ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Happy Valentind's Day: ವಾಟಾಳ್ ನಾಗರಾಜ್ ಮಾಡಿಸಿದರು ಡಿಫರೆಂಟ್ ಮದುವೆ

|
Google Oneindia Kannada News

ಬೆಂಗಳೂರು, ಫೆಬ್ರವರಿ.14: ಸಂಗಾತಿಗಳ ಸಂಭ್ರಮಕ್ಕೆ ಪ್ರೇಮಿಗಳ ದಿನ ಎಂದರೆ ಒಂದು ರೀತಿ ಹಬ್ಬವೇ ಸರಿ. ದೇಶಾದ್ಯಂತ ಶುಕ್ರವಾರ ಪ್ರೇಮಿಗಳ ದಿನವನ್ನು ಸಂಭ್ರಮದಿಂದ ಪ್ರೇಮಿಗಳು ಆಚರಿಸಿದರು. ಇದೇ ದಿನ ಬೆಂಗಳೂರು ಒಂದು ವಿಶೇಷ ಮದುವೆಗೆ ಸಾಕ್ಷಿಯಾಯಿತು.

ಪ್ರೇಮಿಗಳ ದಿನದಂದೇ ಈ ವಿಶೇಷ ಮದುವೆಯನ್ನು ಮಾಡಿಸಿದ್ದು ಬೇರೆ ಯಾರೂ ಅಲ್ಲ. ಒನ್ ಆಂಡ್ ಒನ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್. ನಗರದ ಕಬ್ಬನ್ ಪಾರ್ಕ್ ನಲ್ಲಿ ಎರಡು ಕುದುರೆಗಳಿಗೆ ವಾಟಾಳ್ ಮುಂದೆ ನಿಂತು ಮದುವೆ ಮಾಡಿಸಿದರು.

ಮಾಯಾಜಿಂಕೆಯಲ್ಲಿ ಮಾಯವಾದೆ.. ಪ್ರೇಮಪಕ್ಷಿಯಾಗಿ ಹಾರಿಹೋದೆ...ಮಾಯಾಜಿಂಕೆಯಲ್ಲಿ ಮಾಯವಾದೆ.. ಪ್ರೇಮಪಕ್ಷಿಯಾಗಿ ಹಾರಿಹೋದೆ...

ರಾಜ ಮತ್ತು ರಾಣಿ ಎಂಬ ಎರಡು ಕುದುರೆಗಳಿಗೆ ಶಾಸ್ತ್ರೋಕ್ತವಾಗಿ ವಿವಾಹ ಮಹೋತ್ಸವನ್ನು ನಡೆಸಲಾಯಿತು. ಈ ವೇಳೆ ಸಂಗೀತ ನಾದಸ್ವರದ ಮಧ್ಯೆ ರಾಣಿ ಎಂಬ ಹೆಣ್ಣು ಕುದುರೆಗೆ ಮಂಗಳಸೂತ್ರಧಾರಣೆ ಮಾಡಲಾಯಿತು.

Valentines Day Special: Different Marriage Between Two Horses In Banglore

ಪ್ರೇಮಿಗಳ ದಿನ ವಿಶೇಷ ಆಚರಣೆ ಮೊದಲಲ್ಲ:

ಪ್ರೇಮಿಗಳ ದಿನದ ಆಚರಣೆಯನ್ನು ಸಾಕಷ್ಟು ಜನರು ವಿರೋಧಿಸುತ್ತಾರೆ. ಆದರೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾತ್ರ ಇದಕ್ಕೆ ತದ್ವಿರುದ್ಧ. ಪ್ರೇಮಿಗಳ ಪರ ಮಾತನಾಡುವ ವಾಟಾಳ್ ನಾಗರಾಜ್ ಇಂಥ ವಿಭಿನ್ನ ಹೋರಾಟಗಳಿಂದಲೇ ಹೆಚ್ಚು ಪ್ರಸಿದ್ಧಿ ಪಡೆದವರು. ಕಳೆದ ವರ್ಷ ಎರಡು ಕುರಿಗಳಿಗೆ ವಿವಾಹ ನಡೆಸುವ ಮೂಲಕ ವಾಟಾಳ್ ನಾಗರಾಜ್ ಗಮನ ಸೆಳೆದಿದ್ದರು. ಇನ್ನು, ಪ್ರೇಮಿಗಳಿಗೆ ಕೇಂದ್ರ ಸರ್ಕಾರವು 1 ಲಕ್ಷ ರೂಪಾಯಿ ಮತ್ತು ರಾಜ್ಯ ಸರ್ಕಾರದಿಂದ 50 ಸಾವಿರ ರೂಪಾಯಿ ನೀಡಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ದು, ಸಾಕಷ್ಟು ಸುದ್ದಿಯಾಗಿತ್ತು.

English summary
Valentine's Day Special: Different Marriage Between Two Horses In Banglore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X