ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈದ್ಯಕೀಯ ಸಲಕರಣೆ ಖರೀದಿಯಲ್ಲಿ ಅವ್ಯವಹಾರ: ಯುಟಿ ಖಾದರ್

|
Google Oneindia Kannada News

ಬೆಂಗಳೂರು, ಜುಲೈ 7: ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ವೈದ್ಯಕೀಯ ಸಲಕರಣೆ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಸರ್ಕಾರದ ವಿರುದ್ಧ ಮಾಜಿ ಆರೋಗ್ಯ ಸಚಿವ ಯುಟಿ ಖಾದರ್ ಆರೋಪ ಮಾಡಿದ್ದಾರೆ.

ಸರ್ಕಾರ 1000 ವೆಂಟಿಲೇಟರ್‌ಗಳನ್ನು 120 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಆದರೆ, ಅದರ ಮಾರುಕಟ್ಟೆ ಬೆಲೆ ಕೇವಲ 40 ಕೋಟಿ ಇದೆ. ಇನ್ನೂ 150 ಕೋಟಿ ವೆಚ್ಚದಲ್ಲಿ 4089 ಲಕ್ಷ ಪಿಪಿಇ ಕಿಟ್ ಖರೀದಿ ಮಾಡಿದೆ. ಆದರೆ, ಅದರ ಮಾರುಕಟ್ಟೆ ದರ ಕೇವಲ ರೂ.50 ಕೋಟಿ ಎಂದು ಯುಟಿ ಖಾದರ್ ಮಾತನಾಡಿದ್ದಾರೆ.

ಭಾನುವಾರದ ಕರ್ಫ್ಯೂ ವಿರೋಧಿಸಿದ ಮಾಜಿ ಆರೋಗ್ಯ ಸಚಿವ ಖಾದರ್ಭಾನುವಾರದ ಕರ್ಫ್ಯೂ ವಿರೋಧಿಸಿದ ಮಾಜಿ ಆರೋಗ್ಯ ಸಚಿವ ಖಾದರ್

ಮಾಸ್ಕ್ ಖರೀದಿಯಲ್ಲಿಯೂ ಅವ್ಯವಹಾರ ನಡೆದಿದ್ದು, ಸರ್ಕಾರ 40 ಕೋಟಿನಲ್ಲಿ 10 ಲಕ್ಷ ಮಾಸ್ಕ್ ಖರೀದಿ ಮಾಡಿದೆ. ಇದು ಸರಿ ಇದ್ದರೆ, ಸರ್ಕಾರದ ಪ್ರಕಾರ ಒಂದು ಮಾಸ್ಕ್‌ಗೆ 400 ವೆಚ್ಚ ತಗುಲುತ್ತದೆ. ಅಲ್ಲದೆ, 1,200 ರೂಪಾಯಿಗೆ ಇರುವ ಥರ್ಮಲ್ ಮೀಟರ್ ಗಳಿಗೆ 9,000 ಪಾವತಿ ಮಾಡಿದೆ. 500 ರೂಪಾಯಿ ಇರುವ ಸ್ಯಾನಿಟೈಜರ್‌ಗಳನ್ನು 900 ರೂಪಾಯಿಗೆ ನೀಡಿದೆ ಎಂದು ಖಾದರ್ ಆರೋಪ ಮಾಡಿದ್ದಾರೆ.

UT Khader Accused Govt For Irregularities In The Purchase Of Medical Equipment For Coronavirus

ಕೊರೊನಾ ಬಂದು ಇಷ್ಟು ತಿಂಗಳಾದರೂ, ಸರ್ಕಾರ ರೋಗಿಗಳಿಗೆ ಸರಿಯಾದ

ರೋಗಿಗಳಿಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಿಲ್ಲ ಎಂದಿದ್ದಾರೆ. ಕೊರೊನಾ ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದಿರುವ ಯುಟಿ ಖಾದರ್, ಚಿಕಿತ್ಸೆಯ ನೆಪದಲ್ಲಿ ಸರ್ಕಾರ ಭ್ರಷ್ಟಾಚಾರ ಮಾಡಿದೆ ಎಂದಿದ್ದಾರೆ.

English summary
Former Health Minister UT Khader accused Karnatak Govt for irregularities in the purchase of medical equipment for coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X