ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2023 ಮಾರ್ಚ್‌ನಲ್ಲಿ ಬೆಂಗಳೂರಿಂದ ಹುಬ್ಬಳ್ಳಿಗೆ ವಂದೇ ಭಾರತ್ ರೈಲು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 25: ಕರ್ನಾಟಕವು ತನ್ನ ಮೊದಲ ವಂದೇ ಭಾರತ್ ಹೈಸ್ಪೀಡ್ ರೈಲನ್ನು ಮಾರ್ಚ್ 2023ರೊಳಗೆ ಬೆಂಗಳೂರು- ಹುಬ್ಬಳ್ಳಿಯಿಂದ ಪ್ರಯಾಣಕ್ಕೆ ಲೋಕಾರ್ಪಣೆ ಮಾಡಲಿದೆ. ಬೆಂಗಳೂರಿನಲ್ಲಿ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಅವರು ಸಂಸದ ಲಹರ್ ಸಿಂಗ್ ಅವರಿಗೆ ಈ ಭರವಸೆ ನೀಡಿದ್ದಾರೆ.

ಕರ್ನಾಟಕದಲ್ಲಿ ವಂದೇ ಭಾರತ ರೈಲಿಗಾಗಿ ಸಂಸದರ ಮನವಿಗೆ ಪ್ರತಿಕ್ರಿಯಿಸಿದ ಸಂಜೀವ್ ಕಿಶೋರ್, ಈ ಮಾರ್ಗದಲ್ಲಿ ಡಬ್ಲಿಂಗ್ ಕೆಲಸ ನಡೆಯುತ್ತಿದೆ. ಮಾರ್ಚ್ 2023ರ ವೇಳೆಗೆ ಹೈಸ್ಪೀಡ್ ರೈಲು ಕಾರ್ಯಾಚರಣೆಗೆ ಸಿದ್ಧವಾಗಲಿದೆ ಎಂದು ಹೇಳಿದರು. ಲಹರ್ ಸಿಂಗ್ ಮತ್ತು ಹಲವಾರು ಲೋಕಸಭೆ ಮತ್ತು ರಾಜ್ಯಸಭಾ ಸಂಸದರು ಇತ್ತೀಚೆಗೆ ಕೇಂದ್ರ ರೈಲ್ವೇ ಮತ್ತು ಜವಳಿ ಖಾತೆ ರಾಜ್ಯ ಸಚಿವ ದರ್ಶನ ಜರ್ದೋಶ್ ಅವರೊಂದಿಗೆ ರಾಜ್ಯದ ವಿವಿಧ ರೈಲ್ವೆ ಯೋಜನೆಗಳ ಕುರಿತು ಚರ್ಚಿಸಲು ಸಭೆಯಲ್ಲಿ ಭಾಗವಹಿಸಿದ್ದರು.

ಬುಲೆಟ್‌ ಟ್ರೈನ್‌ಗಾಗಿ ಭಾರತದ ಮೊದಲ ಸಮುದ್ರ ಸುರಂಗ ಮಾರ್ಗ, ಎಲ್ಲಿ?ಬುಲೆಟ್‌ ಟ್ರೈನ್‌ಗಾಗಿ ಭಾರತದ ಮೊದಲ ಸಮುದ್ರ ಸುರಂಗ ಮಾರ್ಗ, ಎಲ್ಲಿ?

ಸಭೆಯಲ್ಲಿ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಶೀಘ್ರ ಚಾಲನೆ ನೀಡಬೇಕು ಮತ್ತು ಯಶವಂತಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳುವಂತೆ ಕೇಂದ್ರ ಸಚಿವರನ್ನು ಒತ್ತಾಯಿಸಲಾಯಿತು.

ಕರ್ನಾಟಕಕ್ಕೆ 2 ರಿಂದ 3 ವಂದೇ ಭಾರತ್ ರೈಲಿಗಾಗಿ ಕೇಂದ್ರ ಸಚಿವರ ಬೇಡಿಕೆಕರ್ನಾಟಕಕ್ಕೆ 2 ರಿಂದ 3 ವಂದೇ ಭಾರತ್ ರೈಲಿಗಾಗಿ ಕೇಂದ್ರ ಸಚಿವರ ಬೇಡಿಕೆ

ಪ್ರಾಯೋಗಿಕ ಆಧಾರದ ಮೇಲೆ ಇ-ಹರಾಜು ವ್ಯವಸ್ಥೆಯನ್ನು ಪ್ರಾರಂಭಿಸುವುದರಿಂದ ಮುಂದಿನ ಮೂರು ವರ್ಷಗಳಲ್ಲಿ ವಾರ್ಷಿಕ 56.31 ಕೋಟಿ ಆದಾಯ ಗಳಿಸಲು ಸೌತ್‌ ವೆಸ್ಟರ್ನ್‌ ರೈಲ್ವೆಗೆ ಸಹಾಯ ಮಾಡಿದೆ. ಇದುವರೆಗೆ ಅಂತಿಮಗೊಂಡ 60 ಬಿಡ್‌ಗಳಲ್ಲಿ ಎಸ್‌ಡಬ್ಲ್ಯುಆರ್‌ನ ಬೆಂಗಳೂರು ವಿಭಾಗವು 47 ಕೋಟಿ ರೂಪಾಯಿ ಮೌಲ್ಯದ 11 ಒಪ್ಪಂದಗಳಿಗೆ ಸಹಿ ಹಾಕಿದೆ.

ಸ್ವತ್ತುಗಳನ್ನು ನಿಷ್ಕ್ರಿಯತೆ ತಡೆಯುತ್ತದೆ

ಸ್ವತ್ತುಗಳನ್ನು ನಿಷ್ಕ್ರಿಯತೆ ತಡೆಯುತ್ತದೆ

ಸಾಂಪ್ರದಾಯಿಕ ವ್ಯವಸ್ಥೆಗೆ ಬದಲಾಗಿ ಭಾರತೀಯ ರೈಲ್ವೇಯು ಈ ವರ್ಷದ ಜೂನ್‌ನಲ್ಲಿ ವ್ಯವಹಾರವನ್ನು ಸುಲಭಗೊಳಿಸಲು ಮತ್ತು ವಹಿವಾಟುಗಳಲ್ಲಿ ಪಾರದರ್ಶಕತೆಯನ್ನು ತರಲು ವಾಣಿಜ್ಯ ಗಳಿಕೆ ಮತ್ತು ಶುಲ್ಕರಹಿತ ಆದಾಯದ ಒಪ್ಪಂದಗಳ ಇ- ಹರಾಜನ್ನು ಪರಿಚಯಿಸಿತು. ಈ ವ್ಯವಸ್ಥೆಯು ಪಾರ್ಕಿಂಗ್ ಸ್ಥಳ, ನಿಲ್ದಾಣಗಳಲ್ಲಿ ಜಾಹೀರಾತು ಸ್ಥಳ, ರೈಲ್ವೆ ಆವರಣ, ಪಾವತಿ ಮತ್ತು ಬಳಕೆ ಶೌಚಾಲಯಗಳು ಮುಂತಾದ ಸ್ವತ್ತುಗಳನ್ನು ನಿಷ್ಕ್ರಿಯಗೊಳಿಸುವುದನ್ನು ತಡೆಯುತ್ತದೆ ಎಂದು ನಿರೀಕ್ಷಿಸಲಾಗಿದೆ.

ಬೆಂಗಳೂರಿನಿಂದ ಓಡಾಡಲಿದೆ ವಂದೇ ಭಾರತ್ ವಿಶೇಷ ರೈಲು, ಎಲ್ಲಿಂದ ಎಲ್ಲಿಗೆ ಪ್ರಯಾಣ ತಿಳಿಯಿರಿಬೆಂಗಳೂರಿನಿಂದ ಓಡಾಡಲಿದೆ ವಂದೇ ಭಾರತ್ ವಿಶೇಷ ರೈಲು, ಎಲ್ಲಿಂದ ಎಲ್ಲಿಗೆ ಪ್ರಯಾಣ ತಿಳಿಯಿರಿ

ಮೈಸೂರು ವಿಭಾಗ 11 ಒಪ್ಪಂದಗಳಿಗೆ ಸಹಿ

ಮೈಸೂರು ವಿಭಾಗ 11 ಒಪ್ಪಂದಗಳಿಗೆ ಸಹಿ

ಹುಬ್ಬಳ್ಳಿ ವಿಭಾಗವು 36 ಗುತ್ತಿಗೆಗಳನ್ನು ಅಂತಿಮಗೊಳಿಸಿದೆ. ಮೈಸೂರು ವಿಭಾಗವು ಒಟ್ಟು 7.51 ಕೋಟಿ ಮತ್ತು 2.8 ಕೋಟಿ ರೂ.ಗಳ ಇ-ಹರಾಜು ಮೂಲಕ 11 ಒಪ್ಪಂದಗಳಿಗೆ ಸಹಿ ಹಾಕಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಾಕಷ್ಟು ಜನಪ್ರಿಯವಾಗುತ್ತಿರುವ ಸಮಯದಲ್ಲಿ ನೈಋತ್ಯ ರೈಲ್ವೆ (ಎಸ್‌ಡ್ಬ್ಲೂಆರ್) ಬೆಂಗಳೂರಿನಿಂದ ಮೂರು ಸ್ಥಳಗಳಿಗೆ ಈ ಹೊಸ ತಲೆಮಾರಿನ ರೈಲುಗಳನ್ನು ಓಡಿಸಲು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು.

ರೈಲ್ವೆ ಮಂಡಳಿಗೆ ಔಪಚಾರಿಕ ಪ್ರಸ್ತಾವ

ರೈಲ್ವೆ ಮಂಡಳಿಗೆ ಔಪಚಾರಿಕ ಪ್ರಸ್ತಾವ

ಈ ಪ್ರಸ್ತಾದಲ್ಲಿ ಬೆಂಗಳೂರಿನಿಂದ ಕೊಯಮತ್ತೂರು, ಬೆಂಗಳೂರಿನಿಂದ ಚೆನ್ನೈ ಮತ್ತು ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗಗಳಾಗಿವೆ. ವಂದೇ ಭಾರತ್‌ ರೈಲಿಗಾಗಿ ಪ್ರಸ್ತಾಪಿಸಲಾದ ಮಾರ್ಗಗಳು ಅವುಗಳ ಜನಪ್ರಿಯತೆ ಮತ್ತು ಕಾರ್ಯಸಾಧ್ಯತೆಯನ್ನು ಆಧರಿಸಿವೆ ಎಂದು ನೈರುತ್ಯ ರೈಲ್ವೆ ಮೂಲಗಳು ತಿಳಿಸಿದ್ದವು. ಈ ಪ್ರಸ್ತಾವನೆಯನ್ನು ರೈಲ್ವೆ ಮಂಡಳಿಗೆ ಔಪಚಾರಿಕವಾಗಿ ಸಲ್ಲಿಸಲಾಗಿದೆ. ಹೊಸ ಸೇವೆಗಳನ್ನು ಪರಿಚಯಿಸುವ ಕುರಿತು ಮಂಡಳಿಯು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ರೈಲುಗಳ ಸಂಖ್ಯೆ, ವೇಳಾಪಟ್ಟಿಗಳು ಮತ್ತು ಇತರೆ ವಿಷಯಗಳನ್ನು ರೈಲ್ವೆ ಮಂಡಳಿಯು ನಿರ್ಧರಿಸುತ್ತದೆ ಎಂದು ತಿಳಿದು ಬಂದಿದೆ.

ಗರಿಷ್ಠ 180 ಕಿಮೀ ವೇಗದಲ್ಲಿ ಓಡುವ ರೈಲು

ಗರಿಷ್ಠ 180 ಕಿಮೀ ವೇಗದಲ್ಲಿ ಓಡುವ ರೈಲು

ವೇಗ, ಸುರಕ್ಷತೆ ಮತ್ತು ಸೇವೆಗಳು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವಿಶಿಷ್ಟ ಲಕ್ಷಣಗಳಾಗಿವೆ ಎಂದು ಇತ್ತೀಚೆಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದ್ದರು. ಮುಂಬೈ ಮತ್ತು ಅಹಮದಾಬಾದ್ ನಡುವೆ ಮೂರನೇ ವಂದೇ ಭಾರತ್‌ನ ಪ್ರಾಯೋಗಿಕ ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಮತ್ತು ರೈಲನ್ನು ಸ್ಥಿರ ಸ್ಥಿತಿಯಲ್ಲಿ ಗರಿಷ್ಠ 180 ಕಿಮೀ ವೇಗದಲ್ಲಿ ಓಡಿಸಲಾಗಿದೆ. ಇದು 52 ಸೆಕೆಂಡುಗಳಲ್ಲಿ 0-100 kmph ಅನ್ನು ತಲುಪಬಲ್ಲದು. ಇದಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರಿಂದ ಹಸಿರು ನಿಶಾನೆ ದೊರೆತಿದೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ 75 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಹೊರತರಲಿದೆ ಎಂದು ಸಚಿವರು ತಿಳಿಸಿದ್ದರು.

English summary
Karnataka will inaugurate its first Vande Bharat High Speed ​​Train for Bengaluru-Hubballili journey by March 2023
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X