• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಅಮೆರಿಕಾ ರಾಯಭಾರಿ ಕೆನ್ನೆತ್ ಜಸ್ಟರ್ ಭೇಟಿ

By Nayana
|

ಬೆಂಗಳೂರು, ಜೂನ್ 1: ಭಾರತದಲ್ಲಿರುವ ಅಮೆರಿಕಾದ ರಾಯಭಾರಿ ಕೆನ್ನೆತ್ ಜೆಸ್ಟರ್ ಶುಕ್ರವಾರ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿರುವ ಸೈಮಲ್ಟೇನಿಯಸ್ ಎಜುಕೇಷನ್ ಅಂಡ್ ರಿಸರ್ಚ್ ಸೆಂಟರ್ ಗೆ ಭೇಟಿ ನೀಡಿದರು.

ಈ ವೇಳೆ ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್‌ನ್ಯಾಷನಲ್ ಡೆವಲಾಪ್‌ಮೆಂಟ್ ಕೈಗೊಂಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಆರೋಗ್ಯ ಸುಧಾರಣೆ ಸೇವೆಗಳ ಕಾರ್ಯವನ್ನು ಕೆನೆತ್ ಜಸ್ಟರ್ ವೀಕ್ಷಿಸಿದರು. ಇದೇ ವೇಳೆ ರಾಯಭಾರಿ ಜೆಸ್ಟರ್ ಎಸ್‌ಇಆರ್ ಸಿಯ ವೈದ್ಯರು, ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರನ್ನು ಭೇಟಿ ಮಾಡಿ, ಲುಸೈಡ್ ಕೈಗೊಂಡಿರುವ ಯೋಜನೆ ಬಗ್ಗೆ ಸಮಗ್ರ ಮಾಹಿತಿ ಪಡೆದರು.

ಕನ್ನಡದಲ್ಲಿ ಟ್ವೀಟ್ ಮಾಡಿದ ಅಮೆರಿಕದ ಕಾನ್ಸುಲೇಟ್

ಅಲ್ಲದೆ ಬಾಯ್ಲರ್ ಯೂನಿವರ್ಸಿಟಿಯ ಇನ್‌ಸ್ಟಿಟ್ಯೂಟ್‌ ಸಹಯೋಗದಲ್ಲಿ ಯುಸೈಡ್ ಅಮೇರಿಕನ್ ಅಬ್ರಾಡ್‌ ಆಶಾ ಕೈಗೊಂಡಿರುವ ನೆರವಿನ ಯೋಜನೆ ಬಗೆಗೆ ನಾಲ್ಕು ಮಹಡಿಗಳ ಸುಮಾರು 16 ಸಾವಿರ ಚದರಡಿಯಲ್ಲಿ ನಿರ್ಮಾಣಗೊಂಡಿರುವ ಲುಸೈಡ್ ಹೊಸ ಕೇಂದ್ರ ಹಾಗೂ ಲ್ಯಾಬೊರೇಟರಿ ಕಟ್ಟಡ ರೂಪುರೇಷೆ ಕುರಿತು ಅವಲೋಕನ ನಡೆಸಿದರು.

ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆ ನರ್ಸಿಂಗ್ ಇನ್‌ಸ್ಟಿಟ್ಯೂಟ್ ಅಮೆರಿಕಾದ ಬಾಯ್ಲರ್ ವಿಶ್ವವಿದ್ಯಾಲಯದ ನರ್ಸಿಂಗ್ ಶಾಲೆಯ ಜತೆಗೆ ಸಲ್ಲಗ್ನ ಹೊಂದಿದ್ದು, ಉಭಯ ಸಂಸ್ಥೆಗಳ ನಡುವೆ ಮಾನವ ಸಂಪನ್ಮೂಲ ಹಾಗೂ ತಂತ್ರಜ್ಞಾನದ ವಿನಿಮಯ ಮತ್ತಷ್ಟು ವೃದ್ಧಿಯಾಗಲಿದೆ ಎಂದು ಕೆನ್ನೆತ್ ತಿಳಿಸಿದ್ದಾರೆ.

1973ರಲ್ಲಿ ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿರುವ ಯುಸೈಡ್ ನಂತರ ಹಲವಾರು ನೈಪುಣ್ಯತೆ ಹೊಂದಿದ ಸಹಯೋಗದಲ್ಲಿ ಆಸ್ಪತ್ರೆಯನ್ನು ಮುನ್ನಡೆಸುತ್ತಾ ಬಂದಿದೆ.

English summary
U.S. Ambassador to India Kenneth I. Juster visited the Simulation Education and Research Centre (SERC) at the Bangalore Baptist Hospital to observe how the U.S. Agency for International Development (USAID) improves access to and the quality of basic health services for women and children in India, helping save millions of lives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more