ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರಮಹಾಲಕ್ಷ್ಮೀ ಹಬ್ಬಕ್ಕೆ ಖರೀದಿ ಜೋರು: ಬನ್ನಿ ಒಂದು ಸುತ್ತು ಹಾಕೋಣ

|
Google Oneindia Kannada News

ಬೆಂಗಳೂರು, ಆಗಸ್ಟ್ 8: ದುಡ್ಡಿನ ಅಧಿದೇವತೆ ವರಮಹಾಲಕ್ಷ್ಮೀ ಹಬ್ಬ ಬಂದೇ ಬಿಟ್ಟಿದೆ. ಮಹಾಲಕ್ಷ್ಮೀ ಅಲಂಕಾರಕ್ಕೆ ಬೇಕಾದ ವಸ್ತುಗಳನ್ನು ಕೊಳ್ಳುವುದರಲ್ಲಿ ಬಿಜಿಯಾಗಿದ್ದಾರೆ.

ತರಕಾರಿ, ಹೂವುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಶ್ರಾವಣ ಮಾಸಗಳಲ್ಲಿ ವರಮಹಾಲಕ್ಷ್ಮೀ ಹಬ್ಬ ಕೂಡ ಪ್ರಮುಖವಾದದ್ದು, ಹಬ್ಬ ಸಮೀಪಿಸುತ್ತಿದ್ದಂತೆ ವ್ಯಾಪಾರ-ವಹಿವಾಟು ಜೋರಾಗಿದೆ. ಜನರ ಅಭಿರುಚಿಗೆ ತಕ್ಕಂತಹ ವರಮಹಾಲಕ್ಷ್ಮೀಮೂರ್ತಿಗಳು ಕಣ್ಮನ ಸೆಳೆಯುತ್ತಿವೆ.

ವ್ರತ ಮಾಡುವವರು ವರಮಹಾಲಕ್ಷ್ಮೀ ಹಬ್ಬದ ದಿನ ಬೆಳಗ್ಗೆ ಎದ್ದು ಮಂಗಳಸ್ನಾನ ಮಾಡಿ, ಪೂಜಾಸ್ಥಳವನ್ನು ಸ್ವಚ್ಛಗೊಳಿಸಿ, ಬಾಳೆ ಕಂದು, ಮಾವಿನ ಎಲೆಗಳಿಂದ ಸಿಂಗರಿಸುತ್ತಾರೆ. ಅಷ್ಟದಳ ಪದ್ಮದ ರಂಗೋಲಿ ಹಾಕಿ ಅದರ ಮೇಲೆ ಕಲಶ ಸ್ಥಾಪಿಸಬೇಕು.

ಒಂದು ಚೊಂಬಿನಲ್ಲಿ ಸ್ವಲ್ಪ ನೀರು, ಅಕ್ಕಿ ಹಾಕಿ, ಜೊತೆಗೆ ಅರಿಶಿಣದ ಕೊಂಬು, ಅಡಿಕೆ, ಬೆಳ್ಳಿ ನಾಣ್ಯ ಇಟ್ಟು ಅದರ ಮೇಲೆ ಅರಿಶಿಣ ಕುಂಕುಮ ಸವರಿದ ತೆಂಗಿನಕಾಯಿ ಇಟ್ಟು ಲಕ್ಷ್ಮೀದೇವಿಯ ಬೆಳ್ಳಿಯ ಮುಖವಾಡ ಇದ್ದರೆ ಅದನ್ನು ಈ ತೆಂಗಿನಕಾಯಿಗೆ ಜೋಡಿಸಬೇಕು.

ಮುಖವಾಡದ ಬದಲು ಅರಿಶಿನದಲ್ಲಿ ಲಕ್ಷ್ಮಿ ದೇವಿಯ ಚಿತ್ರವನ್ನು ಬಿಡಿಸುತ್ತಾರೆ. ಈ ರೀತಿ ಮಾಡುವುದರಿಂದ ಕಲಶವು ಲಕ್ಷ್ಮಿ ದೇವಿಯನ್ನು ಸಾಂಕೇತಿವಾಗಿ ಪ್ರತಿನಿಧಿಸುತ್ತದೆ.

ತರಕಾರಿ ಬಲು ದುಬಾರಿ

ತರಕಾರಿ ಬಲು ದುಬಾರಿ

ಯಾವುದೇ ಹಬ್ಬಗಳಿರಲಿ, ಹಬ್ಬ ಎನ್ನುವ ಶಬ್ದ ಕಿವಿಗೆ ಬಿದ್ದರೆ ಸಾಕು, ಹೂವು ಹಣ್ಣು, ತರಕಾರಿ ಎಲ್ಲದರ ಬೆಲೆಯೂ ಗಗನಕ್ಕೇರುವುದು ಸರ್ವೇ ಸಾಮಾನ್ಯ. ಆದರೆ ಬೆಲೆ ಏರಿಕೆ ಮಧ್ಯೆಯೂ ಜನರು ತಮ್ಮ ಸಂತೋಷಕ್ಕೇನೂ ಕಡಿಮೆ ಮಾಡಿಕೊಳ್ಳುವುದಿಲ್ಲ.

ಎಷ್ಟೇ ಬೆಲೆ ಇದ್ದರೂ ತಮಗೆ ಬೇಕಾದ ವಸ್ತುಗಳನ್ನು ಕೊಂಡೇ ಕೊಳ್ಳುತ್ತಾರೆ ಎನ್ನುವ ಭರವಸೆ ಮಾರಾಟಗಾರರದ್ದಾಗಿರುತ್ತದೆ. ಕಳೆದ ವಾರ ಸಗಟು ಮಾರುಕಟ್ಟೆಯಲ್ಲಿ ಕ್ಯಾರೆಟ್‌ ಬೆಲೆ 40-45 ರೂ ಇತ್ತು ಈಗ 70 ರೂ ಆಗಿದೆ.

ಹಸಿಮೆಣಸು- 40 ರೂ, ಟೊಮೆಟೋ 26 ರೂ. ಕೊತ್ತಂಬರಿ ಸೊಪ್ಪು ಒಂದು ಕಟ್ಟಿಗೆ 15 ರೂ, ನಿಂಬೆ ಹಣ್ಣು ಒಂದಕ್ಕೆ 3.30 ರೂ, ಬೂದುಗುಂಬಳ ಕೆಜಿಗೆ 40 ರೂ ಆಗಿದೆ. ಒಟ್ಟಿನಲ್ಲಿ ಹಬ್ಬಕ್ಕೆ ಪ್ರಮುಖವಾಗಿ ಏನು ಬೇಕೋ ಆ ವಸ್ತುಗಳ ಬೆಲೆ ಏರಿಕೆಯಾಕಿದೆ.

ಹೂವುಗಳ ಬೆಲೆ ಕೂಡ ದುಬಾರಿ

ಹೂವುಗಳ ಬೆಲೆ ಕೂಡ ದುಬಾರಿ

ಆಗಸ್ಟ್ ತಿಂಗಳಲ್ಲಿ ಸಾಲು ಸಾಲು ಹಬ್ಬಗಳು ಬರುವ ಕಾರಣ ಹೂವು-ಹಣ್ಣುಗಳ ಬೆಲೆ ಹೆಚ್ಚಾಗಿದೆ. ವರ ಮಹಾಲಕ್ಷ್ಮೀ ಹಬ್ಬಕ್ಕೆ ಎರಡು ದಿನಗಳು ಬಾಕಿ ಇರುವಾಗಲೇ ಹೂವಿನ ಬೆಲೆ ಏರಿಕೆಯಾಗಿತ್ತು. ಕನಕಾಂಬರ ಕೆಜಿಗೆ ಸಾವಿರ ರೂ ತಲುಪಿದೆ. ಸೇವಂತಿಗೆ ಕೆಜಿಗೆ 200-250 ರೂ,ಮಲ್ಲಿಗೆ ಮೊಗ್ಗು ಕೆಜಿಗೆ 300 ರೂ. , ಸುಗಂಧರಾಜ ಕೆಜಿಗೆ 140 ರೂ, ರೋಸ್ ಕೆಜಿಗೆ 200 ರೂ ಆಗಿದೆ.

ಬೇಕರಿಗಳಲ್ಲಿ ಹಬ್ಬದ ತಿನಿಸುಗಳು ಲಭ್ಯ

ಬೇಕರಿಗಳಲ್ಲಿ ಹಬ್ಬದ ತಿನಿಸುಗಳು ಲಭ್ಯ

ವರಮಹಾಲಕ್ಷ್ಮೀ ಹಬ್ಬಕ್ಕೆಂದೇ ಮನೆಗಳಲ್ಲಿ ಬಗೆ ಬಗೆಯ ಖಾದ್ಯಗಳನ್ನು ಮಾಡುತ್ತಾರೆ. ಆದರೆ ಅದನ್ನು ಮಾಡಲು ಸಾಧ್ಯವಾಗದವರಿಗೋಸ್ಕರವೇ ಬೇಕರಿಗಳಲ್ಲಿ ಸಿಹಿ ತಿನಿಸುಗಳು ಲಭ್ಯವಿದೆ. ಬಾಕ್ಸ್‌ ಒಂದಕ್ಕೆ 800 ರಿಂದ 2000 ಸಾವಿರದವರೆಗೂ ಇದೆ.

ಅಲಂಕಾರಿಕ ವಸ್ತುಗಳಿಗೆ ಹೆಚ್ಚಿನ ಬೇಡಿಕೆ

ಅಲಂಕಾರಿಕ ವಸ್ತುಗಳಿಗೆ ಹೆಚ್ಚಿನ ಬೇಡಿಕೆ

ಹಬ್ಬದ ಸಡಗರ ಹೆಚ್ಚಿಸಲು ಮಾರುಕಟ್ಟೆಗೆ ಕಲಶ, ಲಕ್ಷ್ಮೀ ಮುಖವಾಡ, ತೆಂಗಿನ ಕಾಯಿ, ಮಂಟಪ, ಅಂಕಾರಿಕ ವಸ್ತುಗಳು, ವಿದ್ಯುತ್ ದೀಪಗಳು, ಹೂವಿನ ಹಾರ, ಅರಿಶಿನ ಕುಂಕುಮ ಬಟ್ಟಲು ಹೀಗೆ ಎಲ್ಲಾ ರೀತಿಯ ವಸ್ತುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

English summary
Varamahalakshmi Festival: Ppeople had to be content with the high cost of flowers, fruit, betel leaves, vegetables, and other puja material rates are high.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X