ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಂದೇ ಭಾರತ್ ಮಿಷನ್; ಬೆಂಗಳೂರಿಗೆ ಬಂದ 353 ಕನ್ನಡಿಗರು

|
Google Oneindia Kannada News

ಬೆಂಗಳೂರು, ಮೇ 24 : ವಂದೇ ಭಾರತ್ ಮಿಷನ್ ಅಡಿ 15 ಮತ್ತು 16ನೇ ವಿಮಾನ ಬೆಂಗಳೂರಿಗೆ ಆಗಮಿಸಿದೆ. ಟೊರೊಂಟೊ ಮತ್ತು ಮೆಲ್ಬೋರ್ನ್‌ನಿಂದ ಒಟ್ಟು 353 ಪ್ರಯಾಣಿಕರು ನಗರಕ್ಕೆ ಆಗಮಿಸಿದ್ದು, ಕ್ವಾರಂಟೈನ್‌ಗೆ ಕಳುಹಿಸಲಾಗಿದೆ.

ಕೆನಡಾದ ಟೊರೊಂಟೊದಿಂದ ಹೊರಟಿದ್ದ ವಿಮಾನ ಭಾನುವಾರ ಮುಂಜಾನೆ 3.45ಕ್ಕೆ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ವಂದೇ ಭಾರತ್ ಮಿಷನ್ ಅಡಿ ಬೆಂಗಳೂರಿಗೆ ಬಂದ 16ನೇ ವಿಮಾನವಿದು.

ಪ್ರಯಾಣಿಕರ ಸ್ವಾಗತಕ್ಕೆ ಸಿದ್ಧವಾದ ಬೆಂಗಳೂರು ವಿಮಾನ ನಿಲ್ದಾಣಪ್ರಯಾಣಿಕರ ಸ್ವಾಗತಕ್ಕೆ ಸಿದ್ಧವಾದ ಬೆಂಗಳೂರು ವಿಮಾನ ನಿಲ್ದಾಣ

ಏರ್ ಇಂಡಿಯಾ ವಿಮಾನದಲ್ಲಿ 11 ಮಕ್ಕಳು ಸೇರಿದಂತೆ 84 ಪುರುಷರು ಮತ್ತು 62 ಮಹಿಳೆಯರು ಸೇರಿ 146ಜನರು ಆಗಮಿಸಿದರು. ಇದ್ದಾರೆ. ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳು ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿದ್ದು, ಯಾವುದೇ ಪ್ರಯಾಣಿಕರಲ್ಲಿ ಕೊರೋನಾ ಸೋಂಕು ಪತ್ತೆಯಾಗಿಲ್ಲ.

ಅಮೆರಿಕದಿಂದ ಬಂದ 21 ಮಂದಿಗೆ ಕೊರೊನಾ ಸೋಂಕುಅಮೆರಿಕದಿಂದ ಬಂದ 21 ಮಂದಿಗೆ ಕೊರೊನಾ ಸೋಂಕು

ವಿಮಾನ ಹೈದರಾಬಾದ್‌ಗೆ ತೆರಳಿದ್ದು, ಎಲ್ಲಾ ಪ್ರಯಾಣಿಕರನ್ನು 14 ದಿನಗಳ ಕ್ವಾರಂಟೈನ್‌ಗಾಗಿ ಹೋಟೆಲ್‌ಗಳಿಗೆ ಕಳುಹಿಸಿಕೊಡಲಾಗಿದೆ.

Vande Bharat Mission 353 Passengers Come To KIA

15ನೇ ವಿಮಾನ: ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಿಂದ ಶನಿವಾರ ರಾತ್ರಿ 9.55ಕ್ಕೆ 15ನೇ ವಿಮಾನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿತು. ವಿಮಾನದಲ್ಲಿ 1 ಮಗು, 99 ಪುರುಷರು ಮತ್ತು 107 ಮಹಿಳೆಯರು ಸೇರಿ 207 ಜನರಿದ್ದರು. ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿದ್ದು, 14 ದಿನಗಳ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ.

ಶ್ರೀನಗರ; ಕೋವಿಡ್ - 19 ರೋಗಿಗೆ ಚಿಕಿತ್ಸೆ ನೀಡುತ್ತಿದ್ದ 4 ವೈದ್ಯರಿಗೆ ಸೋಂಕು ಶ್ರೀನಗರ; ಕೋವಿಡ್ - 19 ರೋಗಿಗೆ ಚಿಕಿತ್ಸೆ ನೀಡುತ್ತಿದ್ದ 4 ವೈದ್ಯರಿಗೆ ಸೋಂಕು

ಶನಿವಾರ ದುಬೈನಿಂದ 180, ಸಿಂಗಪುರದಿಂದ 148 ಪ್ರಯಾಣಿಕರು ಬೆಂಗಳೂರು ನಗರಕ್ಕೆ ಆಗಮಿಸಿದ್ದಾರೆ. ಸೋಮವಾರದಿಂದ ದೇಶಿಯ ವಿಮಾನ ಹಾರಾಟ ಆರಂಭವಾಗಲಿದ್ದು ವಿಮಾನ ನಿಲ್ದಾಣದಲ್ಲಿ ಜನ ಸಂದಣಿ ಹೆಚ್ಚಲಿದೆ.

English summary
353 passengers come to Kempegowda international airport Bengaluru from Toronto and Melbourne under Vande Bharat Mission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X