ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಾಳಿ ಆಂಜನೇಯಸ್ವಾಮಿ ಜಾತ್ರೆ, ಮೈಸೂರು ರಸ್ತೆ ಸಂಚಾರ ನಿಷೇಧ

|
Google Oneindia Kannada News

ಬೆಂಗಳೂರು, ಏ.13: ಮೈಸೂರು ರಸ್ತೆಯ ಗಾಳಿ ಆಂಜನೇಯಸ್ವಾಮಿ ಜಾತ್ರೆ ಇಂದು(ಏ.13) ನಡೆಯಲಿದ್ದು, ಮೈಸೂರು ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

ಶನಿವಾರದಿಂದ ಮೂರು ದಿನಗಳ ಕಾಲ ಜಾತ್ರೆ ನಡೆಯಲಿದೆ. ಏ.13ರಿಂದ 15ರವರೆಗೆ ಕಿಮ್ಕೋ ಜಂಕ್ಷನ್ ನಿಂದ ಹೊಸಗುಡ್ಡದಹಳ್ಳಿ ಜಂಕ್ಷನ್ ವರೆಗೆ ನಿರ್ದಿಷ್ಟ ಅವಧಿಗೆ ಎಲ್ಲ ರೀತಿಯ ವಾಹನ ಸಂಚಾರ ನಿಷೇಧಿಸಲಾಗಿದೆ.

ಏಪ್ರಿಲ್ 11ರಿಂದ ಬೆಂಗಳೂರು ಕರಗ ಉತ್ಸವ, ಭರದ ಸಿದ್ಧತೆಏಪ್ರಿಲ್ 11ರಿಂದ ಬೆಂಗಳೂರು ಕರಗ ಉತ್ಸವ, ಭರದ ಸಿದ್ಧತೆ

ಮೈಸೂರು ರಸ್ತೆಯಲ್ಲಿ ನಗರದ ಕಡೆಯಿಂದ ಬರುವ ವಾಹನಗಳು ಹೊಸಗುಡ್ಡದಹಳ್ಳಿ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಟಿಂಬರ್ ಯಾರ್ಡ್ ಬಡಾವಣೆ ಮೂಲಕ ಮುನೇಶ್ವರ ಬ್ಲಾಕ್‌ನ 50 ಅಡಿ ರಸ್ತೆ ಸೇರಿ ಮೈಸೂರು ರಸ್ತೆ ಕಡೆ ತೆರಳಬಹುದು.

Vehicles are banned in mysuru road today

ಅರಮನೆ ಮೈದಾನದಲ್ಲಿ ಮೋದಿ ಸಮಾವೇಶ, ಏರ್‌ಪೋರ್ಟ್‌ ಮಾರ್ಗ ಬದಲುಅರಮನೆ ಮೈದಾನದಲ್ಲಿ ಮೋದಿ ಸಮಾವೇಶ, ಏರ್‌ಪೋರ್ಟ್‌ ಮಾರ್ಗ ಬದಲು

ಅದೇ ರೀತಿ ಮೈಸೂರು ರಸ್ತೆಯಲ್ಲಿ ನಗರದ ಕಡೆಗೆ ಬರುವ ವಾಹನಗಳು ಕಿಮ್ಕೋ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಸೇತುವೆ ಮೇಲೆ ಸಂಚರಿಸಿ ಬಾಪೂಜಿನಗರ ಜಂಕ್ಷನ್‌ ಬಳಿ ಮೈಸೂರು ರಸ್ತೆ ಸೇರಿ ನಗರಕ್ಕೆ ಪ್ರವೇಶಿಸಬಹುದು.ಏ. 13ರಂದು ಬೆಳಗ್ಗೆ 10 ರಿಂದ 4 ಮತ್ತು ಏ.14ರ ಬೆಳಗ್ಗೆ 8ರಿಂದ ಏ.15ರ ಬೆಳಗ್ಗೆ 10 ಗಂಟೆವರೆಗೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

English summary
Bengaluru police put ban on Vehicles in Mysuru road today because of Gali Anjaneya rathotsav. They requested to use alternative roads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X