ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೀರಶೈವ ಲಿಂಗಾಯತ ವೇದಿಕೆಯಿಂದ ವಿದ್ಯಾರ್ಥಿ ವೇತನ

|
Google Oneindia Kannada News

Veerashaiva Lingayata Yuva Vedike
ಬೆಂಗಳೂರು, ಜೂ.14 : ವೀರಶೈವ ಲಿಂಗಾಯತ ಯುವ ವೇದಿಕೆ (ರಿ) ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಮುಂದಾಗಿದೆ. ರಾಜ್ಯದ ವೀರಶೈವ ಲಿಂಗಾಯತ ಸಮಾಜದ ಬಡ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ವರ್ಷಕ್ಕೆ ತಲಾ 10 ಸಾವಿರ ರೂ.ಗಳಂತೆ ತಿಂಗಳಿಗೆ 1 ಸಾವಿರ ರೂ.ಗಳಂತೆ ವಿದ್ಯಾರ್ಥಿವೇತನ ನೀಡಲು ಯೋಜನೆ ರೂಪಿಸಲಾಗಿದೆ.

ವೇದಿಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಹೆಸರಿನಲ್ಲಿ 10 ಮಕ್ಕಳಿಗೆ, ನೈಸ್ ಸಂಸ್ಥೆ ಮುಖ್ಯಸ್ಥ ಮತ್ತು ಶಾಸಕ ಅಶೋಕ್ ಖೇಣಿ ಹೆಸರಿನಲ್ಲಿ 10 ಮಕ್ಕಳಿಗೆ, ಯು.ಎಸ್. ಶೇಖರ್ ಅವರ ಹೆಸರಿನಲ್ಲಿ 10 ಮಕ್ಕಳಿಗೆ ವಿಜಯ ಸಂಕೇಶ್ವರ್ ಅವರ ಹೆಸರಿನಲ್ಲಿ 10 ಮಕ್ಕಳಿಗೆ ಮತ್ತು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರ ಹೆಸರಿನಲ್ಲಿ 10 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಿದೆ.

ವೀರಶೈವ ಲಿಂಗಾಯತ ಯುವ ವೇದಿಕೆ ಸತತ ಒಂದುವರೆ ವರ್ಷಗಳಿಂದ ವಿನೂತನ, ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದವರ ಮನೆ ಮನ ತಲುಪುವುದರ ಜೊತೆಯಲ್ಲಿ ಅರಿವು ಮೂಡಿಸಿ ಸಮಾಜದವರನ್ನು ಸಂಘಟಿಸುವ ಪ್ರಯತ್ನ ನಡೆಸುತ್ತಿದೆ. [ವೇದಿಕೆ ಫೇಸ್ ಬುಕ್]

ಮನೆ-ಮನೆಗೆ ಬಸವಣ್ಣನವರ ಭಾವಚಿತ್ರ ತಲುಪಿಸುವುದು, ಬಸವಜ್ಯೋತಿ ಎಂಬ ಪತ್ರಿಕೆಯ ಮೂಲಕ ಸಮಾಜದ ಆಗುಹೋಗುಗಳ ಬಗೆಗೆ ಅರಿವು ಮೂಡಿಸುವ ಕೆಲಸವನ್ನು ವೇದಿಕೆ ಮಾಡುತ್ತಿದೆ. ರಾಜ್ಯದ ಮೂಲೆ ಮೂಲೆಗೆ ಸಂಚರಿಸಿ ಸಮಾಜದ ಸಂಘಟನೆಯನ್ನು ಬಲಪಡಿಸಲು ವೇದಿಕೆ ಮುಂದಿನದಿನಗಳಲ್ಲಿ ಹಲವಾರು ಕಾರ್ಯಕ್ರಮಗಳನ್ಉ ಹಮ್ಮಿಕೊಳ್ಳಲಿದೆ.

ವಿದ್ಯಾರ್ಥಿವೇತನ ಪಡೆಯಲು ಇಚ್ಛಿಸುವವರು www.vlyvedike.org ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಭರ್ತಿ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9972129393 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

English summary
Veerashaiva Lingayata Yuva Vedike plans to distribute scholarships for community students in the name of politicians of Veerashaiva Lingayata community. For detail visit www.vlyvedike.org.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X