ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ನಿಷೇಧ?

|
Google Oneindia Kannada News

ಬೆಂಗಳೂರು, ಡಿ.8 : ಉದ್ಯಾನ ನಗರಿ ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಕುಳಿತರೆ ವಾಹನಗಳ ಸದ್ದು ಕಿವಿಗೆ ಅಪ್ಪಳಿಸುತ್ತದೆ. ಆದರೆ, ಇನ್ನು ಮುಂದೆ ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸುವ ಪ್ರಸ್ತಾಪ ಕೇಳಿಬಂದಿದೆ. ತೋಟಗಾರಿಕಾ ಇಲಾಖೆ ಈ ಕುರಿತ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ.

ಕಬ್ಬನ್ ಪಾರ್ಕ್‌ನ ಏಳು ಪ್ರವೇಶ ದ್ವಾರಗಳಿಂದ ನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಪಾರ್ಕ್‌ ವಾಹನಗಳಿಗೆ ನಿಲ್ದಾಣವೂ ಆಗಿ ಪರಿಣಮಿಸಿದೆ. ಇದರಿಂದಾಗಿ ಪಾರ್ಕ್ ಅಂದಕ್ಕೆ ಧಕ್ಕೆ ಬರುತ್ತಿದ್ದು, ಪಾರ್ಕ್‌ನಲ್ಲಿ ವಾಹನ ಸಂಚಾರ ನಿಷೇಧಿಸಲು ಚಿಂತನೆ ನಡೆದಿದೆ. [ಕಬ್ಬನ್ ಪಾರ್ಕಿನಲ್ಲಿ 1 ಕಪ್ ಕಾಫಿಗೆ 100 ರೂ.]

Cubbon Park

ತೋಟಗಾರಿಕಾ ಇಲಾಖೆ ಈ ಕುರಿತು ಪ್ರಸ್ತಾವನೆಯನ್ನು ರಚಿಸಿ ಸರ್ಕಾರಕ್ಕೆ ನೀಡಿದ್ದು, ಪ್ರಾಯೋಗಿಕವಾಗಿ ಶನಿವಾರ ಮತ್ತು ಭಾನುವಾರ ಕಬ್ಬನ್ ಉದ್ಯಾನವನದಲ್ಲಿ ವಾಹನಗ ಸಂಚಾರಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದೆ. ಕಬ್ಬನ್ ಪಾರ್ಕ್ ವಾಯು ವಿಹಾರಿಗಳ ಸಂಘವೂ ಈ ಪ್ರಸ್ತಾವನೆಯನ್ನು ಸ್ವಾಗತಿಸಿದೆ.[ಕಬ್ಬನ್ ಪಾರ್ಕಿನಲ್ಲಿ ಅಪಘಾತ ಪಾರಿವಾಳ ಸಾವು]

ಏಳು ಪ್ರವೇಶ ದ್ವಾರಗಳು : ಕಬ್ಬನ್ ಪಾರ್ಕ್‌ ವಾಹನ ಸವಾರರ ಪಾಲಿನ ಶಾರ್ಟ್‌ ಕಟ್ ಆಗಿದೆ. ಹಡ್ಸನ್ ಸರ್ಕಲ್ ಗೇಟ್, ಸಿದ್ದಲಿಂಗಯ್ಯ ಗೇಟ್, ಬಾಲಭವನ ಗೇಟ್, ಪ್ರೆಸ್‌ಕ್ಲಬ್ ಗೇಟ್, ಎಂ.ಎಸ್ ಬಿಲ್ಡಿಂಗ್ ಗೇಟ್, ಹೈಕೋರ್ಟ್ ಗೇಟ್ ಹಾಗೂ ಕೆ.ಆರ್. ಸರ್ಕಲ್ ಗೇಟ್ ಮೂಲಕ ನಿತ್ಯಾ ಲಕ್ಷಾಂತರ ವಾಹನಗಳು ಪಾರ್ಕ್‌ವೊಳಗೆ ನುಗ್ಗುತ್ತವೆ.

ಹೈಕೋರ್ಟ್, ಮ್ಯೂಸಿಯಂ, ಬಾಲಭವನ, ಮತ್ಸ್ಯಾಲಯ, ಸೆಂಟ್ರಲ್ ಲೈಬ್ರರಿ ಹೀಗೆ ಉದ್ಯಾನದಲ್ಲಿರುವ ಸ್ಥಳಗಳಿಗೆ ನಿತ್ಯ ಸಾವಿರಾರು ಜನರು ಆಗಮಿಸುತ್ತಿದ್ದು, ವಾಹನ ಸಂಚಾರದಿಂದ ಅವರಿಗೆ ತೊಂದರೆ ಉಂಟಾಗಿದೆ. ವಾಹನಗಳ ಹೊಗೆ, ಹಾರನ್‌ನಿಂದಾಗಿ ಪಾರ್ಕ್‌ನಲ್ಲಿ ಶಬ್ದ ಮಾಲಿನ್ಯ ಉಂಟಾಗುತ್ತದೆ. ಆದ್ದರಿಂದ ಸಂಚಾರ ನಿಷೇಧಿಸುವ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.

ಪೊಲೀಸರ ಮನವಿ : ಕಬ್ಬನ್ ಪಾರ್ಕ್ ಸುತ್ತಮುತ್ತಲಿನ ರಸ್ತೆಗಳಲ್ಲಿ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ ಕಬ್ಬನ್ ಪಾರ್ಕ್‌ನಲ್ಲಿ ಸಂಚಾರ ನಿರ್ಬಂಧಿಸಿದರೆ ಸವಾರರಿಗೆ ತೊಂದರೆ ಆಗಲಿದೆ. ಆದ್ದರಿಂದ ಕಾಮಗಾರಿ ಮುಗಿದ ಬಳಿಕ ಇದನ್ನು ಜಾರಿಗೆ ತನ್ನಿ ಎಂದು ಬೆಂಗಳೂರು ಸಂಚಾರಿ ಪೊಲೀಸರು ತೋಟಗಾರಿಕಾ ಇಲಾಖೆಗೆ ಮನವಿ ಮಾಡಿದ್ದಾರೆ.

English summary
The Karnataka Government may ban movement of vehicles inside the Cubbon Park, Bengaluru. Horticulture Department submitted the proposal regarding vehicles ban in park.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X