ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೈ ಬೆರಳಿನಿಂದಲೇ ಎಟಿಎಂ ಮಷಿನ್ ಹ್ಯಾಂಗ್ ಮಾಡಿ ಹಣ ಡ್ರಾ !

|
Google Oneindia Kannada News

ಬೆಂಗಳೂರು, ಮಾರ್ಚ್ 02: ಎಟಿಎಂ ಕಾರ್ಡ್‌ನಿಂದ ಹಣ ಪಡೆಯುವ ಕ್ಷಣದಲ್ಲಿ ಕೈ ಬೆರಳಿಟ್ಟು ಎಟಿಎಂ ಯಂತ್ರವನ್ನೇ ಹ್ಯಾಂಗ್ ಮಾಡಿ ಹಣ ಡ್ರಾ ಮಾಡುತ್ತಿದ್ದ. ಬಳಿಕ ಬ್ಯಾಂಕ್‌ಗೆ ದೂರು ಸಲ್ಲಿಸಿ ಅಲ್ಲಿಂದಲೂ ಹಣ ವಸೂಲಿ ಮಾಡುತ್ತಿದ್ದ. ಒಂದೇ ಟ್ರಾಂಜಕ್ಷನ್‌ಗೆ ಎರಡು ಸಲ ಹಣ ಪಡೆದು ಬ್ಯಾಂಕ್‌ಗಳಿಂದ ಲಕ್ಷಾಂತರ ರೂಪಾಯಿ ಪಡೆದು ಮಾಡಿದ್ದ. ಕ್ರಿಮಿನಲ್ ಐಡಿಯಾ ಮೂಲಕ ಎಟಿಎಂನಲ್ಲಿ ಹಣ ಎಗರಿಸಿ ಬ್ಯಾಂಕ್‌ನಲ್ಲೂ ಹಣ ವಸೂಲಿ ಮಾಡುತ್ತಿದ್ದ ಕಿರಾತಕನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಬಚರೂಲಿ ಮೊಚ್ಡಾ ನಿವಾಸಿ ದೀಪಕ್ ಬಂಧಿತ ಆರೋಪಿ. ಈತನಿಂದ 40 ಕ್ಕೂ ಹೆಚ್ಚು ಎಟಿಎಂ ಕಾರ್ಡ್, 52 ಸಾವಿರ ರೂ. ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದೊಡ್ಡಕಲ್ಲಸಂದ್ರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಈತ ಎಟಿಎಂ ಯಂತ್ರಗಳಲ್ಲಿ ಹಣ ಡ್ರಾ ಮಾಡಿ, ಆನಂತರ ಬ್ಯಾಂಕ್‌ಗಳಿಂದಲೂ ಹಣ ಪಡೆದು ಲಕ್ಷ - ಲಕ್ಷ ಲೂಟಿ ಮಾಡುತ್ತಿದ್ದ. ಹೀಗೆ ಲೂಟಿ ಮಾಡಿದ ಹಣದಲ್ಲಿ ಮೋಜಿನ ನಡೆಸುತ್ತಿದ್ದ.

ಸಿಕ್ಕಿಬಿದ್ದ ಆರೋಪಿ: ಎಂಟಿಎಂಗಳ ತಾಂತ್ರಿಕ ನಿರ್ವಹಣೆ ಮಾಡುವ ಎಂಫಾಸಿಸ್ ಏಜೆನ್ಸಿ ಉಮಾ ಮಹೇಶ್ ಎಂಬುವರು ರಾಜಾಜಿನಗರ ಪೊಲೀಸರಿಗೆ ದೂರು ನೀಡಿದ್ದರು. ರಾಜಕುಮಾರ ರಸ್ತೆಯಲ್ಲಿರುವ ಸೆಂಟ್ರಲ್ ಬ್ಯಾಂಕ್‌ನ ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡಿದ್ದ. ಇದಾದ ಬಳಿಕ ಎಟಿಎಂ ಯಂತ್ರ ಹ್ಯಾಂಗ್ ಆಗಿ ದುಡ್ಡು ಬಂದಿಲ್ಲ ಎಂದು ದೂರು ಕೊಟ್ಟು ಹಣ ವಾಪಸು ಪಡೆದಿದ್ದ. ಈ ಬಗ್ಗೆ ದಾಖಲಾಗಿದ್ದ ದೂರಿನ ಮೇರೆಗೆ ರಾಜಾಜಿನಗರ ಪೊಲೀಸರು ತನಿಖೆ ನಡೆಸಿದಾಗ ದೀಪಕ್‌ನ ಅಸಲಿ ಸಂಗತಿ ಬೆಳಕಿಗೆ ಬಂದಿತ್ತು.

Bengaluru : Uttar Pradesh Based Man Arrested for ATM Frauds

ಉತ್ತರ ಪ್ರದೇಶ ಮೂಲದ ದೀಪಕ್ ಕಮೀಷನ್ ಕೊಡುವುದಾಗಿ ನಂಬಿಸಿ ಸುಮಾರು ಐವತ್ತು ಎಟಿಎಂ ಕಾರ್ಡ್ ಮತ್ತು ಪಿನ್ ನಂಬರ್ ತಂದಿದ್ದ. ಬೆಂಗಳೂರಿನ ಎಟಿಎಂ ಕೇಂದ್ರಗಳಿಗೆ ಹೋಗುತ್ತಿದ್ದ ಈ ಚಾಲಾಕಿ ಹಣ ಡ್ರಾ ಮಾಡಲಿಕ್ಕೆ ಬೆಚ್ಚಿ ಬೀಳುವ ಐಡಿಯಾ ರೂಪಿಸಿಕೊಂಡಿದ್ದ. ಎಟಿಎಂ ಕಾರ್ಡ್ ಹಾಕಿ ಹಣ ಡ್ರಾ ಮಾಡುವಾಗ ಬೆರಳಿಟ್ಟು ಯಂತ್ರವನ್ನು ಹ್ಯಾಂಗ್ ಮಾಡಿಸುತ್ತಿದ್ದ. ಇದೇ ವೇಳೆ ಹಣ ಪಡೆಯುವುದನ್ನು ಕರಗತ ಮಾಡಿಕೊಂಡಿದ್ದ. ಇದನ್ನೇ ಬಿಸಿನೆಸ್ ಮಾಡಿಕೊಂಡಿದ್ದ ದೀಪಕ್ ತನ್ನಲ್ಲಿದ್ದ ಎಟಿಎಂ ಕಾರ್ಡ್ ಬಳಿಸಿ ಹಣ ಡ್ರಾ ಮಾಡಿ ಎಟಿಎಂ ಯಂತ್ರವನ್ನೇ ಹ್ಯಾಂಗ್ ಮಾಡುತ್ತಿದ್ದ. ಆ ಬಳಿಕ ಹಣ ಬಂದಿಲ್ಲ ಎಂದು ದೂರು ಸಲ್ಲಿಸಿ ಹಣವನ್ನು ವಾಪಸು ಪಡೆಯುತ್ತಿದ್ದ. ಹೀಗೆ ನಾನಾ ಬ್ಯಾಂಕ್‌ಗಳಿಂದ ಐದು ಲಕ್ಷ ರೂ.ಗಿಂತಲೂ ಅಧಿಕ ಹಣ ಪಡೆದಿದ್ದ.

Recommended Video

ರಾಹುಲ್ ಕಾಲಿಟ್ಟ ಕಡೆ ಸೋಲು ಖಂಡಿತ !! | Shobha Karandlaje | Rahul Gandhi | Oneindia Kannada

ನಾನಾ ಎಟಿಎಂಗಳಲ್ಲಿ ಇದೇ ಮಾದರಿಯಲ್ಲಿ ಹಣ ಪಡೆದು ಮೋಜು ಜೀವನ ಮಾಡುತ್ತಿದ್ದ ದೀಪಕ್ ನನ್ನ ಪೊಲೀಸರು ಬಂಧಿಸಿದ್ದಾರೆ. ಬಂಧನ ಬಳಿಕ ಈತ ಹಣ ಎಗರಿಸಲು ಬಳಸುತ್ತಿದ್ದ ಬೆರಳು ಟೆಕ್ನಾಲಜಿ ನೋಡಿ ಪೊಲೀಸರೇ ಬೆರಗಾಗಿದ್ದಾರೆ. ಇನ್ನು ದೀಪಕ್ ಜತೆ ಸಹಕರಿಸಿದ್ದ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ರಾಜಾಜಿನಗರ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಎಚ್‌ಡಿಎಫ್ ಸಿ, ಬ್ಯಾಂಕ್ ಆಫ್ ಬರೋಡಾ, ಅಕ್ಷಿಸ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಹೀಗೆ ಎಲ್ಲಾ ಬ್ಯಾಂಕ್ ಗಳಿಗೆ ದೀಪಕ್ ನಾಮ ಹಾಕಿರುವುದು ತನಿಖೆ ವೇಳೆ ಬಹಿರಂಗವಾಗಿದೆ.

English summary
Rajajinagar police have arrested a man accused of hacking and defrauding an ATM machine with his finger know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X