ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರ್ತೂರು ಕೆರೆಯಲ್ಲಿ ಮತ್ತೆ ಕಾಣಿಸಿಕೊಂಡ ಬೆಂಕಿ: ಸ್ಥಳೀಯರಿಗೆ ಆತಂಕ

|
Google Oneindia Kannada News

ಬೆಂಗಳೂರು, ಫೆಬ್ರವರಿ 18: ನಗರದ ವರ್ತೂರು ಕೆರೆಯಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯರಿಗೆ ಆತಂಕ ಶುರುವಾಗಿದೆ. ಪ್ರತಿ ವರ್ಷವೂ ಬೆಳ್ಳಂದೂರು ಮತ್ತು ವರ್ತೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಕೆರೆಯ ಸ್ವಚ್ಛತಾ ಕಾರ್ಯವೂ ನಡೆದಿಲ್ಲ.

ಸುತ್ತಮುತ್ತಲಿರುವ ಕಾರ್ಖಾನೆಗಳಿಂದ ತ್ಯಾಜ್ಯಗಳು ನೀರಿಗೆ ಹರಿದುಬರುತ್ತಿರುವುದರಿಂದ ಬೆಂಕಿ ಹತ್ತಿಕೊಳ್ಳುತ್ತಿದೆ. ಹೆಚ್ಚಿನ ಬಿಸಿಲಿನಿಂದಾಗಿಯೇ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.

ಸರ್ಜಾಪುರ ರಸ್ತೆಯಿಂದ ವೈಟ್‌ಫೀಲ್ಡ್‌ ಪ್ರಯಾಣಿಸುವ ಟೆಕ್ಕಿಗಳಿಗೆ ಸಿಹಿಸುದ್ದಿ ಸರ್ಜಾಪುರ ರಸ್ತೆಯಿಂದ ವೈಟ್‌ಫೀಲ್ಡ್‌ ಪ್ರಯಾಣಿಸುವ ಟೆಕ್ಕಿಗಳಿಗೆ ಸಿಹಿಸುದ್ದಿ

ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸ್ಥಳೀಯರೆಲ್ಲರೂ ಸ್ಥಳದಲ್ಲಿ ಜಮಾಯಿಸಿದ್ದಾರೆ, ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಇದುವರೆಗೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ.

Varthur Lake In Bengaluru Catches Fire Again

ಪ್ರತಿವರ್ಷ ಫೆಬ್ರವರಿಯಿಂದ ಏಪ್ರಿಲ್ ಅತಿ ಹೆಚ್ಚು ಬಿಸಿಲಿರುವ ಸಮಯದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಕೆರೆ ಸುತ್ತಮುತ್ತಲು ಹತ್ತಾರು ಅಪಾರ್ಟ್‌ಮೆಂಟ್‌ಗಳಿದೆ. ಇದೀಗ ಹೊಗೆ ಇಡೀ ಕೆರೆಯ ಸುತ್ತಲೂ ಆವರಿಸಿಕೊಂಡಿದೆ. ವಾಹನ ಸವಾರರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.

ವರ್ತೂರು ಹಾಗೂ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಮಾತ್ರವಲ್ಲದೆ ಯಾವಾಗಲೂ ಸಾಮಾನ್ಯವಾಗಿ ನೊರೆ ಕಾಣಿಸಿಕೊಳ್ಳುತ್ತದೆ.

2019ರ ಜನವರಿ ಜನವರಿಯಲ್ಲಿ ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸುಮಾರು 10 ಎಕರೆ ಪ್ರದೇಶದವನ್ನು ಸುಟ್ಟು ಭಸ್ಮ ಮಾಡಿತ್ತು.

English summary
Lakes catching fire has become a perpetual disaster Bengaluru has had to witness every year, since 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X