ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮೆರಿಕಾ ಮೂಲದ ಮಡರ್ನಾ ಲಸಿಕೆ ಹಾಕಿಸಿಕೊಂಡರೆ ಯುವಕರಿಗೆ ಏನಾಗುತ್ತೆ?

|
Google Oneindia Kannada News

ಬೆಂಗಳೂರು ಜೂನ್. 30: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಭಾರತದಲ್ಲಿ 'ಮಾಡೆರ್ನಾ' ಲಸಿಕೆ ಬಳಕೆಗೆ ಅವಕಾಶ ನೀಡಿದೆ. ಮಾಡರ್ನಾ ಲಸಿಕೆ ಭಾರತದಲ್ಲಿ ಸಿಗುತ್ತಿರುವ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಿಂತಲೂ ಸುರಕ್ಷಿತವೇ ? ಮಡರ್ನಾ ಲಸಿಕೆಯಿಂದ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ಅಮೆರಿಕಾ ಸೆಂಟರ್ ಫರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಮಹತ್ವದ ಸಂಗತಿಯನ್ನು ಬಹಿರಂಗ ಪಡಿಸಿದೆ.

ಬ್ರೆಜಿಲ್ ಜೊತೆಗಿನ ಕೊವ್ಯಾಕ್ಸಿನ್ ಒಪ್ಪಂದ ರದ್ದು: ಭಾರತ್ ಬಯೋಟೆಕ್ ಹೇಳಿದ್ದೇನು?ಬ್ರೆಜಿಲ್ ಜೊತೆಗಿನ ಕೊವ್ಯಾಕ್ಸಿನ್ ಒಪ್ಪಂದ ರದ್ದು: ಭಾರತ್ ಬಯೋಟೆಕ್ ಹೇಳಿದ್ದೇನು?

ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಅಮೆರಿಕದಲ್ಲಿ ಫೈಜರ್ ಮತ್ತು ಮಾಡರ್ನಾ ಲಸಿಕೆ ಬಳಸಲಾಗುತ್ತಿದೆ. ಆದರೆ, ಎರಡು ದಿನದ ಹಿಂದೆ ಅಮೆರಿಕಾದ ಸೆಂಟರ್ ಫರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆಷನ್ಸ್ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಮಡರ್ನಾ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಆತಂಕ ಮೂಡಿಸಿದೆ. ಸಿಡಿಸಿ ಅಧ್ಯಯನದ ವರದಿ ಪ್ರಕಾರ ಮಡರ್ನಾ ಲಸಿಕೆ ಪಡೆದ ಹನ್ನೆರಡು ವಷದಿಂದ ಹದಿನೇಳು ವರ್ಷದ ಯುವತಿಯರಲ್ಲಿ ಹೃದಯದ ಉರಿಯುತ ಸೇರಿದಂತೆ ಹೃದಯ ಸಂಬಂಧಿ ನೋವು ಕಾಣಿಸಿಕೊಂಡಿದೆ. 2. 18 ಲಕ್ಷ ಡೋಸ್ ಪಡೆದವರ ಪೈಕಿ 19 ಮಂದಿಯಲ್ಲಿ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದೆ. ಇದೇ ವಯೋಮಾನದ ಯುವಕರ ಪೈಕಿ 128 ಮಂದಿಯಲ್ಲಿ ಹೃದಯದ ಉರಿಯೂತ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಅತಿ ಹೆಚ್ಚು ಸಮಸ್ಯೆ 18 ರಿಂದ 24 ವಯೋಮಾನದ ಯುವಕ- ಯುವತಿಯರು ಮಾರ್ಡನಾ ಲಸಿಕೆಯಿಂದ ಸಮಸ್ಯೆಗೆ ಒಳಗಾಗಿರುವ ಅಂಕಿ ಅಂಶಗಳನ್ನು ಸಿಡಿಸಿ ಬಿಡುಗಡೆ ಮಾಡಿದೆ.

US CDC Survey report about Moderna vaccine side effect

2021 ಏಪ್ರಿಲ್ ನಿಂದ ಜೂನ್ 11 ರ ಅವಧಿಯಲ್ಲಿ ಲಸಿಕೆ ಪಡೆದರ ಸಮೀಕ್ಷಾ ವರದಿಯಲ್ಲಿ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಫೈಜರ್ ಮತ್ತು ಮಡರ್ನಾ ಲಸಿಕೆ ಪಡೆದ ಅಮೆರಿಕಾ ಯುವಕ- ಯುವತಿಯರಲ್ಲಿ ಹೃದಯಕ್ಕೆ ಸಂಬಂಧಿಸಿದ ಎದೆ ಉರಿಯುತ, ಶಾರ್ಟ್ ಬ್ರೀತ್ ಸಮಸ್ಯೆ ಕಾಣಿಸಿಕೊಂಡಿದೆ. ಈ ವಿಷಯ ಇದೀಗ ಭಾರತದಲ್ಲಿ ಬಹು ದೊಡ್ಡ ಚರ್ಚೆಗೆ ನಾಂದಿ ಹಾಡಿದೆ. ಕೇಂದ್ರ ಸರ್ಕಾರ ನಿನ್ನೆಯಷ್ಟೇ ಮಡರ್ನಾ ಲಸಿಕೆ ಬಳಕೆಗೆ ಅವಕಾಶ ನೀಡಿದೆ. ದೇಶದಲ್ಲಿ ಈಗಾಗಲೇ ಕೋ ವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತಿದೆ. ಈ ಎರಡೂ ಲಸಿಕೆ ಪೂರೈಕೆ ಕಡಿಮೆ ಹಿನ್ನೆಲೆಯಲ್ಲಿ ಮಡರ್ನಾ ಲಸಿಕೆ ಬಳಕೆಗೆ ಅವಕಾಶ ನೀಡಿರುವುದು ಇದೀಗ ವೈದ್ಯಕೀಯ ಕ್ಷೇತ್ರದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.

Recommended Video

Dkshi ಮಾತಿಗೆ ಕ್ಯಾರೇ ಎನ್ನದ ಹೈ ಕಮಾಂಡ್ | Oneindia Kannada

English summary
US Center for Decisis control and prevention released a report about mRNA vaccination side effect on Adults.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X