ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ಯಾರಿಸ್‌ನಿಂದ ಬೆಂಗಳೂರಿಗೆ ಬಂದ 172 ಕನ್ನಡಿಗರು

|
Google Oneindia Kannada News

ಬೆಂಗಳೂರು, ಮೇ 28 : ವಂದೇ ಭಾರತ್ ಮಿಷನ್ ಅಡಿ 21ನೇ ವಿಮಾನ ಬೆಂಗಳೂರಿಗೆ ಆಗಮಿಸಿದೆ. ಲಾಕ್ ಡೌನ್ ಪರಿಣಾಮ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಸಿಲುಕಿದ್ದ 172 ಕನ್ನಡಿಗರು ನಗರಕ್ಕೆ ಆಗಮಿಸಿದ್ದು, ಕ್ವಾರಂಟೈನ್‌ಗೆ ತೆರಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏರ್ ಇಂಡಿಯಾ ವಿಮಾನ ಗುರುವಾರ ಸಂಜೆ ಆಗಮಿಸಿತು. ವಿಮಾನದಲ್ಲಿ 123 ಪುರುಷರು, 48 ಮಹಿಳೆಯರು ಸೇರಿ 172 ಪ್ರಯಾಣಿಕರಿದ್ದರು.

ವಂದೇ ಭಾರತ್ ಮಿಷನ್ ಅಡಿ ಬೆಂಗಳೂರಿಗೆ ಆಗಮಿಸಿದ 21ನೇ ಏರ್ ಇಂಡಿಯಾ ವಿಮಾನ ಇದಾಗಿದೆ. ಬೆಂಗಳೂರಿನಿಂದ ವಿಮಾನ ಕೇರಳದ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಹಾರಿತು.

Vande Bharat Mission 21st Flight Landed In KIA Bengaluru

ವಿಮಾನ ಆಗಮಿಸುತ್ತಿದ್ದಂತೆ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳು ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿದರು. ಯಾವುದೇ ಪ್ರಯಾಣಿಕರಿಗೆ ಕೋವಿಡ್ - 19 ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ.

"ಎಲ್ಲಾ ಪ್ರಯಾಣಿಕರನ್ನು 14 ದಿನಗಳ ಕ್ವಾರಂಟೈನ್‌ಗಾಗಿ ಹೋಟೆಲ್‌ಗಳಿಗೆ ಕಳುಹಿಸಿ ಕೊಡಲಾಯಿತು" ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದ್ದಾರೆ.

ಬುಧವಾರ ಐರ್ಲೆಂಡ್‌ನ ದುಬ್ಲಿನ್‌ನಿಂದ 136 ಪ್ರಯಾಣಿಕರು ಬೆಂಗಳೂರಿಗೆ ಆಗಮಿಸಿದ್ದರು. ಮೇ 26ರಂದು ನ್ಯೂಯಾರ್ಕ್‌ನಿಂದ 310 ಪ್ರಯಾಣಿಕರು ನಗರಕ್ಕೆ ಆಗಮಿಸಿದ್ದರು. ಎಲ್ಲಾ ಪ್ರಯಾಣಿಕರ ಆರೋಗ್ಯ ತಪಾಸಣೆಯನ್ನು ಕಡ್ಡಾಯವಾಗಿ ನಡೆಸಲಾಗುತ್ತಿದೆ.

English summary
Under Vande Bharat Mission 21st flight landed in Kempegowda international airport, Bengaluru on May 28, 2020. 172 passengers come to city from Paris.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X