ ಸೌಮ್ಯ ಸ್ವಭಾವದವರು ಹೆದರುತ್ತಾರೆ ಎಂಬುದು ನಮಗರಿವಾಗುತ್ತದೆ.

English summary
VG Siddhartha missing: Why Kannadigas afraid do business an often face debt crisis a report from Oneindia Kannada reader Girish Kargadde
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X