ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಸಿಕೆ ಕೊರತೆ; ಸರ್ಕಾರದ ಗಮನ ಸೆಳೆದ ಕೃಷ್ಣ ಬೈರೇಗೌಡ

|
Google Oneindia Kannada News

ಬೆಂಗಳೂರು, ಮೇ 12; ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ಲಸಿಕೆಗೆ ಭಾರೀ ಬೇಡಿಕೆ ಬಂದಿದೆ. ಆದರೆ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಲಸಿಕೆ ಕೊರತೆ ಉಂಟಾಗಿದೆ.

ಕಾಂಗ್ರೆಸ್ ನಾಯಕ, ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡ ಲಸಿಕೆ ವಿಚಾರದಲ್ಲಿ ಸರ್ಕಾರದ ಗಮನವನ್ನು ಸೆಳೆದಿದ್ದಾರೆ. ಸರ್ಕಾರದ ಬೆಂಬಲವಿಲ್ಲದೇ ನಾವು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಲಸಿಕೆ ಕೊರತೆ; ಜಾಗತಿಕ ಟೆಂಡರ್ ಮೊರೆ ಹೋದ ರಾಜ್ಯಗಳು ಲಸಿಕೆ ಕೊರತೆ; ಜಾಗತಿಕ ಟೆಂಡರ್ ಮೊರೆ ಹೋದ ರಾಜ್ಯಗಳು

ಬುಧವಾರ ಕೃಷ್ಣ ಬೈರೇಗೌಡ ಫೇಸ್‌ ಬುಕ್‌ನಲ್ಲಿ ಲಸಿಕೆ ಕೊರತೆ ಬಗ್ಗೆ ಪೋಸ್ಟ್ ಹಾಕಿದ್ದಾರೆ. "18-44 ವರ್ಷದ ಜನರು ಮೊದಲ ಡೋಸ್ ಲಸಿಕೆ ಪಡೆಯಲು ಹಲವಾರು ಕರೆಗಳನ್ನು ಮಾಡುತ್ತಿದ್ದಾರೆ. ಅದಕ್ಕಾಗಿ ಸ್ಪಷ್ಟನೆ ನೀಡುತ್ತಿದ್ದೇನೆ" ಎಂದು ತಿಳಿಸಿದ್ದಾರೆ.

ಬೆಂಗಳೂರಲ್ಲಿ ಲಸಿಕೆ ಕೊರತೆ; ಜಿಲ್ಲೆಗಳತ್ತ ಮುಖ ಮಾಡಿದ ಜನರು ಬೆಂಗಳೂರಲ್ಲಿ ಲಸಿಕೆ ಕೊರತೆ; ಜಿಲ್ಲೆಗಳತ್ತ ಮುಖ ಮಾಡಿದ ಜನರು

Vaccine Shortage Krishna Byre Gowda Face Book Post

ನಮಗೆ ಪ್ರತಿದಿನಕ್ಕೆ 10,000 ಡೋಸ್ ಲಸಿಕೆ ಬೇಕಾಗಿದೆ. ಸರ್ಕಾರ 700 ಸರಬರಾಜು ಮಾಡುತ್ತಿದೆ. ಇದರಿಂದಾಗಿ ನಾವು ಪ್ರತಿಯೊಬ್ಬರನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಕೋವಿಡ್ 19: 12-15 ವರ್ಷದವರೆಗೆ ಫೈಜರ್ ಲಸಿಕೆ ಬಳಕೆಗೆ ಅಮೆರಿಕ ಅನುಮತಿಕೋವಿಡ್ 19: 12-15 ವರ್ಷದವರೆಗೆ ಫೈಜರ್ ಲಸಿಕೆ ಬಳಕೆಗೆ ಅಮೆರಿಕ ಅನುಮತಿ

ಸರ್ಕಾರ ನಮ್ಮ ಕ್ಷೇತ್ರದ ಲಸಿಕಾ ಕೇಂದ್ರಗಳಿಗೆ ಕೊವ್ಯಾಕ್ಸಿನ್ ಸರಬರಾಜು ಮಾಡುತ್ತಿಲ್ಲ. ಆರೋಗ್ಯ ಕೇಂದ್ರಗಳಲ್ಲಿ ಸರ್ಕಾರ ಕೇವಲ 45 ವರ್ಷ ಮೇಲ್ಪಟ್ಟವರು 2ನೇ ಡೋಸ್ ಪಡೆಯಲು ಅನುಮತಿ ನೀಡಿದೆ ಎಂದು ಫೇಸ್‌ ಬುಕ್‌ನಲ್ಲಿ ಶಾಸಕರು ಬರೆದಿದ್ದಾರೆ.

ನಮ್ಮ ಲಸಿಕಾ ಕೇಂದ್ರಗಳಲ್ಲಿ 18-44 ವಯೋಮಿತಿಯ ಜನರಿಗೆ ಲಸಿಕೆ ಪೂರೈಕೆ ಮಾಡುತ್ತಿಲ್ಲ. ಕೆಲವು ಆಯ್ದ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿದೆ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ.

Recommended Video

Covishield ತೆಗೆದುಕೊಂಡು ಮೇಲೆ ಏನೆಲ್ಲಾ ಪರಿಣಾಮವಾಗಿದೆ | Oneindia Kannada

ನಾನು ಮುಖ್ಯಮಂತ್ರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಈ ಕುರಿತು ಮನವಿ ಮಾಡಿದ್ದೇನೆ. ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸರ್ಕಾರದ ಬೆಂಬಲವಿಲ್ಲದೇ ನಾವು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

English summary
Former minister and Congress leader Krishna Byre Gowda face book post on the issue of vaccine shortage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X