• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಎಪಿಯಿಂದ ''ವನಿತಾ ಸಹಸ್ರನಾಮ'' ಅಭಿಯಾನಕ್ಕೆ ಚಾಲನೆ

|

ಬೆಂಗಳೂರು, ಮಾರ್ಚ್ 9: ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕವು ಪಕ್ಷಕ್ಕೆ ಮಹಿಳೆಯರ ಸೇರ್ಪಡೆಗಾಗಿ 'ವನಿತಾ ಸಹಸ್ರನಾಮ' ವಿಶೇಷ ಅಭಿಯಾನಕ್ಕೆ ಮಹಿಳಾ ದಿನಾಚರಣೆಯಂದು ಚಾಲನೆ ನೀಡಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಬಳಿ ಇರುವ ಕಿತ್ತೂರ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಬಿಬಿಎಂಪಿ ಕ್ಯಾಂಪೇನ್ ಉಸ್ತುವಾರಿ ಶಾಂತಲಾ ದಾಮ್ಲೆ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ''ಮುಂದಿನ ನೂರು ದಿನಗಳಲ್ಲಿ ಪಕ್ಷದ ಕಾರ್ಯಕರ್ತರು ಬೆಂಗಳೂರಿನ ಪ್ರತಿ ವಾರ್ಡಿನಲ್ಲೂ ಮಹಿಳೆಯರನ್ನು, ಸಂಘಟನೆಗಳನ್ನು ಸಂಪರ್ಕಿಸಿ, ಪಕ್ಷ ಸಿದ್ದಾಂತಗಳ ಬಗ್ಗೆ ಪರಿಚಯಿಸಲಿದ್ದಾರೆ ಹಾಗೂ ಎಎಪಿಯೇ ಮಹಿಳೆಯರಿಗೆ ಅತ್ಯಂತ ಸೂಕ್ತವಾದ ಪಕ್ಷವೆಂದು ಮನವರಿಕೆ ಮಾಡಿಕೊಡಲಿದ್ದಾರೆ'' ಎಂದರು.

ಎಎಪಿ ಫಲಶ್ರುತಿ: ಬಿಎಂಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

ದೆಹಲಿಯ ಆಮ್ ಆದ್ಮಿ ಸರ್ಕಾರ ಮಹಿಳಾ ಪರವಾದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಮುಖ್ಯವಾಗಿ ಮಹಿಳಾ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು 5500 ಬಸ್‌ಗಳಿಗೆ ಜಿಪಿಎಸ್, ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ, ಬಸ್ ಮಾರ್ಷಲ್‌ಗಳ ನೇಮಕ, ಉಚಿತ ವಿದ್ಯುತ್, ನೀರು, ಮೊಹಲ್ಲಾ ಆಸ್ಪತ್ರೆ ಹೀಗೆ ಜನಪರವಾದ ಅನೇಕ ಕೆಲಸಗಳನ್ನು ಮಾಡಲಾಗಿದೆ ಎಂದರು.

ಉಚಿತವಾಗಿ ಪಡಿತರ ವ್ಯವಸ್ಥೆ ತಲುಪಿಸುವ ಯೋಜನೆ

ಉಚಿತವಾಗಿ ಪಡಿತರ ವ್ಯವಸ್ಥೆ ತಲುಪಿಸುವ ಯೋಜನೆ

ಮುಂದಿನ ದಿನಗಳಲ್ಲಿ ನಗರದಲ್ಲಿನ ಅಸುರಕ್ಷಿತ ಸ್ಥಳಗಳನ್ನು ಗುರುತಿಸಿ ಮೊಹಲ್ಲಾ ಮಾರ್ಷಲ್‌ಗಳನ್ನು ನೇಮಿಸುವುದು ಮತ್ತು ಮನೆ ಬಾಗಿಲಿಗೆ ಉಚಿತವಾಗಿ ಪಡಿತರ ವ್ಯವಸ್ಥೆ ತಲುಪಿಸುವ ಯೋಜನೆ ಇದೆ ಎಂದು ಮಾಹಿತಿ ನೀಡಿದರು.

"ವನಿತಾ ಸಹಸ್ರನಾಮ" ವಿಶೇಷ ಅಭಿಯಾನದ ಅಡಿಯಲ್ಲಿ ಎಎಪಿ ಸೇರಲು ಇಚ್ಚಿಸುವ ಮಹಿಳೆಯರು 7412-042-042 ಕ್ಕೆ ಮಿಸ್ಡ್ ಕಾಲ್ ಕೊಡುವ ಮೂಲಕ ಮತ್ತು 95388 99334 ಕ್ಕೆ ವಾಟ್ಸಾಪ್ ಕಳಿಸಬಹುದು.

ಪ್ರಾಥಮಿಕ ಸದಸ್ಯತ್ವದ ನೋಂದಣಿಗೆ ಚಾಲನೆ

ಪ್ರಾಥಮಿಕ ಸದಸ್ಯತ್ವದ ನೋಂದಣಿಗೆ ಚಾಲನೆ

ಪ್ರಾಥಮಿಕ ಸದಸ್ಯತ್ವದ ನೋಂದಣಿಯೊಂದಿಗೆ, ವಾರ್ಡ್ ಸಂಘಟನೆ ಉಸ್ತುವಾರಿ, ಇನ್ನಿತರ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಇಚ್ಛಿಸುವ ಮಹಿಳೆಯರಿಗೆ, ಪಕ್ಷದಲ್ಲಿ ಅಗತ್ಯ ಬೆಂಬಲ, ಉತ್ತೇಜನ, ನಾಯಕತ್ವದ ತರಬೇತಿ ಮತ್ತು ಬಹಳಷ್ಟು ಅವಕಾಶಗಳಿವೆ ಎಂದು ತಿಳಿಸಿದರು.

ಬಿಬಿಎಂಪಿ ಕ್ಯಾಂಪೇನ್ ಉಸ್ತುವಾರಿ ಶಾಂತಲಾ ದಾಮ್ಲೆ

ಬಿಬಿಎಂಪಿ ಕ್ಯಾಂಪೇನ್ ಉಸ್ತುವಾರಿ ಶಾಂತಲಾ ದಾಮ್ಲೆ

ಕಾರ್ಯಕ್ರಮದಲ್ಲಿ ಬಿಬಿಎಂಪಿ ಕ್ಯಾಂಪೇನ್ ಉಸ್ತುವಾರಿ ಶಾಂತಲಾ ದಾಮ್ಲೆ ಅವರೊಂದಿಗೆ ಕ್ಯಾಂಪೇನ್ ಸಹ ಸಂಚಾಲಕಿ ರೇಣುಕಾಂಬಿಕೆ, ಆಜಾದ್ ನಗರ ವಾರ್ಡ್ ಅಧ್ಯಕ್ಷೆ ಬಿ.ಶಿಲ್ಪ, ಶ್ರೀನಗರ ವಾರ್ಡ್ ಅಧ್ಯಕ್ಷೆ ಸೌಮ್ಯಾ, ನವೀನ್ ಖಾದರ್, ಉಷಾ ಸಂಪತ್ ಕುಮಾರ್, ಟ್ಯೂಲೀಪ್, ಇದ್ದರು. ಉದಯ ಚಂದ್ರಿಕಾ, ಅನಿತಾ, ಹೇಮಾ ಬಾಯಿ ಪಕ್ಷಕ್ಕೆ ಸೇರ್ಪಡೆಯಾದರು. ರವೀಂದ್ರ ಕಲಾ ಕ್ಷೇತ್ರದ ಬಳಿ ಇರುವ ಕಿತ್ತೂರ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ವನಿತಾ ಸಹಸ್ರನಾಮ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಬಜೆಟ್ ನಲ್ಲಿ ಘೋಷಣೆ, ಮಹಿಳೆಯರಿಗೆ ಉಚಿತ ಪ್ರಯಾಣ

ಬಜೆಟ್ ನಲ್ಲಿ ಘೋಷಣೆ, ಮಹಿಳೆಯರಿಗೆ ಉಚಿತ ಪ್ರಯಾಣ

ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವುದು ಕಷ್ಟವಾದ ಕೆಲಸವೇನೂ ಅಲ್ಲ. ಈಗಾಗಲೇ ದೆಹಲಿಯಲ್ಲಿ ಮಹಿಳೆಯರಿಗೆ ಮತ್ತು ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಉಚಿತ ಪ್ರಯಾಣವನ್ನು ಒದಗಿಸಲಾಗಿದೆ .ಇದಕ್ಕಾಗಿ ದೆಹಲಿ ಸರ್ಕಾರ ಕೇವಲ 150 ಕೋಟಿ ರೂಗಳ ವೆಚ್ಚವನ್ನು ಮಾಡುತ್ತಿದೆ.ಈ ಮೊತ್ತವು ರಾಜ್ಯ ಸರ್ಕಾರಕ್ಕೆ ಭರಿಸಲಾರದಷ್ಟು ಹೊರೆಯೇನೂ ಆಗುವುದಿಲ್ಲ ಎಂದು ಆಮ್ ಆದ್ಮಿ ಪಕ್ಷ ಮಾಡಿಕೊಂಡ ಮನವಿ ಮಾಡಿಕೊಂಡಿದ್ದು, ಅದರಂತೆ ಯಡಿಯೂರಪ್ಪ ಅವರು ಬಜೆಟ್ ನಲ್ಲಿ ಕಾರ್ಮಿಕ ಮಹಿಳೆಯರಿಗೆ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿದ್ದಾರೆ.

English summary
A special campaign for women's membership ‘vanitha sahasranama’ has been launched by the Aam Aadmi Party on International Women's Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more