ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಚನದ ಮಹತ್ವ ಸಾರಲು #VachanaForWorld ಅಭಿಯಾನ

By Mahesh
|
Google Oneindia Kannada News

ಇತ್ತೀಚಿಗೆ ರಾಷ್ಟ್ರೀಯ ಪಕ್ಷವೊಂದರ ನಾಯಕರು ಕನ್ನಡದ ವಚನವೊಂದನ್ನು ತಪ್ಪಾಗಿ ಓದಿದರೆಂದು ಸುದ್ದಿಯಾಗಿದೆ. ಬನ್ನಿ ಸರಿಯಾಗಿ ವಚನವನ್ನು ಓದಿ, ಅದನ್ನು ಫೇಸ್ಬುಕ್, ಟ್ವಿಟ್ಟರ್, Instagram ನಲ್ಲಿ ಹಾಕೋಣ.

ನಿಮ್ಮ ಮನೆಯಲ್ಲಿ ಇರುವ ಪುಟ್ಟ ಮಕ್ಕಳು, ಹಿರಿಯರಿಂದ ನಿಮಗಿಷ್ಟವಾದ ವಚನವನ್ನು ಓದಿಸಿ, ಸಾಧ್ಯವಾದರೆ ಅದರ ಅರ್ಥವನ್ನು ಹೇಳಿಸಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿರಿ. ಟ್ವಿಟ್ಟರ್ ನಲ್ಲಿ ಇಡಿ ದಿನ ವಚನಗಳನ್ನು ಪೋಸ್ಟ್ ಮಾಡಿ, ಹಾಗೆ ಪೋಸ್ಟ್ ಮಾಡುವಾಗ #VachanaForWorld ಮತ್ತು #ವಚನ_ಓದು ಟ್ಯಾಗ್ ಬಳಸಿ

ಇತ್ತಿಚೆಗೆ ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ಮಾತನಾಡಬೇಕಾದರೆ ಜಗತ್ತಿನ ಮೊಟ್ಟ ಮೊದಲ ಸಂಸತ್ ಅನುಭವ ಮಂಟಪ ಎಂದು ಉಲ್ಲೇಖಿಸಿದ್ದಾರೆ, ಅದು ಕರ್ನಾಟಕದ ಜನರಿಗೆ ಹೆಮ್ಮೆಯ ವಿಷಯ, ಸುಮಾರು 800ಕ್ಕಿಂತ ಹೆಚ್ಚು ವಚನಕಾರರು ಲಕ್ಷಕ್ಕಿಂತ ಹೆಚ್ಚು ವಚನಗಳನ್ನು ಬರೆದಿದ್ದಾರೆ, ಅದರಲ್ಲಿ ಪ್ರಮುಖರು ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಒಕ್ಕಲಿಗ ಮುದ್ದಣ್ಣ, ಮಡಿವಾಳ ಮಾಚಯ್ಯ, ಮಾದಾರ ಚನ್ನಯ್ಯ, ಹಡಪದ ಅಪ್ಪಣ್ಣ ಇನ್ನೂ ಅನೇಕರು.

{blurb}ಸಮಗ್ರ ವಚನ ಸಾಹಿತ್ಯ ಕನ್ನಡದ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಒಂದು. 11ನೇ ಶತಮಾನದ ಉತ್ತರಾರ್ಧದಲ್ಲಿ ಉದಯಿಸಿ 12ನೇ ಶತಮಾನದ ಕಡೆಯವರೆಗೂ ಬಸವಣ್ಣನವರ-ಜನಸಾಮಾನ್ಯರ ಆಂದೋಲನದ ಭಾಗವಾಗಿ ಬೆಳೆದು ಬಂತು. ಇದು ಸಾಹಿತ್ಯ ಪರಿಭಾಷೆಯ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರದ ಕಾವ್ಯ. ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವಕನ್ನಡದ ವಿಶೇಷ ಕಾವ್ಯ ಪ್ರಕಾರ.

ಮಾನವ ಜಾತಿ, ಧರ್ಮ ಒಂದೇ ಸಾರಿದಲ್ಲದೆ ಅದನ್ನು ನಿಜಜೀವನದಲ್ಲಿಯೂ ಕಾರ್ಯರೂಪಕ್ಕೆ ತಂದವರು ಶಿವಶರಣರು. ಬಸವಣ್ಣನವರ ನೇತೃತ್ವದಲ್ಲಿ ಆತ್ಮ ಶುದ್ಧಿ ಮತ್ತು ಕಾಯಕದ ಮಹತ್ವವನ್ನು ಜಗತ್ತಿಗೇ ತಿಳಿ ಹೇಳಿದ್ದಲ್ಲದೇ ಕಾರ್ಯರೂಪಕ್ಕೂ ತಂದವರು ಶಿವಶರಣರು. ಪ್ರಾಸ, ಛಂದಸ್ಸುಗಳ ಸೋಂಕಿಲ್ಲದೆ, ನಾಡಿನ ಜನರ ಆಡುಭಾಷೆಯಾದ ಕನ್ನಡದಲ್ಲಿಯೇ ಸೀದಾ ಸಾದಾ ನೇರ ನುಡಿಗಳಲ್ಲಿ ರಚಿತ ವಾದವುಗಳು ಶಿವ ಶರಣರ ವಚನಗಳು.

Vachana for World, Come online on Fb or Twitter render Vachanas

ಈ ವಚನಗಳು ಕೇವಲ ದೇವರು, ದಿಂಡಿರುಗಳ ಬಗ್ಗೆ ಮಾತ್ರ ಸೀಮಿತವಾಗದೆ, ಜನಸಾಮಾನ್ಯರ ಜೀವನದಲ್ಲಿ ಹಾಸು ಹೊಕ್ಕಾಗಿರುವ ಸೂಕ್ಷ್ಮ ಸಮಸ್ಯೆಗಳ ಎಳೆಗಳನ್ನು ವಚನಕಾರರ ವಚನಗಳು ಮಾರ್ಮಿಕವಾಗಿ ತಿಳಿಸಿವೆ.

ವಚನ ಸಾಹಿತ್ಯವು ತನ್ನ ಕಾಲದಲ್ಲಿನ ಜನರ ಮನೋಭಿವ್ಯಕ್ತಿಗೆ ಸಂಗಾತಿಯಾಯಿತು. ವಚನ ಎಂದರೆ 'ಪ್ರಮಾಣ', 'ಕೊಟ್ಟ ಮಾತು' ಎಂದರ್ಥ.

ಸಮಾಜದ ಎಲ್ಲಾ ಜಾತಿಯವರೂ ವಚನವನ್ನು ಮುಖ್ಯ ಮಾಧ್ಯಮವನ್ನಾಗಿ ಮಾಡಿಕೊಂಡು, ತಮ್ಮ ಅನುಭವಗಳನ್ನು ಹೇಳಿಕೊಳ್ಳತೊಡಗಿದ್ದರಿಂದ ವಚನ ಸಾಹಿತ್ಯ ಒಂದು ಚಳವಳಿಯೂ ಆಯಿತು

ನುಡಿದರೆ ಮುತ್ತಿನ ಹಾರದಂತಿರಬೇಕು

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು

ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು

ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು

ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮನೆಂತೊಲಿವನಯ್ಯ?

(ಬಸವಣ್ಣ)

ಇದು ಬಸವಣ್ಣನವರ ಸುಪ್ರಸಿದ್ಧ ವಚನಗಳಲ್ಲಿ ಒಂದು. ನಮ್ಮ ನುಡಿ (ಮಾತು) ಹೇಗಿರಬೇಕು ಎನ್ನುವುದರ ಜತೆಗೇ ನಾವು ಹೇಗಿರಬೇಕು ಎನ್ನುವುದನ್ನು ಸೂಚಿಸುತ್ತದೆ. ಈ ವಚನ ಎಷ್ಟು ಸರಳವೂ ಸುಭಗವೂ ಆಗಿದೆಯೆಂದರೆ ಇದನ್ನು ವಿವರಿಸುವ ಅಗತ್ಯವೇ ಇಲ್ಲ

ಇಂತಹ ಅನೇಕ ವಚನಗಳನ್ನು ಕನ್ನಡಲ್ಲಿ ನಮ್ಮ ಶಿವಶರಣರು ರಚಿಸಿ ಮನುಷ್ಯ ಸಮಾಜ ತಿದ್ದುವ ಕೆಲಸ ಮಾಡುತ್ತಾ ಕನ್ನಡಕ್ಕೆ ಅಪಾರ ಕೊಡುಗೆಯಿತ್ತಿದ್ದಾರೆ.

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ.
ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ.
ಕೂಡಲಸಂಗಮದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯಾ.

ನಾನು ಎಲ್ಲರ ಮನೆಯ ಮಗ ಎಂದು ತನೆಗೆ ತಾನೇ ಬಸವಣ್ಣನವರು ಹೇಳಿಕೊಳ್ಳುವ ಈ ವಚನವನ್ನು ನೆನೆಯುತ್ತಾ ನಾವುಗಳು ಕೂಡ ಸಾಧ್ಯವಾದಷ್ಟು ವಚನಗಳನ್ನ ಓದಿ ಫೇಸ್‌ಬುಕ್ ಲೈವ್ ಮಾಡೋಣ ಇಲ್ಲ ವಿಡಿಯೋ ಮಾಡಿ ಪೊಸ್ಟ ಮಾಡೋಣ. ಜೊತೆಗೆ ಕೆಳಗಿನ ಹ್ಯಾಶ್ ಟ್ಯಾಗ್ ಬಳಸಿರಿ.
#VachanaForWorld
#ವಚನ_ಓದು

English summary
Vachana for World, Come online on Fb or Twitter render Vachanas by Basavanna, Akka Mahadevi and others. This event is to show the world the power of Vachanas by Sharanas of Karantaka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X