ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

18-44 ವಯಸ್ಸಿನವರಿಗೆ ಬೆಂಗಳೂರಿನಲ್ಲಿ ಇನ್ನೂ ಸಿಗುತ್ತಿಲ್ಲ ಲಸಿಕೆ

|
Google Oneindia Kannada News

ಬೆಂಗಳೂರು, ಜುಲೈ 02: 18-44ರ ವಯೋಮಾನದವರಿಗೆ ಕೊರೊನಾ ಲಸಿಕೆ ಪಡೆಯಲು ವಾಕ್‌ ಇನ್ ನೋಂದಣಿಗೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟು ತಿಂಗಳು ಕಳೆದಿದೆ. ಆದರೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಇನ್ನೂ ಆದ್ಯತಾ ಗುಂಪುಗಳನ್ನು ಹೊರತುಪಡಿಸಿ ಈ ವಯೋಮಾನದವರು ಲಸಿಕೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಲಸಿಕೆಗೆ ತಮ್ಮ ಸರದಿಗಾಗಿ ಇನ್ನೂ ಲಕ್ಷಾಂತರ ಮಂದಿ ಕಾಯುತ್ತಿದ್ದಾರೆ.

18-44 ವಯೋಮಾನದವರಿಗೆ ಲಸಿಕೆ ನೀಡಲು ಮೇ ತಿಂಗಳಿನಲ್ಲಿ ಪ್ರಧಾನಿ ಮೋದಿ ಆದೇಶಿಸಿದ್ದರು. ಆದರೆ ಇನ್ನೂ ಈ ವಯೋಮಾನದವರಿಗೆ ಬೆಂಗಳೂರಿನಲ್ಲಿ ಲಸಿಕೆ ಪಡೆಯಲು ಸಾಧ್ಯವಾಗಿಲ್ಲ.

Vaccination For 18-44 Age Group Yet To Begin At Govt-Run Centres In Bengaluru

"ಆದ್ಯತಾ ಗುಂಪಿನ ಹೊರತಾಗಿ 18-44 ವಯೋಮಾನದವರಿಗೆ ಸರ್ಕಾರದಿಂದ ಲಸಿಕೆ ನೀಡಿಕೆ ಇನ್ನೂ ಹಲವು ಕಡೆ ಸಾಧ್ಯವಾಗಿಲ್ಲ" ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.

"45 ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಆದ್ಯತೆಯಲ್ಲಿ ಲಸಿಕೆ ನೀಡಲಾಗುತ್ತಿದೆ. ಲಸಿಕೆಗಳಿಗೆ ಇದ್ದಕ್ಕಿದ್ದಂತೆ ಬೇಡಿಕೆ ಹೆಚ್ಚಾಗಿರುವ ಕಾರಣ ಲಸಿಕೆ ಲಭ್ಯತೆ ಸಮಸ್ಯೆಯಾಗಿದೆ. ಈಗ ಕಾಲೇಜು ವಿದ್ಯಾರ್ಥಿಗಳಿಗೂ ಲಸಿಕೆಯನ್ನು ಶೀಘ್ರವಾಗಿ ನೀಡಬೇಕಿರುವುದರಿಂದ ಈ ಸಂಖ್ಯೆಯಲ್ಲಿ ವ್ಯತ್ಯಾಸವಾಗುತ್ತಿದೆ. ದಿನಕ್ಕೆ 80 ರಿಂದ 90 ಸಾವಿರ ಜನಕ್ಕೆ ಲಸಿಕೆ ನೀಡಲಾಗುತ್ತಿದೆ" ಎಂದು ಹೇಳಿದರು.

ಅಂಗವಿಕಲರು, ಸಾರಿಗೆ ಇಲಾಖೆ ಸಿಬ್ಬಂದಿ, ಚಿತಾಗಾರ ಸಿಬ್ಬಂದಿ, ಅಂಚೆ ಇಲಾಖೆ ಸಿಬ್ಬಂದಿ, ಮಾಧ್ಯಮ ಸಿಬ್ಬಂದಿ, ಬೀದಿ ವ್ಯಾಪಾರಿಗಳನ್ನು ಸರ್ಕಾರ ಲಸಿಕೆ ಆದ್ಯತಾ ಪಟ್ಟಿಯಲ್ಲಿ ಸೇರಿಸಿದೆ.

Breaking News: ಕರ್ನಾಟಕದಲ್ಲಿ ತಗ್ಗಿದ ಕೊವಿಡ್-19 ಸಕ್ರಿಯ ಪ್ರಕರಣ
ದಿನಕ್ಕೆ ಒಂದು ಲಕ್ಷ ಲಸಿಕೆ ನೀಡುವುದು ಸರ್ಕಾರದ ಗುರಿ ಎಂಬುದನ್ನು ಒಪ್ಪಿಕೊಂಡಿರುವ ಆಯುಕ್ತ ಗುಪ್ತಾ ಅವರು, "ಈಗಿರುವ ಲಭ್ಯ ಸಂಪನ್ಮೂಲದಲ್ಲಿ ಈ ಗುರಿಯಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಈ ತಿಂಗಳ ನಂತರ ಲಸಿಕಾ ಅಭಿಯಾನ ಚುರುಕುಗೊಳ್ಳಲಿದೆ. ಬೆಂಗಳೂರು ಮಾತ್ರವಲ್ಲದೇ ಇಡೀ ರಾಜ್ಯಕ್ಕೆ ಹೆಚ್ಚಿನ ಲಸಿಕೆ ದೊರೆಯುವ ಸಾಧ್ಯತೆಯಿದೆ" ಎಂದು ಹೇಳಿದ್ದಾರೆ.

"ಸದ್ಯಕ್ಕೆ ರಾಜ್ಯದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುತ್ತಿದ್ದೇವೆ. ಎರಡೂ ಡೋಸ್ ಲಸಿಕೆ ಪೂರ್ಣವಾಗಬೇಕಾದವರೂ ಇದ್ದಾರೆ. ಇದು ಸದ್ಯದ ಸವಾಲಾಗಿದೆ. ಹಲವು ಕಡೆಗಳಲ್ಲಿ 18-44 ವಯಸ್ಸಿನವರಿಗೆ ಲಸಿಕೆ ನೀಡಲಾಗುತ್ತಿದೆ" ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮೇ 10 ನಂತರ 18-44 ವಯೋಮಾನದವರಿಗೆ ಲಸಿಕೆ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಮೇ 14ರಂದು ಲಸಿಕೆ ಕೊರತೆಯಿಂದ ಈ ಕಾರ್ಯಕ್ರಮ ನಿಲ್ಲಿಸಲಾಗಿತ್ತು.

ಜೂನ್ ತಿಂಗಳಿನಲ್ಲಿ ರಾಜ್ಯದಲ್ಲಿ 2.26 ಲಕ್ಷ ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಮಾಹಿತಿ ಒದಗಿಸಿದೆ.

English summary
Vaccination for 18-44 age group yet to begin at govt-run centres barring priority groups in bengaluru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X