ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈರುಳ್ಳಿ ಬೆಲೆ ಕಡಿಮೆಯಾಗಲು ವಾರಗಳು ಬೇಕು !

|
Google Oneindia Kannada News

Recommended Video

ಈರುಳ್ಳಿ ಬೆಲೆ ಕಡಿಮೆಯಾಗಲು ವಾರಗಳು ಬೇಕು ! | Oneindia Kannada

ಬೆಂಗಳೂರು, ನವೆಂಬರ್ 29 : ಬೆಂಗಳೂರಿನಲ್ಲಿ ಅರ್ಧ ಶತಕದ ಗಡಿ ದಾಟಿರುವ ಈರುಳ್ಳಿ ಬೆಲೆ ಇನ್ನೊಂದು ವಾರ ಕಡಿಮೆಯಾಗುವುದಿಲ್ಲ. ಹಾಪ್‌ ಕಾಮ್ಸ್‌ನಲ್ಲಿ ಮಧ್ಯಮ ಗಾತ್ರದ ಈರುಳ್ಳಿ ಬೆಲೆ 65 ರೂ.ಗೆ ಏರಿಕೆಯಾಗಿದೆ.

ಈ ಬಾರಿ ರಾಜ್ಯದಲ್ಲಿ ಅಧಿಕ ಮಳೆಯಾಗಿರುವುದರಿಂದ ತರಕಾರಿ ಬೆಳೆಗಳು ಕೊಳೆತು ಹೋಗಿವೆ. ಆದ್ದರಿಂದ, ಬೆಲೆಗಳು ಹೆಚ್ಚಳ ವಾಗುತ್ತಿವೆ. ಈರುಳ್ಳಿ, ಕ್ಯಾರೇಟ್, ಬಿಟ್ ರೋಟ್, ನುಗ್ಗೇಕಾಯಿ ಸೇರಿದಂತೆ ವಿವಿಧ ತರಕಾರಿಗಳ ಬೆಲೆ ಹೆಚ್ಚಳವಾಗಿದೆ.

ಮಳೆ ತಂದ ಅವಾಂತರದಿಂದ ತರಕಾರಿ ಬೆಲೆ ಗಗನಕ್ಕೆಮಳೆ ತಂದ ಅವಾಂತರದಿಂದ ತರಕಾರಿ ಬೆಲೆ ಗಗನಕ್ಕೆ

Vegetable prices continue to rise, onion leads race

'ಈ ಬಾರಿ ನಮ್ಮ ರಾಜ್ಯದಲ್ಲಿ ಈರುಳ್ಳಿ ಬೆಳೆ ಸಂಪೂರ್ಣವಾಗಿ ನೆಲ ಕಚ್ಚಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ 15 ದಿನಗಳಲ್ಲಿ ಈರುಳ್ಳಿ ಸರಬರಾಜು ಆಗಲಿದ್ದು, ನಂತರ ಬೆಲೆಗಳು ಕಡಿಮೆಯಾಗಲಿವೆ' ಎಂದು ಹಾಪ್‌ ಕಾಮ್ಸ್‌ ಅಧಿಕಾರಿಗಳು ಹೇಳಿದ್ದಾರೆ.

ಅರ್ಧ ಶತಕ ಬಾರಿಸಿದ ಈರುಳ್ಳಿ, ಟೊಮೆಟೋ ಬೆಲೆ!ಅರ್ಧ ಶತಕ ಬಾರಿಸಿದ ಈರುಳ್ಳಿ, ಟೊಮೆಟೋ ಬೆಲೆ!

'ಅಧಿಕ ಮಳೆಯಿಂದಾಗಿ ತರಕಾರಿಗಳು ಕೊಳೆತು ಹೋಗಿವೆ. ಕ್ಯಾರೇಟ್ ಬೆಲೆ ಏರುತ್ತಲೇ ಇದೆ. ದೆಹಲಿ ಮತ್ತು ಊಟಿಯಿಂದ ಸದ್ಯ ರಾಜ್ಯಕ್ಕೆ ಕ್ಯಾರೇಟ್ ಬರುತ್ತಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗದಗದಲ್ಲಿ ಅತ್ಯಾಧುನಿಕ ನಾಸಿಕ್‌ ಮಾದರಿ ಈರುಳ್ಳಿ ಗೋದಾಮು ನಿರ್ಮಾಣಗದಗದಲ್ಲಿ ಅತ್ಯಾಧುನಿಕ ನಾಸಿಕ್‌ ಮಾದರಿ ಈರುಳ್ಳಿ ಗೋದಾಮು ನಿರ್ಮಾಣ

ಹಾಪ್ ಕಾಮ್ಸ್ ದರ ಪಟ್ಟಿಯಂತೆ ಬೀಟ್‌ರೋಟ್ 52, ಕ್ಯಾಪ್ಸಿಕಂ 48, ಕ್ಯಾರೇಟ್ (ದೆಹಲಿ) 54, ಕ್ಯಾರೇಟ್ (ಊಟಿ) 86, ಡಬಲ್ ಬೀನ್ಸ್ 54, ಟೊಮೆಟೋ 42 ರೂ. ದರವಿದೆ.

English summary
Onions prices continue to increase in the Bengaluru city. Price will come down after one week when Onions comes from Nashik, Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X