ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸದ್ಯದಲ್ಲೇ ಲೋಕಾರ್ಪಣೆಗೊಳ್ಳಲಿದೆ ಬೃಹತ್ ರಾಷ್ಟ್ರಧ್ವಜ

By Vanitha
|
Google Oneindia Kannada News

ಬೆಂಗಳೂರು, ಸೆ, 03 : ಸಾರ್ವಜನಿಕರಲ್ಲಿ ರಾಷ್ಟ್ರ ಪ್ರೇಮ ಬೆಳೆಸಲು ಹಾಗೂ ರಾಷ್ಟ್ರ ಧ್ವಜದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ವಂದೇ ಮಾತರಂ ಚಾರಿಟೇಬಲ್ ಟ್ರಸ್ಟ್ ಬೃಹತ್ ರಾಷ್ಟ್ರ ಧ್ವಜ ನಿರ್ಮಿಸಿ, ಪ್ರದರ್ಶನ ಏರ್ಪಡಿಸಲು ಮುಂದಾಗಿದೆ.

ಈ ಬೃಹತ್ ರಾಷ್ಟ್ರಧ್ವಜ ನಿರ್ಮಾಣ ಮತ್ತು ಪ್ರದರ್ಶನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘ, ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಅವರ ಸಹಕಾರದಲ್ಲಿ ಜರುಗಲಿದೆ.[ಜಾಲತಾಣಗಳಲ್ಲಿ ನಿರಾತಂಕವಾಗಿ ಧ್ವಜ ಪ್ರದರ್ಶಿಸಿ]

Vande Maataram Charitable trust creates a very biggest Indian National Flag in Bengaluru

ಈ ರಾಷ್ಟ್ರ ಧ್ವಜವು ಸುಮಾರು 150/225 ಅಡಿ ಉದ್ದವಿದ್ದು, ಸೆಪ್ಟೆಂಬರ್ 7ರ ಸೋಮವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಮೊದಲ ಹಂತದ ರಾಷ್ಟ್ರಧ್ವಜ ನಿರ್ಮಾಣ ಕಾರ್ಯ ಹಮ್ಮಿಕೊಂಡಿದ್ದು, ರಾಷ್ಟ್ರಧ್ವಜವು 24 ಗಂಟೆಗಳ ಒಳಗೆ ನಿರ್ಮಾಣವಾಗಲಿದೆ

ಈ ರಾಷ್ಟ್ರ ಧ್ವಜ ನಿರ್ಮಿಸಲು 33,750 ಚದರ ಹತ್ತಿ ಬಟ್ಟೆ ಬಳಕೆಯಾಗುತ್ತದೆ. 15 ರಿಂದ 20 ಹೊಲಿಗೆ ಯಂತ್ರಗಳು, 200 ಮಂದಿ ನುರಿತ ದರ್ಜಿಗಳು, 200 ನೇಕಾರರ ಮೇಲ್ವಿಚಾರಕರು, 3,000 ಮಂದಿ ವಿವಿಧ ಸಹಾಯ ಹಸ್ತ ನೀಡಲಿದ್ದಾರೆ.

ರಾಷ್ಟ್ರಧ್ಜಜದ ಮೇರು ದಿಗ್ಗಜ ಅಶೋಕ ಚಕ್ರವನ್ನು 50 ಮಕ್ಕಳು ಬಿಡಿಸಲಿದ್ದು, 100 ವಿಶಿಷ್ಟ ಚೇತನ ಮಕ್ಕಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಇದರ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಎಂದು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಕೆ. ಯು ಗೋಪಾಲ್ ಭಟ್ ಮಾಹಿತಿ ನೀಡಿದರು.[ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ: ಹೈಲೆಟ್ಸ್]

ಜರುಗುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ವೈಯಕ್ತಿಕ ಪ್ರದರ್ಶನಕ್ಕೆ 3000, ಜೋಡಿ ಪ್ರದರ್ಶನಕ್ಕೆ 4,000, ಮೂರರಿಂದ ನಾಲ್ವರಿಗೆ 5,000, ಆರರಿಂದ ಹತ್ತು ಜನರಿದ್ದಲ್ಲಿ 5,000, 10 ರಿಂದ 20 ಜನರ ಪ್ರದರ್ಶನಕ್ಕೆ 6,000 ರೂ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.

ಮುಂಬೈ ದಾಳಿಯಲ್ಲಿ ಮೃತರಾದ ಸೈನಿಕರ ಸ್ಮರಣಾರ್ಥ ನವೆಂಬರ್ 26 ರಂದು ಈ ರಾಷ್ಟ್ರಧ್ವಜ ಪ್ರದರ್ಶನ ಹಮ್ಮಿಕೊಂಡಿದ್ದೇವೆ. ಈ ಪ್ರದರ್ಶನ ಯಶಸ್ವಿಯಾದಲ್ಲಿ ಎರಡನೇ ಹಂತದಲ್ಲಿ 1000/1500 ಅಡಿ ಉದ್ದದ ರಾಷ್ಟ್ರಧ್ವಜ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಗೋಪಾಲ್ ಭಟ್ ತಿಳಿಸಿದರು.

English summary
Vande Maataram Charitable trust have planned to creates a 150/225 feet very biggest Indian National flag. This Flag exhibition on Thursday, November 26,2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X