• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉತ್ತರಪ್ರದೇಶ ಅತ್ಯಾಚಾರಗಳ ರಾಜಧಾನಿಯಾಗಿದೆ: ಕೆಪಿಸಿಸಿ ಆಕ್ರೋಶ

|

ಬೆಂಗಳೂರು ಅ 08: ದೇಶದಲ್ಲೇ ಅತ್ಯಂತ ಹೆಚ್ಚಿನ ಅತ್ಯಾಚಾರ, ಹತ್ಯೆ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ದಾಖಲಾಗಿವೆ ಎಂದು ನ್ಯಾಷನಲ್‌ ಕ್ರೈಮ್‌ ಬ್ಯೂರೋ ವರದಿ ಮಾಡಿದೆ. ಈ ಮೂಲಕ ಉತ್ತರ ಪ್ರದೇಶ ರಾಜ್ಯ ಹತ್ಯಾಚಾರ ಪ್ರದೇಶವಾಗಿದೆ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಹಾಗೂ ವಿಧಾನ ಪರಿಷತ್‌ ಸದಸ್ಯ ಬಿ.ಕೆ ಹರಿಪ್ರಸಾದ್‌ ಹೇಳಿದರು.

ಮಲ್ಲೇಶ್ವರಂ ಬ್ಲಾಕ್‌ ವತಿಯಿಂದ ಇಂದು ಕುವೆಂಪು ಪ್ರತಿಮೆ ಬಳಿ ಉತ್ತರ ಪ್ರದೇಶ ಸರಕಾರದ ದೌರ್ಜನ್ಯ, ದಬ್ಬಾಳಿಕೆ, ಜನಧ್ವನಿ, ದಮನ ನೀತಿಯ ವಿರುದ್ದ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡುತ್ತಿರುವುದನ್ನು ಖಂಡಿಸಿ ಶಾಂತಿಯುತ ಪ್ರತಿಭಟನೆಯನ್ನು ನಡೆಸಲಾಯಿತು. ಈ ಪ್ರತಿಭಟನೆಯ ನೇತೃತ್ವವನ್ನು ಕಾಂಗ್ರೆಸ್‌ ಹಿರಿಯ ಮುಖಂಡ ಹಾಗೂ ವಿಧಾನಪರಿಷತ್‌ ಸದಸ್ಯ ಬಿ.ಕೆ ಹರಿಪ್ರಸಾದ್‌, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಕೆಂಗಲ್‌ ಶ್ರೀಪಾದ ರೇಣು ವಹಿಸಿಕೊಂಡಿದ್ದರು. ಶಾಂತಿಯುತವಾಗಿ ನಡೆದ ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ಕಾಂಗ್ರೆಸ್‌ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಹತ್ರಾಸ್ ಸಂತ್ರಸ್ತೆಯನ್ನು ಸಂಬಂಧಿಕರೇ ಹೊಡೆದು ಕೊಂದರಾ?

ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಹಿರಿಯ ಮುಖಂಡ ಹಾಗೂ ವಿಧಾನಪರಿಷತ್‌ ಸದಸ್ಯ ಬಿ.ಕೆ ಹರಿಪ್ರಸಾದ್‌ ಮಾತನಾಡಿ, ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್‌ ನೇತೃತ್ವದಲ್ಲಿ ಈ ದೇಶದಲ್ಲಿ ಯಾವುದೇ ಮಹಿಳೆಯರು ಸುರಕ್ಷಿತರಲ್ಲ. ದೇಶದಲ್ಲಿ ಅದರಲ್ಲೂ ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇದಕ್ಕೆ ನ್ಯಾಷನಲ್‌ ಕ್ರೈಮ್‌ ಬ್ಯೂರೋ ನೀಡಿರುವ ಅಂಕಿ ಸಂಖ್ಯೆಗಳೇ ಸಾಕ್ಷಿ. ಈ ನಿಟ್ಟಿನಲ್ಲಿ ಉತ್ತರಪ್ರದೇಶ ಹತ್ಯಾಚಾರಪ್ರದೇಶವಾಗಿ ಪರಿಣಮಿಸಿದೆ ಎಂದು ಅವರು ಆಕ್ರೋಶವ್ಯಕ್ತಪಡಿಸಿದರು.

Fact Check: ಹತ್ರಾಸ್‌ಗೆ ತೆರಳುವಾಗ ರಾಹುಲ್, ಪ್ರಿಯಾಂಕಾ ತಮಾಷೆ ಮಾಡಿ ನಗುತ್ತಿದ್ದರೇ?

   Hathras case : ನಮ್ಮ ಪ್ರೀತಿಗೆ ಒಪ್ಪಿಗೆ ನೀಡದೆ ಹೀಗೆ ಮಾಡ್ಬಿಟ್ರು | Oneindia Kannada

   ಪ್ರತಿಭಟನೆಯ ನೇತೃತ್ವವಹಿಸಿದ್ದ ಕಾಂಗ್ರೆಸ್‌ ಮುಖಂಡ ಕೆಂಗಲ್‌ ಶ್ರೀಪಾದ ರೇಣು ಮಾತನಾಡಿ, ದೇಶದಲ್ಲಿ ಅರಾಜಕತೆ ಹೆಚ್ಚಾಗುತ್ತಿದೆ. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಘಲವಾಗಿದೆ. ದಲಿತ ಯುವತಿಯ ಹತ್ಯಾಚಾರದ ಬಗ್ಗೆ ಒಂದೇ ಒಂದು ಸಂತಾಪ ಹೇಳದೇ ಇರುವುದು ನರೇಂದ್ರ ಮೋದಿ ಅವರ ದಲಿತ ವಿರೋಧಿ ನೀತಿಯನ್ನು ಎತ್ತಿಹಿಡಿಯುತ್ತದೆ ಎಂದು ಹೇಳಿದರು.

   English summary
   Senior Congress leader B.K Hariprasad said Uttar Pradesh has become Capital of Atrocity. Congress held protest against UP government.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X