ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರದ ಸಮಯ ಬದಲು?

|
Google Oneindia Kannada News

ಬೆಂಗಳೂರು, ಜನವರಿ 26 : ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಚರ್ಚೆ ನಡೆದಿದೆ. ಇದರ ನಡುವೆಯೇ ಪಾರ್ಕ್‌ನಲ್ಲಿ ವಾಹನ ಸಂಚರಿಸುವ ಸಮಯವನ್ನು ಪರಿಷ್ಕರಣೆ ಮಾಡಲು ತೋಟಗಾರಿಕಾ ಇಲಾಖೆ ಮುಂದಾಗಿದೆ.

ಪ್ರಸ್ತುತ ಬೆಳಗ್ಗೆ 8 ರಿಂದ ರಾತ್ರಿ 10 ಗಂಟೆಯ ತನಕ ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದನ್ನು ಪರಿಷ್ಕರಣೆ ಮಾಡಿ ಸೋಮವಾರದಿಂದ ಶುಕ್ರವಾರದ ತನಕ ಬೆಳಗ್ಗೆ 9 ರಿಂದ ರಾತ್ರಿ 9ರ ತನಕ ಸಂಚಾರಕ್ಕೆ ಅವಕಾಶ ನೀಡುವ ಚಿಂತನೆ ಇದೆ.

ಶೀಘ್ರದಲ್ಲೇ ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ನಿಷೇಧಶೀಘ್ರದಲ್ಲೇ ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ನಿಷೇಧ

ತೋಟಗಾರಿಕಾ ಇಲಾಖೆ ಈ ತೀರ್ಮಾನದಿಂದಾಗಿ ಕಬ್ಬನ್ ಪಾರ್ಕ್‌ನಲ್ಲಿ ಬೆಳಗ್ಗೆ ವಾಯು ವಿಹಾರ ನಡೆಸುವ ಜನರಿಗೆ ಸಂತೋಷವಾಗಲಿದೆ. ಮುಂಜಾನೆಯ ಮಾಲಿನ್ಯವನ್ನು ತಪ್ಪಿಸಲು ವಾಹನ ಸಂಚಾರದ ಸಮಯ ಕಡಿತಗೊಳಿಸುವ ತೀರ್ಮಾನಕ್ಕೆ ಬರಲಾಗಿದೆ.

ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ನಿಷೇಧಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ನಿಷೇಧ

Vehicle May Allow At Cubbon Park 9 to 9

ತೋಟಗಾರಿಕಾ ಇಲಾಖೆ ಸಚಿವ ವಿ. ಸೋಮಣ್ಣ ಕಬ್ಬನ್ ಪಾರ್ಕ್‌ನಲ್ಲಿ ವಾಯುವಿಹಾರ ನಡೆಸಿದ್ದರು. ಬೆಳಗ್ಗೆ ವಾಯು ವಿಹಾರ ನಡೆಸುವವರ ಜೊತೆ ಮಾತುಕತೆ ನಡೆಸಿದ್ದರು. ಈ ವೇಳೆ ವಾಹನ ಸಂಚಾರದ ಅವಧಿ ಕಡಿತಗೊಳಿಸುವ ಕುರಿತು ಚರ್ಚೆ ನಡೆದಿತ್ತು.

ಕಬ್ಬನ್ ಪಾರ್ಕಿನಲ್ಲಿ 1 ಕಪ್ ಕಾಫಿಗೆ 100 ರುಕಬ್ಬನ್ ಪಾರ್ಕಿನಲ್ಲಿ 1 ಕಪ್ ಕಾಫಿಗೆ 100 ರು

ನಮ್ಮ ಮೆಟ್ರೋ ಕಾಮಗಾರಿಯ ಹಿನ್ನಲೆಯಲ್ಲಿ ಹೈಕೋರ್ಟ್, ಶಾಸಕರ ಭವನ, ಲೋಕಾಯುಕ್ತ ಕಚೇರಿ, ವಿಧಾನಸೌಧಕ್ಕೆ ಭೇಟಿ ನೀಡುವವರಿಗೆ ಅನುಕೂಲವಾಲಿ ಎಂದು ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.

ಈಗ ಮೆಟ್ರೋ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ.

English summary
Horticulture department may allow vehicle inside the Cubbon park 9 am to 9 pm on weekdays. Now vehicle running 8 am to 9 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X