ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಪೆಟ್ರೋಲ್ ಮೇಲಿನ ವ್ಯಾಟ್ ಕಡಿಮೆ ಮಾಡ್ತಾರಾ ಎಚ್ಡಿಕೆ?

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 10: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಪೆಟ್ರೋಲ್ 84 ರೂ.ಗೆ ಬಂದು ನಿಂತಿದೆ. ತೈಲ ಬೆಲೆ ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕಾಂಗ್ರೆಸ್ ಬಂದ್ ಗೆ ಕರೆ ನೀಡಿದೆ.

ಕೇಂದ್ರ ಸರ್ಕಾರವಂತೂ ತೈಲ ಬೆಲೆ ಕಡಿಮೆ ಮಾಡುವ ರೀತಿ ಕಾಣುತ್ತಿಲ್ಲ, ಕನಿಷ್ಠ ಪಕ್ಷ ರಾಜ್ಯ ಸರ್ಕಾರವಾದರೂ ತೈಲದ ಮೇಲಿನ ವ್ಯಾಟ್ ಕಡಿಮೆ ಮಾಡುತ್ತಾರಾ ಎನ್ನುವುದು ಪ್ರಶ್ನೆಯಾಗಿದೆ.

ಭಾರತ್ ಬಂದ್: ಕರಾವಳಿಯಲ್ಲಿ ತಟ್ಟಿದ ಪ್ರತಿಭಟನೆಯ ಬಿಸಿಭಾರತ್ ಬಂದ್: ಕರಾವಳಿಯಲ್ಲಿ ತಟ್ಟಿದ ಪ್ರತಿಭಟನೆಯ ಬಿಸಿ

ಕರ್ನಾಟಕ ಹಾಗೂ ಪಂಜಾಬ್ ಮುಖ್ಯಮಂತ್ರಿಗಳಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ವ್ಯಾಟ್ ಇಳಿಕೆ ಮಾಡುವಂತೆ ಈಗಾಗಲೇ ಸೂಚನೆ ಕೊಡಲಾಗಿದೆ ಎಂದು ಹಿಮಾಚಲ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ರಜನಿ ಪಾಟೀಲ್ ತಿಳಿಸಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ ಇಳಿಯುತ್ತಾ ಎಂದು ಕಾದು ನೋಡಬೇಕಿದೆ.

VAT on fuel may reduce in Karnataka

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸಿನ ವೀರಭದ್ರಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಶೇ.2ರಷ್ಟು ತೆರಿಗೆಯನ್ನು ಕಡಿತ ಗೊಳಿಸಲಾಗಿದೆ ಎಂದಿದ್ದಾರೆ. ಕಳೆದ ಜುಲೈ ನಲ್ಲಿ ಕರ್ನಾಟಕ ಬಜೆಟ್ ಮಂಡನೆ ಮಾಡಿದ್ದ ಎಚ್‌ಡಿ ಎಚ್‌ಡಿ ಕುಮಾರಸ್ವಾಮಿ ಲೀಟರ್ ಪೆಟ್ರೋಲ್ ಮೇಲಿನ ತೆರಿಗೆಯನ್ನು 1.14 ರೂ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು 1.12ರೂ.ನಷ್ಟು ಏರಿಕೆ ಮಾಡಿದ್ದರು.

LIVE: ಭಾರತ್ ಬಂದ್: ಮೆಜೆಸ್ಟಿಕ್ ನಲ್ಲಿ ಕ್ರಿಕೆಟ್ ಆಡಿ ಪ್ರತಿಭಟನೆ! LIVE: ಭಾರತ್ ಬಂದ್: ಮೆಜೆಸ್ಟಿಕ್ ನಲ್ಲಿ ಕ್ರಿಕೆಟ್ ಆಡಿ ಪ್ರತಿಭಟನೆ!

ಕಳೆದ ವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ತೈಲ ಬೆಲೆ ಇಳಿಕೆ ಕುರಿತು ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದರು. ಹೀಗಾಗಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಯುತ್ತಾ ಎನ್ನುವ ಕುತೂಹಲ ಆರಂಭವಾಗಿದೆ.

English summary
Congress high command has given instruction to its party ruling states like Himachal Pradesh and Punjab to reduce VAT on fuel in respective states. Following this it was expected VAT may reduce on fuel in Karnataka too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X