ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರೇಮಿಗಳ ದಿನ ವಿಶೇಷ ಬೆಂಗಳೂರಿನಿಂದ 5.15 ಲಕ್ಷ ಕೆಜಿ ಗುಲಾಬಿ ರಫ್ತು

|
Google Oneindia Kannada News

ಬೆಂಗಳೂರು, ಫೆ.15: ಕೋವಿಡ್ ಬಿಕ್ಕಟ್ಟಿನ ಮಧ್ಯೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(KIAL)ದಲ್ಲಿ ರಫ್ತು ವಹಿವಾಟು ಜೋರಾಗಿ ನಡೆದಿದೆ. ಇದಕ್ಕೆ ಕಾರಣ ಪ್ರೇಮಿಗಳ ದಿನ. ಪ್ರೇಮ ನಿವೇದನೆಗಾಗಿ ವಿಶ್ವದ ಹಲವೆಡೆ ಪ್ರೇಮಿಗಳು ಬಳಸುವುದು ಬೆಂಗಳೂರಿನ ಸುತ್ತ ಮುತ್ತ ಬೆಳೆದ ಗುಲಾಬಿ ಹೂವುಗಳನ್ನು ಎಂಬುದು ವಿಶೇಷ. ಈ ವರ್ಷ ಪ್ರೇಮಿಗಳ ದಿನದಂದು ಗುಲಾಬಿ ಸಾಗಣೆಯಲ್ಲಿ ಎರಡು ಪಟ್ಟು ಹೆಚ್ಚಾಗಿದೆ. ವಿಶ್ವದೆಲ್ಲೆಡೆ ಬೆಂಗಳೂರಿನ ರೈತರು ಬೆಳೆದ ಗುಲಾಬಿ ಪರಿಮಳ ಹರಡಿಕೊಂಡಿದೆ.

ಬೆಂಗಳೂರು ವಿಮಾನ ನಿಲ್ದಾಣವು 2021 ರಲ್ಲಿ 2.7 ಲಕ್ಷ ಕೆಜಿಯಷ್ಟು ಗುಲಾಬಿಗಳನ್ನು 25 ಅಂತಾರಾಷ್ಟ್ರೀಯ ಮತ್ತು ದೇಶಿ ಸ್ಥಳಗಳಿಗೆ ಸಾಗಿಸಿ ದಾಖಲೆ ಬರೆದಿತ್ತು. ಈ ಬಾರಿ ಸುಮಾರು 5.15 ಲಕ್ಷ ಕೆ.ಜಿ ಗುಲಾಬಿ ರಫ್ತು ಮಾಡಲಾಗಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಬಿಐಎಎಲ್) ಸಂಸ್ಥೆ ಅಧಿಕೃತ ಮಾಹಿತಿ ನೀಡಿದೆ.

ಪ್ರೇಮಿಗಳ ದಿನ; ದೇಶ, ವಿದೇಶಕ್ಕೆ ಗುಲಾಬಿ ಕಳಿಸುವ ಚಿಕ್ಕಬಳ್ಳಾಪುರ ರೈತ ಪ್ರೇಮಿಗಳ ದಿನ; ದೇಶ, ವಿದೇಶಕ್ಕೆ ಗುಲಾಬಿ ಕಳಿಸುವ ಚಿಕ್ಕಬಳ್ಳಾಪುರ ರೈತ

ದೇಶಿ ಮಾರುಕಟ್ಟೆಯಲ್ಲಿ ಪ್ರೇಮಿಗಳ ದಿನದ ಋತುವಿನಲ್ಲಿ ಗುಲಾಬಿಗಳ ಬೇಡಿಕೆಯು ಈ ವರ್ಷ ಗಣನೀಯ ಏರಿಕೆ ಕಂಡಿದೆ. ದೇಶಿ ಸಾಗಣೆಗಳು ಗಮನಾರ್ಹ ಸುಧಾರಣೆಯನ್ನು ಕಂಡಿವೆ, 2021 ರಲ್ಲಿ 1.03 ಲಕ್ಷ ಕೆಜಿಗೆ ಹೋಲಿಸಿದರೆ 3.15 ಲಕ್ಷ ಕೆಜಿಗೆ (6.5 ಮಿಲಿಯನ್ ಕಾಂಡಗಳು) ಏರಿಕೆಯಾಗಿದೆ, ಇದು 200 ಪ್ರತಿಶತದಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

Valentine’s Day 2022: Bengaluru Airport Delivers 5.15 Lakh KG Roses to 25 International & Domestic Destinations

ಕಳೆದ ವರ್ಷದ 1.7 ಲಕ್ಷ ಕೆಜಿಗಿಂತ ಈ ವರ್ಷ ಸುಮಾರು 2 ಲಕ್ಷ ಕೆಜಿ (7.3 ಮಿಲಿಯನ್ ಕಾಂಡಗಳು) ಅಂತಾರಾಷ್ಟ್ರೀಯ ಸ್ಥಳಗಳಿಗೆ ರಫ್ತು ಮಾಡಲಾಗಿದೆ.

"ಭಾರತದಲ್ಲಿ ಗುಲಾಬಿಗಳ ಅತಿ ದೊಡ್ಡ ರಫ್ತುದಾರ ತಾಣವಾಗಿ ಬೆಂಗಳೂರು ಗುರುತಿಸಿಕೊಂಡಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ, ತಾಜಾತನವನ್ನು ಕಾಪಾಡಿಕೊಂಡು ತಮ್ಮ ಉತ್ಪನ್ನಗಳ ಸಾಗಣೆಯನ್ನು ಸುಲಭಗೊಳಿಸುವ ಮೂಲಕ ಸ್ಥಳೀಯ ಸಮುದಾಯ, ಬೆಳೆಗಾರರು ಮತ್ತು ಸಾಗಣೆದಾರರಿಗೆ ಸಹಾಯ ಮಾಡುವ ವ್ಯವಸ್ಥೆ ಬಗ್ಗೆ ನಾವು ಹೆಮ್ಮೆಪಡುತ್ತೇವೆ,'' ಎಂದು ಬಿಐಎಎಲ್ ಹೇಳಿದೆ.

ಇಷ್ಟಕ್ಕೂ ಪ್ರೇಮ ನಿವೇದನೆಗೆ ಚೆಂಗುಲಾಬಿಯೇ ಏಕೆ?
"ನಮ್ಮ ಸರಕು ಮೂಲಸೌಕರ್ಯ ತಂತ್ರಜ್ಞಾನದಿಂದ ನಡೆಸಲ್ಪಡುತ್ತಿದೆ, ಇದು ದಕ್ಷಿಣ ಭಾರತದಲ್ಲಿ ಆದ್ಯತೆಯ ಕಾರ್ಗೋ ವಿಮಾನ ನಿಲ್ದಾಣವನ್ನಾಗಿ ಮಾಡುವ ಮೂಲಕ ಹಾಳಾಗುವ ಸರಕುಗಳ ತ್ವರಿತ ವಿತರಣೆಯನ್ನು ಒದಗಿಸುತ್ತದೆ. ನಿರಂತರವಾಗಿ ವಿಕಸನಗೊಳ್ಳುತ್ತಿರುವ ಬೇಡಿಕೆಯನ್ನು ಪೂರೈಸುವ ಹೊಸ ಉಪಕ್ರಮಗಳು ಮತ್ತು ಸೌಲಭ್ಯಗಳನ್ನು ಪರಿಚಯಿಸಲು ನಾವು ನಮ್ಮ ಕಾರ್ಗೋ ಪಾಲುದಾರರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ." ಎಂದು ಬಿಐಎಎಲ್‌ನ ಮುಖ್ಯ ಕಾರ್ಯತಂತ್ರ ಮತ್ತು ಅಭಿವೃದ್ಧಿ ಅಧಿಕಾರಿ ಸತ್ಯಕಿ ರಘುನಾಥ್ ಹೇಳಿದ್ದಾರೆ.

ಬೇಡಿಕೆ ಹೊಂದಿರುವ ಆಮದುದಾರರು
ದೆಹಲಿ, ಮುಂಬೈ, ಕೋಲ್ಕತ್ತಾ, ಗುವಾಹಟಿ ಮತ್ತು ಚಂಡೀಗಢಗಳು ಗುಲಾಬಿಗಳ ಪ್ರಮುಖ ದೇಶೀಯ ತಾಣಗಳಾಗಿವೆ. ಸಿಂಗಪುರ, ಕೌಲಾಲಂಪುರ್, ಲಂಡನ್, ಆಂಸ್ಟರ್‌ಡ್ಯಾಮ್, ಕುವೈತ್, ಆಕ್ಲೆಂಡ್, ಬೈರುತ್, ಮನಿಲಾ, ಮಸ್ಕತ್ ಮತ್ತು ದುಬೈ ಪ್ರಮುಖ ಅಂತಾರಾಷ್ಟ್ರೀಯ ತಾಣಗಳಲ್ಲಿ ಸೇರಿವೆ.

2020-21 ರ ಆರ್ಥಿಕ ವರ್ಷದಲ್ಲಿ, 60,000 ಮೆಟ್ರಿಕ್ ಟನ್‌ಗಳ ಕೋಲ್ಡ್-ಚೈನ್ ಹ್ಯಾಂಡ್ಲಿಂಗ್ ಸಾಮರ್ಥ್ಯವನ್ನು ಹೊಂದಿರುವ ಬೆಂಗಳೂರು ವಿಮಾನ ನಿಲ್ದಾಣವು 48,130 ಮೆಟ್ರಿಕ್ ಟನ್‌ಗಳಷ್ಟು ಹಾಳಾಗುವ ಸರಕು(perishable shipments)ಗಳನ್ನು ಸಂಸ್ಕರಿಸುವ ಮೂಲಕ ಹಾಳಾಗುವ ಸಾಗಣೆಗಾಗಿ ದೇಶದ ಅಗ್ರ ವಿಮಾನ ನಿಲ್ದಾಣವಾಗಿ ಹೊರಹೊಮ್ಮಿದೆ.

Recommended Video

ಅಮೆರಿಕ vs ರಷ್ಯಾ ಯುದ್ಧ ಸಂಭವಿಸಿದ್ರೆ ಭಾರತ ಎದುರಿಸಬೇಕಾದ ಅಪಾಯ,ಸಮಸ್ಯೆಗಳೆನು? | Oneindia Kannada

ಭಾರತದ ಒಟ್ಟು ಹಾಳಾಗುವ ವಸ್ತು(perishable) ಸಾಗಣೆಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಶೇಕಡಾ 31 ರಷ್ಟು ಪಾಲು ಹೊಂದಿದೆ ಮತ್ತು 2020-21 ರ ಆರ್ಥಿಕ ವರ್ಷದಲ್ಲಿ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಬೆಂಗಳೂರು ವಿಮಾನ ನಿಲ್ದಾಣವು ಭಾರತದಲ್ಲಿ ಹೂವಿನ ರಫ್ತಿನಲ್ಲಿ ನಂ. 1 ಸ್ಥಾನದಲ್ಲಿದೆ.

English summary
Enhancing its reputation as the airport of choice for perishables in India, the Bengaluru International Airport witnessed a near two-fold increase in rose shipments in the run-up to Valentine's Day this year amid the Covid crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X