ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರವೇ ಕೊರೊನಾ ಬಂದ ರೀತಿ ವರ್ತಿಸುತ್ತಿದೆ- ವಾಟಾಳ್ ಕಿಡಿ

|
Google Oneindia Kannada News

ಬೆಂಗಳೂರು, ಜುಲೈ 13: 'ಲಾಕ್ ಡೌನ್ ಮಾಡುವುದರಿಂದ ಏನೂ ಪ್ರಯೋಜನ ಇಲ್ಲ, ಸರ್ಕಾರವೇ ಕೊರೊನಾ ಬಂದ ರೀತಿ ವರ್ತನೆ ಮಾಡ್ತಿದೆ' ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

'ಮೊದಲು ಆಸ್ಪತ್ರೆ, ಡಾಕ್ಟರ್, ಔಷಧಿ ಇತರ ವ್ಯವಸ್ಥೆಗಳನ್ನು ಸರಿ ಮಾಡಬೇಕು. ಗಡಿ ಭಾಗಗಳನ್ನು ಬಂದ್ ಮಾಡಬೇಕು. ಮಹಾರಾಷ್ಟ್ರದಿಂದ ರೈಲುಗಳನ್ನು ಬಿಟ್ಟದ್ದು ಏಕೆ. ಇತರೆ ರಾಜ್ಯಗಳಿಂದಲೇ ನಮ್ಮಲ್ಲಿ ಸೋಂಕು ಹರಡಿದೆ' ಎಂದು ಖಂಡಿಸಿದ್ದಾರೆ.

ಡಿಸಿಗಳ ಜೊತೆ ಸಿಎಂ ಸಭೆ: 'ರಾಜ್ಯ ಲಾಕ್‌ಡೌನ್‌' ಕುರಿತು ಅಂತಿಮ ತೀರ್ಮಾನ!ಡಿಸಿಗಳ ಜೊತೆ ಸಿಎಂ ಸಭೆ: 'ರಾಜ್ಯ ಲಾಕ್‌ಡೌನ್‌' ಕುರಿತು ಅಂತಿಮ ತೀರ್ಮಾನ!

'ಬೆಂಗಳೂರಿಂದ 25 ಲಕ್ಷ ಜನ ವಲಸೆ ಹೋಗಿದ್ದಾರೆ. ಅವರನ್ನು ತಡೆಯೋಕೆ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನಸಾಮಾನ್ಯರು, ಬೆಂಗಳೂರು ಬಿಡದ ಹಾಗೆ ವ್ಯವಸ್ಥೆ ಮಾಡಲಿ. ವಿರೋಧ ಪಕ್ಷಗಳೂ ಸರಿಯಾಗಿ ಕೆಲಸ ಮಾಡ್ತಿಲ್ಲ.

Vatal Nagaraj Condemn Govt decision on Lockdown

'ಸರ್ಕಾರವೇ ಕೊರೊನಾ ಬಂದ ರೀತಿ ವರ್ತನೆ ಮಾಡ್ತಿದೆ. ಎಲ್ಲಾ ವಿದ್ಯಾರ್ಥಿಗಳನ್ನೂ ಪರೀಕ್ಷೆ ಇಲ್ಲದೇ ಪಾಸ್ ಮಾಡಬೇಕು. ಅಂತಿಮ ವರ್ಷದ ವಿದ್ಯಾರ್ಥಿ ಗಳಿಗೂ ಪರೀಕ್ಷೆ ಮಾಡದೇ ಪಾಸ್ ಮಾಡಬೇಕು ಎಂದು ವಾಟಾಳ್ ನಾಗರಾಜ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಒಂದು ವಾರ ಲಾಕ್‌ಡೌನ್ ಮಾಡಲು ಸರ್ಕಾರ ಜಾರಿ ಮಾಡಿದೆ. ಸಿಲಿಕಾನ್ ಸಿಟಿಯಲ್ಲಿ ಮಾತ್ರ ಲಾಕ್‌ಡೌನ್‌ ಮಾಡುವುದರಿಂದ ಪ್ರಯೋಜನವಿಲ್ಲ, ರಾಜ್ಯಾದಂತ್ಯವೂ ಲಾಕ್‌ಡೌನ್‌ ಮುಂದುವರಿಸಬೇಕು ಎಂಬ ಒತ್ತಾಯವಿದೆ.

English summary
Kannada activist Vatal Nagaraj Condemn Govt decision on Lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X