ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಂದೇ ಭಾರತ್ ; ಮುಂದಿನ ವಾರ ಬೆಂಗಳೂರಿಗೆ 7 ವಿಮಾನ ಆಗಮನ

|
Google Oneindia Kannada News

ಬೆಂಗಳೂರು, ಜೂನ್ 25 : ವಂದೇ ಭಾರತ್ ಮಿಷನ್‌ನ 3ನೇ ಹಂತದ ಕಾರ್ಯಾಚರಣೆಯಲ್ಲಿ ಬೆಂಗಳೂರು ನಗರಕ್ಕೆ 7 ವಿಮಾನಗಳು ಆಗಮಿಸಲಿವೆ. ಮುಂದಿನ ವಾರ ಅಮೆರಿಕದಿಂದ ಕನ್ನಡಿಗರು ಆಗಮಿಸಲಿದ್ದಾರೆ.

Recommended Video

SSLC Exam : ತಮಿಳುನಾಡು, ಆಂಧ್ರದಲ್ಲಿಲ್ಲ, ಕರ್ನಾಟಕದಲ್ಲೇಕೆ SSLC ಪರೀಕ್ಷೆ?| Oneindia Kannada

7 ವಿಮಾನಗಳು ಸಹ ಸ್ಯಾನ್ ಫ್ರಾನ್ಸಿಸ್ಕೊನಿಂದ ಹೊರಡಲಿದ್ದು ದೆಹಲಿಗೆ ಆಗಮಿಸಿ ಬಳಿಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಸೇರಲಿದೆ. ಆದರೆ ಈ ವಿಮಾನದಲ್ಲಿ ಪ್ರಜೆಗಳನ್ನು ತವರು ದೇಶಕ್ಕೆ ಕರೆತರಲು ಅಮೆರಿಕ ಒಪ್ಪಿಗೆ ನೀಡಿಲ್ಲ.

ವಂದೇ ಭಾರತ್ ಮಿಷನ್: ಈವರೆಗೂ 2.5 ಲಕ್ಷ ಭಾರತೀಯರು ವಾಪಸ್ವಂದೇ ಭಾರತ್ ಮಿಷನ್: ಈವರೆಗೂ 2.5 ಲಕ್ಷ ಭಾರತೀಯರು ವಾಪಸ್

ಒಟ್ಟು 1,183 ಕನ್ನಡಿಗರು ಸ್ಯಾನ್ ಫ್ರಾನ್ಸಿಸ್ಕೊನಿಂದ ಬೆಂಗಳೂರಿಗೆ ಆಗಮಿಸಲಿದ್ದಾರೆ. 169 ಪ್ರಯಾಣಿಕರು ಇರುವ ಮೊದಲ ವಿಮಾನ ಬುಧವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 ವಂದೇ ಭಾರತ್ ಮಿಷನ್: ಕಳೆದ 15 ಗಂಟೆಗಳಲ್ಲಿ ಏರ್‌ ಇಂಡಿಯಾದ 22,000 ಟಿಕೆಟ್ ಮಾರಾಟ ವಂದೇ ಭಾರತ್ ಮಿಷನ್: ಕಳೆದ 15 ಗಂಟೆಗಳಲ್ಲಿ ಏರ್‌ ಇಂಡಿಯಾದ 22,000 ಟಿಕೆಟ್ ಮಾರಾಟ

Vande Bharat Mission 3rd Phase 7 Air India Flight To Bengaluru

ವಂದೇ ಭಾರತ್ ಮಿಷನ್‌ ಅಡಿ ಹಾರಾಟ ನಡೆಸುವ ವಿಮಾನದಲ್ಲಿ ಅಮೆರಿಕದ ಪ್ರಜೆಗಳು ದೇಶಕ್ಕೆ ವಾಪಸ್ ಆಗಲು ಅಮೆರಿಕೆ ನಿರ್ಬಂಧ ಹೇರಿದೆ. ಆದ್ದರಿಂದ ಭಾರತದಿಂದಿ ವಿಮಾನದಲ್ಲಿ ಸಿಬ್ಬಂದಿಗಳು ಮಾತ್ರ ಸಂಚಾರ ನಡೆಸಲಿದ್ದಾರೆ.

ವಂದೇ ಭಾರತ್ ಮಿಷನ್ 3: ಸ್ವದೇಶಕ್ಕೆ ಮರಳಲು ಹೆಚ್ಚಿದ ಬೇಡಿಕೆ ವಂದೇ ಭಾರತ್ ಮಿಷನ್ 3: ಸ್ವದೇಶಕ್ಕೆ ಮರಳಲು ಹೆಚ್ಚಿದ ಬೇಡಿಕೆ

ಅಮೆರಿಕ ಮಾತ್ರವಲ್ಲ ಭಾರತದಿಂದ ತನ್ನ ದೇಶದ ಪ್ರಜೆಗಳು ವಂದೇ ಭಾರತ್ ಮಿಷನ್ ಅಡಿ ಹಾರಾಟ ನಡೆಸುವ ವಿಮಾನದಲ್ಲಿ ಆಗಮಿಸುವಂತಿಲ್ಲ ಎಂದು ಫ್ರಾನ್ಸ್‌ ಸರ್ಕಾರವೂ ನಿರ್ಬಂಧ ಹೇರಿದೆ. ಆದರೆ ಪ್ಯಾರೀಸ್‌ನಿಂದ ಭಾರತೀಯರು ವಾಪಸ್ ತೆರಳಲು ಅನುಮತಿ ನೀಡಲಾಗಿದೆ.

ವಂದೇ ಭಾರತ್ ಮಿಷನ್‌ನ 3ನೇ ಹಂತದ ಕಾರ್ಯಾಚರಣೆಯಲ್ಲಿ 35 ವಿಮಾನಗಳು ಬೇರೆ-ಬೇರೆ ದೇಶಗಳಿಂದ ಬೆಂಗಳೂರು ನಗರಕ್ಕೆ ಆಗಮಿಸಲಿವೆ. ವಿಮಾನದಲ್ಲಿ ಬಂದ ಎಲ್ಲರೂ ಅವರ ಖರ್ಚಿನಲ್ಲಿಯೇ ಕ್ವಾರಂಟೈನ್‌ನಲ್ಲಿ ಇರಲಿದ್ದು, ಬಳಿಕ ಮನೆಗೆ ವಾಪಸ್ ಆಗಲಿದ್ದಾರೆ.

English summary
7 Air India flight will land in Bengaluru Kempegowda international airport under Vande Bharat mission. 1,183 passengers will come to Karnataka from San Francisco.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X