ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಗಲಭೆಗೆ ಯುಟಿ ಖಾದರ್ ಪ್ರಚೋದನಕಾರಿ ಭಾಷಣವೇ ಕಾರಣ: ಲಕ್ಷ್ಮಣ ಸವದಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 20: ಮಂಗಳೂರು ಗಲಭೆಗೆ ಮಾಜಿ ಸಚಿವ ಯುಟಿ ಖಾದರ್ ಅವರ ಪ್ರಚೋದನಕಾರಿ ಭಾಷಣವೇ ಕಾರಣ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿರುವ ಅವರು, ಪೌರತ್ವ ಕಾಯ್ದೆಯಿಂದ ರಾಷ್ಟ್ರದಲ್ಲಿ ಭದ್ರತೆ ಮತ್ತು ಶಾಂತಿಗೆ ಅವಕಾಶ ಸಿಗುತ್ತದೆ. ಆದರೆ ಅದನ್ನು ತಿಳಿಯದೆ ಯುಟಿ ಖಾದರ್ ನೀಡುತ್ತಿರುವ ಪ್ರಚೋದನಕಾರಿ ಹೇಳಿಕೆಯಿಂದ ಗಲಭೆ ನಡೆಯುತ್ತಿದೆ ಎಂದರು.

ಗುಜರಾತ್ ನಲ್ಲಿ ಖಾಕಿ ಮೇಲೆ ಕಲ್ಲು ತೂರಿದವರ ಬಂಧನಗುಜರಾತ್ ನಲ್ಲಿ ಖಾಕಿ ಮೇಲೆ ಕಲ್ಲು ತೂರಿದವರ ಬಂಧನ

ರಾಜ್ಯದಲ್ಲಿ ಶಾಂತಿ ನೆಲೆಸಲು ಎಲ್ಲರೂ ಕೈ ಜೋಡಿಸಬೇಕು, ಕಾನೂನು ಬಂದಿರೋದು ರಾಷ್ಟ್ರದ ಏಕತೆಗಾಗಿ. ಈ ಕಾಯ್ದೆಗೆ ಎಲ್ಲರೂ ಬೆಂಬಲ ನೀಡಬೇಕು. ಪ್ರತಿಭಟನೆ ಜನರ ಹಕ್ಕು, ಆದರೆ ಕೆಎಸ್ ಆರ್‌ಟಿಸಿ ಬಸ್ ಮೇಲೆ ಕಲ್ಲು ತೂರಾಟ ಬೇಡ ಎಂದು ಸವದಿ ಮನವಿ ಮಾಡಿದರು.

UT Khaders Provocative Speech Was Responsible For The Mangaluru Riots

ರೈಲು ಮೇಲೆ ದಾಳಿ ಮಾಡುವವರ ವಿರುದ್ಧ ಗುಂಡು ಹಾರಿಸಿ ಎನ್ನುವ ಕೇಂದ್ರ ಸಚಿವ ಸುರೇಶ ಅಂಗಡಿ ಹೇಳಿಕೆ ವಿಚಾರ ಕುರಿತು ಮಾತನಾಡಿರುವ ಅವರು, ಆವೇಶದ ಭರದಲ್ಲಿ ಅಂಗಡಿಯವರು ಹೇಳಿರಬೇಕು.

ಖಾದರ್ ಅವರ ಪ್ರಚೋದನ ಹೇಳಿಕೆಯಿಂದ‌ ಎಲ್ಲ ಸಮುದಾಯದವರಲ್ಲಿ ತಪ್ಪು ಸಂದೇಶ ರವಾನೆಯಾಗಿದೆ ಎಂದು ಹೇಳಿದರು.

English summary
Deputy Chief Minister Lakshman Savadi Alleged that UT Khaders Provocative Speech Was Responsible For The Mangaluru Riots.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X