• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಲ್ಲೇಶ್ವರ : ಆರ್ಯವೈಶ್ಯ ಸಂಘದಲ್ಲಿ ಮೇ 10ರಿಂದ ವಾಸವಿ ಜಯಂತಿ

|

ಬೆಂಗಳೂರು, ಮೇ 10: ಮಲ್ಲೇಶ್ವರಂ ಆರ್ಯವೈಶ್ಯ ಸಂಘ ಶ್ರೀ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ 85ನೇ ವಾಸವಿ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ವಾಸವಿ ಜಯಂತಿ - ವಾಸವಿ ದರ್ಬಾರ್ ಉತ್ಸವವು ಮೇ 10ರಿಂದ ಆರಂಭಗೊಂಡಿದೆ

ನಗರದ ಮಲ್ಲೇಶ್ವರಂ 8ನೇ ಕ್ರಾಸಿನಲ್ಲಿರುವ ಶ್ರೀವಾಸವಿ ದೇವಾಸ್ಥಾನದಲ್ಲಿ ವಾಸವಿ ಜಯಂತಿ ಪ್ರಯುಕ್ತ ಮೇ 10ರಿಂದ 18 ರವರೆಗೆ ಅನೇಕ ಧಾರ್ಮಿಕ ಕೈಂಕರ್ಯ ವಿಶೇಷ ಅಲಂಕಾರಗಳು ಮತ್ತು ಆರ್ ಪಿ ರವಿಶಂಕರ್ ಸಭಾಂಗಣ, ನಿರಂತರ ಜ್ಞಾನ ಯಜ್ಞ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಅದ್ದೂರಿಯಾಗಿ ಶ್ರೀವಾಸವಿ ಕನ್ಯಕಾ ಪರಮೇಶ್ವರಿ ಜಯಂತಿ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿದೆ.

ವಾರಾಂತ್ಯ ವಿಶೇಷ: ದೇವರಾಯನದುರ್ಗದಲ್ಲಿ ಅಪರೂಪದ ಶಿವ ದೇಗುಲ

ಬೆಂಗಳೂರಿನ ಅತ್ಯಂತ ಪುರಾತನ ಬಡಾವಣೆ ಮಲ್ಲೇಶ್ವರ 8ನೇ ಕ್ರಾಸನ ಈ ದೇಗುಲ ಸ್ಥಾಪನೆಯಾಗಿ ಅಷ್ಟದಶಮಾನಗಳು ಸಂದಿವೆ .ಕೀರ್ತಿ ಶೇಷ ಸೂತ್ರಂ ಸುಬ್ರಹಣ್ಯ ಶಾಸ್ತ್ರೀ ವಂಶಸ್ಥ ಡಾ. ವೇ. ಮೂ. ನಾಗರಾಜ ಶಾಸ್ತ್ರೀ ಮತ್ತು ಅಲಂಕಾರ ನಿಪುಣ ಡಾ ಕಿರಣ್ ಕುಮಾರ್ ರವರ ನೇತೃತ್ವದಲ್ಲಿ ವಿದ್ಯುಕ್ತ ಪೂಜಾಕೈಂಕರ್ಯಗಳು ನಡೆಸಿಕೊಂಡು ಬರಲಾಗುತ್ತಿದೆ.

ಕಾರ್ಯಕ್ರಮಗಳ ವಿವರ :

ಮೇ 10ರಂದು ಅಮ್ಮನವರಿಗೆ ಶತರುದ್ರಾಭಿಷೇಕ, ಮಹಾಗಣಪತಿ ಹೋಮ, ಮಾಂಗಡ್ ಕಾಮಾಕ್ಷಿ ಅಲಂಕಾರ, ಉಯ್ಯಾಲೋತ್ಸವ, ವಿದುಷಿ ಪ್ರಭಾ ಎಸ್ ಜ್ಯೋಯ್ಸ್ ರವರಿಂದ ಭಕ್ತಿಗೀತೆಗಳು

ಮೇ 11ರಂದು ಚಂಡಿಕಾಹೋಮ, ಅನ್ನಪೂಣೇಶ್ವರಿ ಅಲಂಕಾರ, ವಿದ್ವಾನ್ ಕೇಶವದಾಸ ಮೂರ್ತಿ ರವರಿಂದ ನಾಮ ಸಂಕೀರ್ತನೆ

ಮೇ 12ರಂದು ನವಗ್ರಹ ಹೋಮ ಸಮಯಪುರಿ ಅಮ್ಮನವರ ಅಲಂಕಾರ, ವಿದುಷಿ ಮೈಥಿಲಿ ವರ್ಷಿಣಿ ರವರಿಂದ ಶಾಸ್ತ್ರೀಯ ಸಂಗೀತ

ಮೇ 13 ರಂದು ಬನಶಂಕರಿ ಅಮ್ಮನವರ ಅಲಂಕಾರ, ಕುಮಾರಿ ಐಶ್ವರ್ಯ ಮಹೇಶ್, ಕುಮಾರಿ ಸುಪ್ರಿಯ ರವರಿಂದ ಗಾಯನ

ಮೇ 14ರಂದು ವಾಸವಿ ಜಯಂತಿ ಪ್ರಯುಕ್ತ ಶ್ರೀವಾಸವಾಂಬ ಹೋಮ, ಅಮ್ಮನವರ ಜೊತೆ ಅಗ್ನಿ ಪ್ರವೇಶ ಮಾಡಿದ 102 ಗೋತ್ರದ ದಂಪತಿಗಳ ಮತ್ತು ಋಷಿವರಿಯರ ಹೆಸರಿನಲ್ಲಿ ದೇವಿಗೆ ಫಲೋದಕ ಸ್ನಾನ ದರ್ಬಾರ್ ರಾಜಕುಮಾರಿ ಅಲಂಕಾರ, ಕು. ಶ್ರೀಲಕ್ಷ್ಮೀ ಮತ್ತು ನಿತ್ಯಶ್ರೀ ರವರಿಂದ ಭರತನಾಟ್ಯ

ನಿಸರ್ಗ ಪ್ರೇಮಿಗಳ ಸ್ವರ್ಗ ಹಿಮವದ್ ಗೋಪಾಲಸ್ವಾಮಿ ಬೆಟ್ಟ

ಮೇ 15 ರಂದು ಸತ್ಯನಾರಾಯಣಸ್ವಾಮಿ ವ್ರತ, ಮೀನಾಕ್ಷಿ ಅಮ್ಮನವರ ಅಲಂಕಾರ, ವಿದ್ವಾನ್ ಪ್ರಶಾಂತ್ ಕುಮಾರ್ ರಾಯ್‍ಬಾಗ್ ರವರಿಂದ ದಾಸರಪದಗಳು

ಮೇ 16 ನಕ್ಷತ್ರ ಹೋಮ ಬಾಲ ತ್ರಿಪುರ ಸುಂದರಿ ಅಲಂಕಾರ, ವಿದುಷಿ ಸ್ನೇಹಲತಾ ರವರಿಂದ ಭಕ್ತಿಗೀತೆಗಳು

ಮೇ 17 ಮೃತ್ಯುಂಜಯ ಹೋಮ ಚಾಮುಂಡೇಶ್ವರಿ ಅಲಂಕಾರ, ಕುಮಾರಿ ರಕ್ಷಾ ಮತ್ತು ಕು. ಪ್ರಜ್ಞಾ ರವರಿಂದ ಭರತನಾಟ್ಯ

ಮೇ 18 ಸತ್ಯನಾರಾಯಣಸ್ವಾಮಿ ಹೋಮ, ಮೂಕಾಂಬಿಕಾ ಅಲಂಕಾರ, ವಿದ್ವಾನ್ ಅನಂತರಾಜು ರವರಿಂದ ಅನ್ನಮಯ್ಯ ಕೀರ್ತನ ಗಾಯನ

ಲೌಕಿಕ ಉನ್ನತ ಪದವಿಯನ್ನು ತೊರೆದು ತಾಯಿ ವಾಸವಿಯ ಸೇವೆ ಮಾಡಲೆಂದೇ ಕಂಕಣಬದ್ಧರಾಗಿ ನಿಂತ ಅರ್ಚಕರು ಇತರಿಗೆ ಮಾದರಿ, ಸೂಜಿಗಲ್ಲಿನಂತೆ ತನ್ನೆಡೆಗೆ ಸೆಳೆಯುತ್ತಿರುವ ಅಪೂರ್ವ ದೈವಸನ್ನಿಧಿಗೆ ಬರುವ ಭಕ್ತಕೋಟಿಯ ನೆಮ್ಮದಿಯ ತಾಣ ಇದಾಗಿದೆ.

ವರ್ಷದ 365 ದಿನವೂ ದೇವಿಗೆ ವೈವಿಧ್ಯಮಯ ಅಲಂಕಾರಗಳಿಂದ ಸೇವೆ ಸಲ್ಲಿಸುವ ಕಲಾ ನೈಪುಣ್ಯತೆಯು ಇತ್ತೀಚೆಗೆ ಗಿನ್ನೀಸ್ ಬುಕ್ ಆಫ್ ವರ್ಲ್ಡ್ ರೆರ್ಕಾಡ್ಸ್ ಗೆ ಸೇರ್ಪಡೆಯಾಗಿದೆ. ಕಿರಣ್ ಕುಮಾರ್ ರವರ ಅನನ್ಯ ಸಾಧನೆಯನ್ನು ಗುರುತಿಸಿ ಎರಡು ಗೌರವ ಡಾಕ್ಟರೇಟ್ ಅಲ್ಲದೇ ಅನೇಕ ಅಂತಾರಾಷ್ಷ್ರೀಯ ಗೌರವ ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vasavi Jayanti is observed on Vaishakha Shukla Dasami, tenth day in bright fortnight in Vaisakh month. Vasavi Jayanthi function will be held at Kanyaka Parameshwari Temple in Malleswaram, Bengaluru from May 10-18, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more