ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಲ್ಮೀಕಿ ಜಯಂತಿ: ಸಚಿವ ಶ್ರೀರಾಮುಲು ಎದುರು ಮೀಸಲಾತಿಗಾಗಿ ಘೋಷಣೆ!

|
Google Oneindia Kannada News

ಬೆಂಗಳೂರು, ಅ. 31: ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರ ಎದುರೇ ವಾಲ್ಮೀಕಿ ಸಮುದಾಯ ಮೀಸಲಾತಿಗಾಗಿ ಮತ್ತೊಮ್ಮೆ ಸರ್ಕಾರದ ಗಮನ ಸೆಳೆದಿದೆ. ಬೆಂಗಳೂರಿನ ಶಾಸಕರ ಭವನದ ವಾಲ್ಮೀಕಿ ತಪೋವನದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಸಚಿವ ಶ್ರೀರಾಮುಲು ಹಾಗೂ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ಪುಷ್ಪಾರ್ಚನೆ ಮೂಲಕ ಗೌರವ ಸಮರ್ಪಿಸಿದರು.

Recommended Video

Yediyurappa Valmiki ನಾಯಕರಿಗೆ ಒಳ್ಳೇದೇ ಮಾಡ್ತಾರೆ | Sriramulu | Oneindia Kannada

ಇದೇ ಸಂದರ್ಭದಲ್ಲಿ ವಾಲ್ಮೀಕಿ‌ ಪ್ರತಿಮೆಯ ಎದುರು ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ವಾಲ್ಮೀಕಿ ಜ್ಯೋತಿಯನ್ನು ಸಚಿವ ಶ್ರೀರಾಮುಲು ಅವರಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಶ್ರೀರಾಮುಲು ಸಮ್ಮುಖದಲ್ಲೇ ಮೀಸಲಾತಿಗಾಗಿ ಹೋರಾಟದ ಘೋಷಣೆ ಕೇಳಿ ಬಂದಿತು. ನಂತರ ಮಾತನಾಡಿದ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರು, ವಾಲ್ಮೀಕಿ ನಾಯಕ ಜನಾಂಗಕ್ಕೆ ಶೇಕಡಾ 7.5 ಒಳಮೀಸಲಾತಿ ಕಲ್ಪಿಸಬೇಕೆಂಬ ಒತ್ತಾಯವನ್ನು ಪ್ರಸ್ತಾಪಿಸಿದರು.

Valmiki Community Once Again Drawn Attention Of Govt For Reservation

ಪ್ರಸಕ್ತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ನವೆಂಬರ್ 10 ರಿಂದ ಡಿಸೆಂಬರ್ 10ರೊಳಗಾಗಿ ಮೀಸಲು ನಿಗದಿ ಮಾಡಿ ಆದೇಶ ಹೊರಡಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ನಮಗೆ ಶ್ರೀರಾಮುಲು ಅವರ ಬಗ್ಗೆ ವಿಶ್ವಾಸವಿದೆ. ಅಲ್ಲಿಯವರೆಗೆ ಕಾಯುತ್ತೇವೆ ಎಂದು ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದರು.

Valmiki Community Once Again Drawn Attention Of Govt For Reservation

ಸಿಎಂ ಬಿ ಎಸ್ ಯಡಿಯೂರಪ್ಪ ಹಾಗೂ ಸರ್ಕಾರವು ಕೊಟ್ಟ ಮಾತಿನಂತೆ ಭರವಸೆ ಉಳಿಸಿಕೊಳ್ಳುತ್ತೇವೆ. ನೀತಿ ಸಂಹಿತೆ ಕಾರಣ ಈಗ ಘೋಷಣೆ ಮಾಡುವಂತಿಲ್ಲ ಎಂದು ಇದೇ ಸಮದರ್ಭದಲ್ಲಿ ಶ್ರೀರಾಮುಲು ಅವರು ಭರವಸೆ ನೀಡಿದರು.

English summary
Valmiki community has once again drawn attention of state government for reservation in front of Social Welfare Minister Sriramulu. Maharishi Valmiki statue was honored by Minister Sriramulu and Prasannanadapuri Swamiji at the Valmiki Tapovan of the LH in Bengaluru. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X