ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ರಾಫಿಕ್ ಪೊಲೀಸ್ ಬೊಂಬೆ ಹೊತ್ತು ಓಡಾಡಿದ ವಾಟಾಳ್ ನಾಗರಾಜ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 24: ಚಿತ್ರ-ವಿಚಿತ್ರ ಪ್ರತಿಭಟನೆಗೆ ಹೆಸರಾಗಿರುವ ವಾಟಾಳ್ ನಾಗರಾಜ್ ಇಂದು ಟ್ರಾಫಿಕ್ ಪೊಲೀಸ್‌ ಬೊಂಬೆಯನ್ನು ಹೊತ್ತು ನಗರದಲ್ಲಿ ಓಡಾಡಿದರು!

ಪ್ರಮುಖ ರಸ್ತೆಗಳಲ್ಲಿ ಇಡಲಾಗಿರುವ ಟ್ರಾಫಿಕ್ ಪೊಲೀಸ್ ಅನ್ನು ಹೋಲುವ ಬೊಂಬೆಗಳ ಮೇಲೆ ವಾಟಾಳ್ ನಾಗರಾಜ್ ಅವರಿಗೆ ಇದ್ದಕ್ಕಿದ್ದಂತೆ ಸಿಟ್ಟು ಬಂದಿದೆ. ಅವನ್ನು ಕೂಡಲೇ ತೆರವು ಮಾಡಬೇಕೆಂದು ಒತ್ತಾಯಿಸಿ ವಾಟಾಳ್ ಅವರು ಟ್ರಾಫಿಕ್ ಪೊಲೀಸ್ ಬೊಂಬೆಯನ್ನು ಹೊತ್ತುಕೊಂಡು ಓಡಾಡಿದರು.

'ಟ್ರಾಫಿಕ್ ಪೊಲೀಸರ ಯೂನಿಫಾರಂ ಹಾಕಿ ನಿಲ್ಲಿಸಿದ ಬೊಂಬೆಗಳನ್ನು ನೋಡಿದರೆ ಮಕ್ಕಳು ಭಯ ಬೀಳುತ್ತವೆ. ಹೀಗೆ ಟ್ರಾಫಕ್ ಪೊಲೀಸರ ಸಮವಸ್ತ್ರವನ್ನು ಬೊಂಬೆಗಳಿಗೆ ಹಾಕಿ ನಿಲ್ಲಿಸುವುದು ಪೊಲೀಸರಿಗೆ ಮಾಡುವ ಅವಮಾನ' ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

Vatal Nagaraj condemns keeping police mannequins at traffic signals

ಜೊತೆಗೆ ಔರಾದ್ಕರ್ ವರದಿಯನ್ನೂ ಸಹ ಕೂಡಲೇ ಜಾರಿಗೆ ತಂದು ಪೊಲೀಸರ ವೇತನ ತಾರತಮ್ಯ ನೀಗಿಸಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.

English summary
Vatal Nagaraj condemns the idea of keeping police mannequins at traffic signals. He said it look like ghost.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X