ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ASHA ಬಗ್ಗೆ USAID ಇಂಡಿಯಾ ಮಿಷನ್ ನಿರ್ದೇಶಕಿ ವೀಣಾ ರೆಡ್ಡಿ

|
Google Oneindia Kannada News

ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ USAID ಇಂಡಿಯಾ ಮಿಷನ್ ನಿರ್ದೇಶಕಿ ವೀಣಾ ರೆಡ್ಡಿ ಈ ವೇಳೆ ನೀಡಿದ ನೀಡಿದ ಭಾಷಣದ ಸಾರಾಂಶ ಇಲ್ಲಿದೆ..

ಎಲ್ಲರಿಗೂ ನಮಸ್ಕಾರಗಳು!

ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯ ನಿರ್ದೇಶಕ ಡಾ. ಸ್ಪರ್ಜನ್ ಮತ್ತು ಬೇಲರ್ ವಿಶ್ವವಿದ್ಯಾನಿಲಯದ ಡಾ. ಗಾರ್ನರ್ ಅವರ ಸಮರ್ಥ ಮುಂದಾಳತ್ವ ಹಾಗೂ ಈ ಕಾರ್ಯಕ್ರಮವನ್ನು ಸಹಕರಸಿದ್ದಕ್ಕೆ ಧನ್ಯವಾದಗಳು.

USAID ಎಂದು ಪ್ರಸಿದ್ಧವಾಗಿರುವ U.S. ಏಜೆನ್ಸಿ ಫಾರ್ ಇಂಟರ್‌ನ್ಯಾಶನಲ್ ಡೆವಲಪ್‌ಮೆಂಟ್ ಸೇರಿದಂತೆ ಭಾರತದಲ್ಲಿನ U.S. ಮಿಷನ್ ಪರವಾಗಿ ವರ್ಚುವಲ್ ಆಗಿ ನಿಮ್ಮೊಂದಿಗೆ ಇರಲು ಸಾಧ್ಯವಾಗಿರುವುದು ಗೌರವದ ಸಂಗತಿ.

USAID Indian Mission director Veena Reddy speaks about ASHA program Baptist hospital event

ಆಸ್ಪತ್ರೆಯನ್ನು ಖುದ್ದಾಗಿ ನೋಡಲು, ಅಲ್ಲಿನ ಸಿಬ್ಬಂದಿಯೊಂದಿಗೆ ಮಾತನಾಡಲು ಮತ್ತು ಸೇವೆಗಳ ಉಪಯೋಗ ಮಾಡಿಕೊಳ್ಳುತ್ತಿರುವ ಜನರನ್ನು ಭೇಟಿಯಾಗಲು ಕಾತುರಳಾಗಿದ್ದೇನೆ. ಪ್ರಯಾಣ ಮತ್ತು ಸಭೆ ನಡೆಸಲು ಸುರಕ್ಷಿತ ಪರಿಸ್ಥಿತಿ ನಿರ್ಮಾಣ ಈ ಭೇಟಿ ಸಾಧ್ಯವಾಗುವ ದಿನಗಳಿಗಾಗಿ ಎದುರು ನೋಡುತ್ತಿದ್ದೇನೆ.

ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯು ಲಾಭದ ಉದ್ದೇಶವಿಲ್ಲದೇ ಯಾವುದೇ ಧರ್ಮ, ಜನಾಂಗ ಅಥವಾ ಆರ್ಥಿಕ ಹಿನ್ನೆಲೆಯ ಭೇದ ಭಾವವಿಲ್ಲದೆ ಎಲ್ಲರಿಗೂ ಆರೋಗ್ಯ ಸೇವೆಯನ್ನು ಒದಗಿಸುವ ಬದ್ಧತೆ ಹೊಂದಿದೆ. ಅದರ ಮೌಲ್ಯಗಳು ಭಾರತದಲ್ಲಿ ಹಾಗೂ ಪ್ರಪಂಚದಾದ್ಯಂತ USAID ನಡೆಸುತ್ತಿರುವ ಕೆಲಸಗಳೊಂದಿಗೆ ಹೊಂದಾಣಿಕೆಯಾಗಿವೆ.

ಅಮೆರಿಕ ಸರ್ಕಾರದ ಪರವಾಗಿ USAID ಯು ಕಳೆದ 60ಕ್ಕೂ ಹೆಚ್ಚು ವರ್ಷಗಳಿಂದ ಭಾರತವು ದಕ್ಷಿಣ ಏಷ್ಯಾ ಹಾಗೂ ಜಾಗತಿಕವಾಗಿ ತನ್ನ ಅಭಿವೃದ್ಧಿಯ ಗುರಿಗಳನ್ನು ಸಾಧಿಸುವಲ್ಲಿ ಮತ್ತು ನೇತಾರನಾಗಿ ಹೊರ ಹೊಮ್ಮಲು ಅನುವಾಗುವಂತೆ ಬೆಂಬಲ ನೀಡಲು ಬದ್ಧವಾಗಿದೆ.

ASHA ಎಂಬ ಅಮೆರಿಕನ್ ಸ್ಕೂಲ್ಸ್ ಅಂಡ್ ಹಾಸ್ಪಿಟಲ್ಸ್ ಅಬ್ರಾಡ್ ಪ್ರೋಗ್ರಾಮ್ ಬಗ್ಗೆ ನೀವು ಕೇಳಿಲ್ಲದಿರಬಹುದು, ಇದು ಅಮೆರಿಕ ಸರ್ಕಾರದ ಉಪಕ್ರಮವಾಗಿದ್ದು, 1947 ರಿಂದ ಅಮೆರಿಕದ ಆರೋಗ್ಯ ಮತ್ತುಶಿಕ್ಷಣದ ಆವಿಷ್ಕಾರಗಳಲ್ಲಿ ಅತ್ಯುತ್ತಮವಾದ ಕೆಲಸ ಹಾಗೂ ಸಂಪನ್ಮೂಲಗಳನ್ನು ಹಂಚುತ್ತಾ ಸಾಗಿದೆ. ಈ ಪಯಣ ಇನ್ನೂ ಮುಂದುವರಿದಿದೆ ಹಾಗೂ ಕಾಲಾಂತರದಲ್ಲಿ ಸುಧೃಢ ಸಂಬಂಧಗಳನ್ನು ಬೆಳೆಸಲು ನೆರವಾಗುತ್ತಿದೆ.

ಭಾರತದಲ್ಲಿ USAID 1979 ರಿಂದ ಆಶಾ ಕಾರ್ಯಕ್ರಮದಡಿಯಲ್ಲಿ ಒಟ್ಟು $28 ಮಿಲಿಯನ್ ಡಾಲರ್‌ ಮೊತ್ತಕ್ಕಿಂತಲೂ ವೆಚ್ಚ ಮಾಡಿದೆ.

ಇಂದು ನಾವು ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಆಶಾ ಬೆಂಬಲಿತ ಜೀವನ ಮತ್ತು ಕಲಿಕೆ ಕೇಂದ್ರ ಮತ್ತು ಮಹಿಳಾ ಮತ್ತುಮಕ್ಕಳ ಆರೋಗ್ಯ ಮತ್ತು ಸಂಶೋಧನಾ ಕೇಂದ್ರದ ಉದ್ಘಾಟಿಸುತ್ತಿದ್ದೇವೆ. ಈ ಕೇಂದ್ರಗಳು ಬೆಂಗಳೂರಿನಲ್ಲಿ ಮಹಿಳೆಯರು ಮತ್ತು ಮಕ್ಕಳ ಸೇವೆಗಳ ಲಭ್ಯತೆ ಮತ್ತು ಗುಣಮಟ್ಟವನ್ನು ಹೆಚ್ಚಿಸಿ, 100 ಹೆಚ್ಚುವರಿ ಹಾಸಿಗೆಗಳನ್ನು ಅಳವಡಿಸಿ 220 ಕ್ಕೂ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳಿಗೆ ವಸತಿ ಒದಗಿಸಲಿವೆ.

ಈ ಹೊಸ ಕೇಂದ್ರಗಳ ಭಾಗವಾಗಿ ಮೊಬೈಲ್ ಪೀಡಿಯಾಟ್ರಿಕ್ ಮತ್ತು ಸಾಂತ್ವನ ಆರೈಕೆ ಮತ್ತು ಸ್ಮಾರ್ಟ್ ತರಗತಿಗಳಂತಹ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿದು ನನಗೆ ಬಹು ಸಂತಸವಾಗಿದೆ. ಭಾರತದ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ಇತ್ತೀಚಿನ ಆವಿಷ್ಕಾರಗಳು, ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ USAID ನ ಉದ್ದೇಶದೊಂದಿಗೆ ಹೊಂದಿಕೆಯಾಗುತ್ತದೆ. ಬೇಲರ್ ವಿಶ್ವವಿದ್ಯಾನಿಲಯದೊಂದಿಗಿನ ನಮ್ಮ ನಿಕಟಪಾಲುದಾರಿಕೆ ಮತ್ತು ಸಹಯೋಗದಿಂದಲೇ ಇಂದಿನ ಕಾರ್ಯಕ್ರಮ ಸಾಧ್ಯವಾಗಿದೆ.

ಭಾರತದಲ್ಲಿ ಅರೋಗ್ಯ ಸೇವೆಗಳನ್ನು ಉತ್ತಮ ಪಡಿಸಲು ಸಂಶೋಧನೆ, ವಿದ್ಯಾರ್ಥಿವೇತನ ಮತ್ತು ಸಾಮರ್ಥ್ಯ ವರ್ಧನೆಗಳ ಮೂಲಕ ಬೇಲರ್ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಗಳು ಜತೆಯಾಗಿ ಬಹುಕಾಲದಿಂದ ಮಾಡುತ್ತಿರುವ ಕೆಲಸಗಳನ್ನು USAID ಪ್ರಶಂಸಿಸುತ್ತದೆ

ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯೊಂದಿಗೆ ನಿಮ್ಮಪಾಲುದಾರಿಕೆಗಾಗಿ ಡಾ. ಗಾರ್ನರ್ ಅವರಿಗೆ ಧನ್ಯವಾದಗಳು, ರೋಗಿಗಳ ಶುಶ್ರೂಷೆಗೆ ಉತ್ತಮಗೊಳಿಸಲು ಭಾರತದಲ್ಲಿ ನರ್ಸ್‌ಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳ ಕೆಯ ಬಗ್ಗೆ ಅರಿವುನೀಡಿ ಸಬಲಗೊಳಿಸಿದ್ದೀರಿ. ಭಾರತದಲ್ಲಿ ನರ್ಸ್‌ಗಳ ಹೆಚ್ಚಿನ ಕಲಿಕೆಗೆ ಅನುವಾಗಲು

ನೀವು ಫುಲ್‌ಬ್ರೈಟ್-ನೆಹರು ರಿಸರ್ಚ್ ಫ್ಲೆಕ್ಸ್ ಅನುದಾನದಲ್ಲಿ ಭಾಗವಹಿಸಿದ್ದೀರಿ ಎಂಬುದು ನಮಗೆ ಹೆಮ್ಮೆಯ ವಿಷಯವಾಗಿದೆ.

ಫುಲ್‌ಬ್ರೈಟ್ ಪ್ರೋಗ್ರಾಂ ಮತ್ತು ASHA ನಂತಹ ಅಂತಾರಾಷ್ಟ್ರೀಯ ವಿನಿಮಯಗಳು ಮತ್ತು ಉಪಕ್ರಮಗಳು ನಮ್ಮ ಎರಡು ದೇಶಗಳ ನಡುವಿನ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ, ಇದರಪರಿಣಾಮವಾಗಿ ಇಂದು ಈ ಕೇಂದ್ರಗಳಂತಹ ಪರಿಣಾಮಕಾರಿ ಉಪಕ್ರಮಗಳು ಸಾಧ್ಯವಾಗಿವೆ.

ಧನ್ಯವಾದಗಳು! ಇಂದು ನನಗೆ ವರ್ಚುವಲ್ ಆಗಿ ಆತಿಥ್ಯ ನೀಡಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು. ಸಂದರ್ಭ ಸುರಕ್ಷಿತ ಎಂದಾದ ಕೂಡಲೇ ನಾನು ಹೊಸ ಕೇಂದ್ರಗಳಿಗೆ ಭೇಟಿ ನೀಡುವ ಅವಕಾಶಕ್ಕಾಗಿ ಎದುರು ನೋಡುತ್ತೇನೆ.

Recommended Video

Team India ಸರಣಿ ಸೋಲಿನ ಬಳಿಕ Points Tableನಲ್ಲಿ ಯಾವ ಸ್ಥಾನದಲ್ಲಿದೆ | Oneindia Kannada

ಅಲ್ಲಿಯವರೆಗೆ, ದಯವಿಟ್ಟು ಆರೋಗ್ಯವಾಗಿರಿ ಮತ್ತು ಎಲ್ಲಾ ಸಲಹೆ ಹಾಗೂ ವೈದ್ಯಕೀಯ ಮುನ್ನೆಚ್ಚರಿಕೆಗಳನ್ನು ಅನುಸರಿಸಿ!

English summary
USAID Indian Mission director Veena Reddy speaks about ASHA program during Baptist hospital event in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X