ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತರಕಾರಿ ಬೆಲೆ ಏರಿಕೆ: ಟೊಮೊಟೊ, ಬೀನ್ಸ್ ಕೊಳ್ಳುವ ಮುನ್ನ ಪರ್ಸ್ ಚೆಕ್ ಮಾಡ್ಕೊಳ್ಳಿ!

|
Google Oneindia Kannada News

ಬೆಂಗಳೂರು, ಮೇ 25: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದೆ. ದಿನನಿತ್ಯ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆ ಹಾನಿಯಾಗುತ್ತಿದೆ. ಬೆಳೆ ಹಾನಿಯ ಪರಿಣಾಮದಿಂದ ದಿನದಿಂದ ದಿನಕ್ಕೆ ತರಕಾರಿಯ ಬೆಲೆ ಹೆಚ್ಚಳವಾಗುತ್ತಿರುವುದು ಕಂಡುಬರುತ್ತಿದೆ. ಟೊಮ್ಯಾಟೋ ಬೆಲೆಯಂತೂ ಗಗನಮುಖಿಯಾಗುತ್ತಾ ಸಾಗುತ್ತಲೇ ಇದೆ. ಸಿಲಿಕಾನ್ ಸಿಟಿಯ ಮಂದಿಗೂ ತರಕಾರಿಯ ಬೆಲೆ ಏರಿಕೆ ಬಿಸಿ ತಟ್ಟಲಾರಂಭಿಸಿದೆ.

ಮಳೆಯ ಕಾರಣ ಸೇರಿದಂತೆ ಇನ್ನಿತರ ಕಾರಣಗಳು ಸೇರಿಕೊಂಡು ಟೊಮ್ಯಾಟೊ ಬೆಲೆ ಪ್ರತಿ ಕೆಜಿಗೆ 110-120ರೂ ಗೆ ಏರಿಕೆಯಾಗಿದೆ. ಬೆಲೆಯಲ್ಲಿ ಶತಕ ದಾಟಿ ಮುನ್ನುಗ್ಗುತ್ತಿದೆ. ಟೊಮ್ಯಾಟೊ ಖರೀದಿಗೆ ಜನ ಹೆದರುವಂತಾಗಿದೆ. ಬೆಂಗಳೂರಿಗೆ ಸುಮಾರು 2000 ಟನ್ ಟೊಮ್ಯಾಟೊ ಬೇಡಿಕೆಯಿದ್ದು. ಮಾರುಕಟ್ಟೆಗೆ ಕೇವಲ 500 ಟನ್ ಟೊಮ್ಯಾಟೊ ಲಭ್ಯವಾಗುತ್ತಿದೆ. ಬೆಂಗಳೂರಿನ ಸುತ್ತಲಿನ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಸೇರಿದಂತೆ ಹಲವೆಡೆಯಿಂದ ಟೊಮ್ಯಾಟೊ ಹೆಚ್ಚು ಹೆಚ್ಚು ಮಾರುಕಟ್ಟೆ ಬರಲಿದೆ. ಆದರೆ ಬೆಂಗಳೂರಿನ ಸುತ್ತಲಿನ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವ ಕಾರಣದಿಂದಾಗಿ ಇಳುವರಿ ಕಡಿಮೆಯಾಗಿದೆ. ಇದರಿಂದಾಗಿಯೇ ಟೊಮ್ಯಾಟೊ ಬೆಲೆ ಏರಿಕೆಯಾಗುತ್ತಿದೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರದಿಂದ ಬರುತ್ತಿರುವ ಟೊಮ್ಯಾಟೊ ಕೆಜಿಗೆ 110 ರಿಂದ 120 ರೂಪಾಯಿಗೆ ಮಾರಾಟವಾಗುತ್ತಿದ್ದು. ರೈತರಿಗೆ ಭರ್ಜರಿ ಲಾಭವನ್ನು ತಂದುಕೊಡುತ್ತಿದೆ. ಆದರೆ ಗ್ರಾಹಕರು ಮಾತ್ರ ಟೊಮ್ಯಾಟೊ ಸಹವಾಸಬೇಡ ಎನ್ನುವ ಹಂತಕ್ಕೆ ಬಂದಿದ್ದಾರೆ. ಆದರೆ ಏನ್ ಮಾಡೋದು ಮನೆಯಲ್ಲಿ ಟೊಮ್ಯಾಟೊ ಬೇಕೆಬೇಕಲ್ಲ ಎಂಬ ಕಾರಣಕ್ಕೆ ಕಡಿಮೆ ಪ್ರಮಾಣದ ಟೊಮ್ಯಾಟೊವನ್ನು ಖರೀದಿಸಿಕೊಂಡು ಹೋಗುತ್ತಿದ್ದಾರೆ.

ಟೊಮ್ಯಾಟೊ ಬೆಲೆ ಏರಿಕೆಗೆ ಕಾರಣ

ಟೊಮ್ಯಾಟೊ ಬೆಲೆ ಏರಿಕೆಗೆ ಕಾರಣ

ಟೊಮ್ಯಾಟೊ ಬೆಲೆ ಏರಿಕೆಯಾಗಿದೆ. ಮಹಾರಾಷ್ಟ್ರದ ನಾಸಿಕ್‌ನಿಂದ ಪ್ರತಿ ದಿನ ಸುಮಾರು ಹತ್ತು ಲಾರಿಗಳಲ್ಲಿ ಟೊಮ್ಯಾಟೊ ಬೆಂಗಳೂರಿಗೆ ಬರುತ್ತಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಟೆಂಪೋಗಳಲ್ಲಿ ಟೊಮ್ಯಾಟೊ ಬರುತ್ತಿದೆ ಎಂದು ವ್ಯಾಪಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಮಳೆಯ ಕಾರಣದಿಂದ ಇಳುವರಿ ಕುಸಿತವಾದಿದ್ದರೇ ಹೊರರಾಜ್ಯದಿಂದಲೂ ಪೂರೈಕೆ ಕುಸಿತವಾಗಿರುವ ಕಾರಣದಿಂದಾಗಿ ಬೆಂಗಳೂರಿನಲ್ಲಿ ಟೊಮ್ಯಾಟೊ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ.

ಶತಕ ದಾಟಿದ ಬೀನ್ಸ್ ಮತ್ತು ನುಗ್ಗೆಕಾಯಿ ಬೆಲೆ

ಶತಕ ದಾಟಿದ ಬೀನ್ಸ್ ಮತ್ತು ನುಗ್ಗೆಕಾಯಿ ಬೆಲೆ

ಟೊಮ್ಯಾಟೊ ಬೆಲೆ ಏರಿಕೆ ಮಾತ್ರವಲ್ಲದೇ ಮಾರುಕಟ್ಟೆಯಲ್ಲಿ ಬೀನ್ಸ್ ಬೆಲೆಯು ಸುಮಾರು 100-110 ರೂಪಾಯಿಯನ್ನು ತಲುಪಿದೆ. ಬೀದಿ ಬದಿಯ ವ್ಯಾಪಾರಿಗಳು 250 ಗ್ರಾಂ.ಗೆ 40ರಿಂದ 45 ರೂಪಾಯಿಗೆ ಮಾರಾಟವನ್ನು ಮಾಡುತ್ತಿದ್ದಾರೆ. ಇನ್ನು ನುಗ್ಗೆಕಾಯಿ ಬೆಲೆೆಯು ಸಿಕ್ಕಾಪಟ್ಟೆ ಏರಿಕೆಯಾಗಿದ್ದು ಸುಮಾರು120-130 ರೂಪಾಯಿಗೆ ಬೆಲೆ ಏರಿಕೆಯಾಗಿದೆ. ನುಗ್ಗೆಕಾಯಿಯ ಬೆಲೆ ಕೇಳಿ ನುಗ್ಗೆ ಕಾಯಿಯ ಬೆಲೆ ಮತ್ತು ಮಹಿಮೆ ಅಪಾರ ಎನ್ನುತ್ತಿದ್ದಾರೆ ಗ್ರಾಹಕರು.

ಹಾಗಲಕಾಯಿ, ಕ್ಯಾರೆಟ್ ಅರ್ಧಶತಕ

ಹಾಗಲಕಾಯಿ, ಕ್ಯಾರೆಟ್ ಅರ್ಧಶತಕ

ಜನರು ಮಾರುಕಟ್ಟೆಗೆ ಲಗ್ಗೆ ಇಟ್ಟರೆ ತರಕಾರಿ ಬೆಲೆಗಳನ್ನು ಅಳೆದು ತೂಗಿ ಖರೀದಿಸುತ್ತಾರೆ. ಸದ್ಯಕ್ಕ ಹಾಗಲಕಾಯಿ , ಕ್ಯಾರೇಟ್, ದಪ್ಪ ಮೆಣಸಿನಕಾಯಿ ಸೇರಿದಂತೆ ಕೆಲವು ತರಕಾರಿಗಳ ಬೆಲೆ 50ರ ಹತ್ತಿರ ಹತ್ತಿರದಲ್ಲಿದೆ. ನಿಂಬೆಹಣ್ಣಿನ ಬೆಲೆ ವಿಪರೀತ ಏರಿಕೆ ಕಂಡಿದೆ. ಹಣಕೊಟ್ಟರು ರಸವತ್ತಾದ ನಿಂಬೆಹಣ್ಣು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿಲ್ಲ.

ಹಾಪ್ ಕಾಮ್ಸ್‌ನಲ್ಲಿ ನಿಖರ ಬೆಲೆ ಎಷ್ಟಿದೆ ಗೊತ್ತಾ..?

ಹಾಪ್ ಕಾಮ್ಸ್‌ನಲ್ಲಿ ನಿಖರ ಬೆಲೆ ಎಷ್ಟಿದೆ ಗೊತ್ತಾ..?

ಹುರಳಿಕಾಯಿ - 114

ಬದನೆಕಾಯಿ - 54

ಗುಂಡು ಬದನೆ- 44

ದಪ್ಪ ಮೆಣಸಿನಕಾಯಿ - 72

ಗೋರಿಕಾಯಿ- 75

ಸೌತೆಕಾಯಿ - 48

ಕ್ಯಾರೇಟ್ 54

ಬೀಟ್ ರೋಟ್ - 35

ಹೀರೆಕಾಯಿ -72

ಸೋರೆಕಾಯಿ- 30

ತೊಂಡೆಕಾಯಿ 58

ಶುಂಠಿ- 48

ಬೆಳ್ಳುಳ್ಳಿ - 96

ಬೆಳ್ಳುಳ್ಳಿ ಬಿಡಿಸಿದ್ದು - 135

ಟೊಮ್ಯಾಟೊ- 105

ತರಕಾರಿಯ ಬೆಲೆ ಏರಿಕೆಯಾಗಿದ್ದು ಇಂದಿನ (ಮೇ25) ಹಾಪ್ ಕಾಮ್ಸ್ ನಲ್ಲಿ ಈ ಬೆಲೆಯಲ್ಲಿ ತರಕಾರಿಗಳು ಸಿಗುತ್ತಿದೆ. ಇನ್ನು ಈರುಳ್ಳಿ ಬೆಲೆ ಗ್ರಾಹಕರಿಗೆ ತುಸು ನೆಮ್ಮದಿಯನ್ನು ನೀಡಿದ್ದು ಸುಮಾರು 16-20ರೂಪಾಯಿಗೆ ಸಿಗುತ್ತಿದೆ.

Recommended Video

ಮಂಗಳಮುಖಿ ಸರ್ಕಾರ ಎಂದ ಸಿಎಂ ಇಬ್ರಾಹಿಂ ಮಾತಿಗೆ ಜೋಗತಿ ಮಂಜಮ್ಮ ಹೇಳಿದ್ದೇನು? | #Politics | Oneindia Kannada

English summary
Vegetable prices are rising day by day in Bangalore. Due to rain and shortage of vegetable supply to the market, prices are rising.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X