ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಕಿಮ್ಸ್ ವೈದ್ಯನ ಪತ್ನಿ ಸೋನಲ್ ಆತ್ಮಹತ್ಯೆ ನಿಗೂಢತೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 17: ನಗರದ ಕಿಮ್ಸ್ ಆಸ್ಪತ್ರೆ ವೈದ್ಯ ಡಾ. ಅವಿನಾಶ್ ಅವರ ಪತ್ನಿ ತಮ್ಮ ಅಪಾರ್ಟ್​ಮೆಂಟ್​ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಉತ್ತರಹಳ್ಳಿ ಮುಖ್ಯರಸ್ತೆ ಪಟಾಲಮ್ಮ ದೇವಸ್ಥಾನದ ಸಮೀಪವಿರುವ ಮಂತ್ರಿ ಆಲ್ ಪೈನ್ ಅಪಾರ್ಟ್ ಮೆಂಟ್ ನ ಐದನೇ ಮಹಡಿಯಿಂದ ಹಾರಿ ಸೋನಲ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭುವನೇಶ್ವರಿನಗರದಲ್ಲಿ ಮನೆಯಲ್ಲೇ ನೇಣಿಗೆ ಶರಣಾದ ವಿದ್ಯಾರ್ಥಿನಿಭುವನೇಶ್ವರಿನಗರದಲ್ಲಿ ಮನೆಯಲ್ಲೇ ನೇಣಿಗೆ ಶರಣಾದ ವಿದ್ಯಾರ್ಥಿನಿ

ಸಾವಿನ ಬಗ್ಗೆ ಶಂಕೆ ಏಕೆ?: ಸೋನಲ್ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ತಮ್ಮ ಫ್ಲಾಟ್ ನಲ್ಲಲ್ಲ. ತನ್ನ ಸ್ನೇಹಿತರ ಅಪಾರ್ಟ್​ಮೆಂಟ್​ಗೆ ಹೋಗಿದ್ದ ಸೋನಾಲ್, ಸ್ನೇಹಿತರ ಮನೆಯಿಂದ ಕೆಳಗೆ ಹಾರಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಡಾ. ಅವಿನಾಶ್ ಅವರು ಕೆಳ ಮಹಡಿಯಲ್ಲಿ ಸ್ನೇಹಿತರ ಜತೆ ಮಾತನಾಡುತ್ತಿದ್ದರು.

Dr Avinash and Sonal

ಘಟನೆ ಬಗ್ಗೆ ತಿಳಿದು ಸ್ಥಳಕ್ಕೆ ಪಶ್ಚಿಮ ವಲಯದ ಡಿಸಿಪಿ ರವಿ ಡಿ ಚನ್ನಣ್ಣನವರ್ ಅವರು ಆಗಮಿಸಿದ್ದಾರೆ. ಮೃತ ಸೋನಾಲ್ ಅವರ ಬಳಿ ಒಳ ಉಡುಪು, ಮೊಬೈಲ್, ಮನೆ ಕೀ ಅಮೆರಿಕನ್ ಡಾಲರ್, ಚಿನ್ನದ ಸರ ಪತ್ತೆಯಾಗಿದೆ.

ಕಳೆದ ಒಂದು ವಾರದ ಕೆಳಗೆ ನಾಪತ್ತೆಯಾಗಿದ್ದ ಫ್ಲಾಟ್ ಕೀಗಳು ಈಗ ಸೋನಾಲ್ ಮೃತದೇಹದ ಬಳಿ ಕಾಣಿಸಿಕೊಂಡಿದೆ.

ಆಘಾತಕಾರಿ ವರದಿ: ಕರ್ನಾಟಕದಲ್ಲೇ ಆತ್ಮಹತ್ಯೆ ಹೆಚ್ಚುಆಘಾತಕಾರಿ ವರದಿ: ಕರ್ನಾಟಕದಲ್ಲೇ ಆತ್ಮಹತ್ಯೆ ಹೆಚ್ಚು

ಸಾಧ್ಯತೆಗಳು: ಡಾ. ಅವಿನಾಶ್ ಹಾಗೂ ಸೋನಾಲ್ ಅವರು ಮದುವೆಯಾಗಿ ಮೂರು ವರ್ಷವಾಗಿದ್ದು, 2 ತಿಂಗಳ ಮಗುವಿದೆ. ಭಾನುವಾರ ಸಂಜೆ 4.30 ರ ಸುಮಾರಿಗೆ ತಮ್ಮ ಮನೆಯಿಂದ ಸ್ನೇಹಿತೆಯ ಮನೆಗೆ ಹೋಗಿದ್ದಾರೆ. 6.30ರ ಸುಮಾರಿಗೆ ಕೆಳಗೆ ಹಾರಿದ್ದಾರೆ.

ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಅಥವಾ ಆಕಸ್ಮಿಕವಾಗಿ ನಡೆದ ಘಟನೆಯಂತೆ ಕಂಡು ಬರುತ್ತಿದೆ. ಶನಿವಾರ, ಭಾನುವಾರದಂದು ಅಪಾರ್ಟ್ಮೆಂಟ್ ಗೆ ಬಂದು ಹೋಗಿರುವವರ ವಿವರಗಳನ್ನು ಪಡೆಯಲಾಗಿದೆ. ಸಿಸಿಟಿವಿ ಫುಟೇಜ್ ಪರಿಶೀಲಿಸಲಾಗುತ್ತಿದೆ.

ಫ್ಲಾಟ್ ಕೀ, ಚಿನ್ನಾಭರಣ ನೋಡಿದರೆ, ಬಹುಶಃ ಸ್ನೇಹಿತರ ಮನೆಯಿಂದ ಅದನ್ನು ಕಸಿದುಕೊಂಡು ಹೋಗುವಾಗ ಸಿಕ್ಕಿ ಬೀಳುವ ಭಯದಿಂದ ಆಕೆ ಆತ್ಮಹತ್ಯೆಗೆ ಮುಂದಾಗಿರಬಹುದು ಅಥವಾ ಅಕಸ್ಮಾತ್ ಮೇಲಿಂದ ಹಾರಿರಬಹುದು. ಸದ್ಯಕ್ಕೆ ಆರ್ ಆರ್ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಡಿಸಿಪಿ ರವಿ ಹೇಳಿದರು.

English summary
Uttarahalli : KIMS doctor Dr Avinash's wife Sonal Agarwal(25) has committed suicide after she fell from fifth floor in Mantri alpyne apartment in the Rajarajeshwari Nagar police station limits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X