ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವರ ದಾಸಿಮಯ್ಯ ಜಯಂತಿಗೆ ಚಿಮೂ ವಿರೋಧ

By Mahesh
|
Google Oneindia Kannada News

ಬೆಂಗಳೂರು, ಮಾ.25: ಕರ್ನಾಟಕ ಸರ್ಕಾರ ದೇವರ ದಾಸಿಮಯ್ಯ ಅವರ ಜಯಂತಿ ಮಾಡುತ್ತಿರುವುದು ಸರಿಯಿಲ್ಲ. ಚೇಡರ ದಾಸಿಮಯ್ಯ ಅವರ ಜಯಂತಿ ಮಾಡಬೇಕು ಎಂದು ಖ್ಯಾತ ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ ಆಗ್ರಹಿಸಿ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಬ್ಯಾಂಕ್ವೆಟ್‌ಹಾಲ್‌ನಲ್ಲಿ ನಡೆಯಿತು.

ವಿಧಾನಸೌಧದ ಬ್ವಾಂಕ್ವೆಟ್ ಹಾಲ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಸಮಾರಂಭದಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಹಾಜರಿದ್ದರು. ಈ ಸಂದರ್ಭದಲ್ಲಿ ದೇವರ ದಾಸಿಮಯ್ಯ ಬದಲಿಗೆ ಜೇಡರ ದಾಸಿಮಯ್ಯ ಜಯಂತಿ ನಡೆಸಬೇಕು ಎಂದು ಡಾ. ಎಂ. ಚಿದಾನಂದ ಮೂರ್ತಿ ಇತರರು ಪ್ರತಿಭಟನೆಗೆ ಮುಂದಾದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ಸಚಿವರುಗಳ ಸಮ್ಮುಖದಲ್ಲಿ ಪ್ರತಿಭಟನೆ ನಡೆಸಿದ ಡಾ. ಎಂ. ಚಿದಾನಂದ ಮೂರ್ತಿ ಹಾಗೂ ಇತರೆ ಪ್ರತಿಭಟನಾಕಾರರನ್ನು ಪೊಲೀಸರು ಬಲವಂತವಾಗಿ ಹೊರಹಾಕಿದ ಘಟನೆ ಗದ್ದಲ, ಗೊಂದಲಕ್ಕೆ ಕಾರಣವಾಯಿತು.

Veteran Kannada writer Chidananda Murthy Manhandled in Vidhana Soudha

ಚಿಮೂ ಸ್ಪಷ್ಟನೆ: ದೇವರ ದಾಸಿಮಯ್ಯ ವಚನಕಾರ ಅಲ್ಲ. ಅವನು ಒಬ್ಬ ಶಿವಭಕ್ತ. ಅವನು ಏನೂ ಬರೆದಿಲ್ಲ. ಜೇಡರ ದಾಸಿಮಯ್ಯ ನಿಜವಾದ ವಚನಕಾರ, ಆತನ ಹೆಸರಿನಲ್ಲಿ ಜಯಂತಿ ನಡೆಸಬೇಕು ಎಂದು ಹಿರಿಯ ಸಾಹಿತಿ ಡಾ. ಎಂ. ಚಿದಾನಂದಮೂರ್ತಿ, ಡಾ. ಎಚ್. ವಿದ್ಯಾಶಂಕರ್, ವಕೀಲೆ ಪ್ರಮೀಳಾ ನೇಸರ್ಗಿ ಮತ್ತಿತರರು ಸಮಾರಂಭದಲ್ಲೇ ಘೋಷಣೆ ಕೂಗಿ ಸರ್ಕಾರದ ತೀರ್ಮಾನವನ್ನು ಪ್ರತಿಭಟಿಸಿದರು.


ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಇಬ್ಬರೂ ಬೇರೆ, ಬೇರೆ. ಇದಕ್ಕೆ ಸಾಕಷ್ಟು ಸಂಶೋಧನೆಗಳ ದಾಖಲೆ ಇದೆ. ಹಾಗಾಗಿ ಸರ್ಕಾರ ದೇವರ ದಾಸಿಮಯ್ಯ ಜಯಂತಿ ನಡೆಸುವುದು ಸರಿಯಲ್ಲ ಎಂದರು. ದೇವರ ದಾಸಿಮಯ್ಯ ವಚನಕಾರನಲ್ಲ, ಜೇಡರ ದಾಸಿಮಯ್ಯ ವಚನಕಾರ ಎಂದು ಚಿಮೂ ವಾದ ಮಂಡಿಸಿದ್ದರು.

ಹಿರಿಯ ಸಾಹಿತಿ ಚಿದಾನಂದ ಮೂರ್ತಿ, ಪ್ರಮೀಳಾ ನೇಸರ್ಗಿ ಹಾಗೂ ಅವರ ಬೆಂಬಲಿಗರನ್ನು ಬಲವಂತವಾಗಿ ಕಾರ್ಯಕ್ರಮದಿಂದ ಹೊರಹಾಕಿದ ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.

English summary
Bengaluru: Veteran Kannada writer Chidananda Murthy dragged and held at Banquet Hall, Vidhanasoudha today. He along with Pramila Nesargi and other were protesting against Jedara Dasimaiah Jayati proposed by Karnataka government. BJP has condemned the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X