ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಹಿಂದ ದಶಮಾನೋತ್ಸವ ಇನ್ನಿತರ ಸಮಾರಂಭಗಳು

By Mahesh
|
Google Oneindia Kannada News

ಬೆಂಗಳೂರು, ಜ.10: ಹಿಂದುಳಿದ ಜಾತಿಗಳ ಒಕ್ಕೂಟ ದಶಮಾನೋತ್ಸವ ಹಾಗೂ ಜಾಗೃತಿ ಸಮಾವೇಶ ಜ.12 ರಂದು ಬೆಂಗಳೂರು-ತುಮಕೂರು ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಸ್ಥಳದ ಎದುರಿನಲ್ಲಿ ನಡೆಯಲಿದೆ ಎಂದು ಮಾಜಿ ಸಚಿವ ಎಚ್ ಎಂ ರೇವಣ್ಣ
ಹೇಳಿದ್ದಾರೆ.

ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ, ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸೇರಿದಂತೆ ರಾಜ್ಯ ಸಚಿವ ಸಂಪುಟದ ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ. ಭಾನುವಾರ ಸಂಜೆ ನಡೆಯಲಿರುವ
ಸಮಾರೋಪ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ, ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ಭಾಗವಹಿಸಲಿದ್ದಾರೆ ಎಂದು ಅಹಿಂದ ಅಧ್ಯಕ್ಷ ಎಸ್ ಸಿದ್ದಗಂಗಯ್ಯ ಹೇಳಿದ್ದಾರೆ.

ಉಳಿದಂತೆ ಬೆಂಗಳೂರು ಹಾಗೂ ಮೈಸೂರಿನ ಕಾರ್ಯಕ್ರಮ ಪಟ್ಟಿಯಲ್ಲಿ ಅವಿರತ ಸಂಸ್ಥೆಯಿಂದ 'ಕೆರೆಗಾಗಿ ಕರೆ', ಅನಂತ ನಮನ, ನಮೋ ಬ್ರಿಗೇಡ್ ಮೈಸೂರಿನ ಕಾರ್ಯಕ್ರಮ, ನೇತಾಜಿ ಎಸ್ ಸಿ ಬೋಸ್ ಜನ್ಮದಿನೋತ್ಸವ, ಸ್ವಾಮಿ ವಿವೇಕಾನಂದರ 151ನೆ ಜನ್ಮ ದಿನೋತ್ಸವದ ವಿವರಗಳು ಮುಂದಿ ಕಾಣಬಹುದು.

ಚಕ್ರವರ್ತಿ ಸೂಲಿಬೆಲೆ ಅವರಿಂದ ಉಪನ್ಯಾಸ

ಚಕ್ರವರ್ತಿ ಸೂಲಿಬೆಲೆ ಅವರಿಂದ ಉಪನ್ಯಾಸ

ಜಾಗೋ ಭಾರತ್ ಖ್ಯಾತಿಯ ಅಂಕಣಗಾರ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರಿಂದ ಸಂಗೀತಮಯ ನಿರೂಪಣೆ ಹಾಗೂ ಉಪನ್ಯಾಸ.

ವಿಷಯ : ಪ್ರಧಾನಿಯಾಗಿ ಮೋದಿ ಹಾಗೂ ಸ್ವಾತಂತ್ರ್ಯ ನಂತರ ಭಾರತ
ಆಯೋಜಕರು : ನಮೋ ಬ್ರಿಗೇಡ್ ಮೈಸೂರು
ಸಂಪರ್ಕ: ಹೆಚ್ಚಿನ ಮಾಹಿತಿಗೆ ಕರೆ ಮಾಡಿ 9620731999, 90368 69568

ಅವಿರತ ಸಂಸ್ಥೆಯಿಂದ ಸಂಗೀತ ಕಾರ್ಯಕ್ರಮ

ಅವಿರತ ಸಂಸ್ಥೆಯಿಂದ ಸಂಗೀತ ಕಾರ್ಯಕ್ರಮ

ಕಾರ್ಯಕ್ರಮದ ಹೆಸರು: ಅನಂತ ನಮನ
ಗಾಯಕರು: ರವಿ ಮುರೂರು, ಸುಪ್ರಿಯಾ ಆಚಾರ್ಯ, ಮಂಗಳಾ ರವಿ, ರವಿ ಕೃಷ್ಣಮೂರ್ತಿ
ದಿನಾಂಕ : 18, ಜನವರಿ 2014, ಸಮಯ ಸಂಜೆ 6ಕ್ಕೆ
ಸ್ಥಳ: ಸುಚಿತ್ರ ಫಿಲಂ ಸೊಸೈಟಿ, ಬನಶಂಕರಿ, ಬೆಂಗಳೂರು,

ದೇಶಭಕ್ತಿ ಗೀತೆಗಳ ಜುಗಲ್ ಬಂದಿ, ಮೈಸೂರು

ದೇಶಭಕ್ತಿ ಗೀತೆಗಳ ಜುಗಲ್ ಬಂದಿ, ಮೈಸೂರು

ನೇತಾಜಿ ಸುಭಾಷ್ ಚಂದ್ರಬೋಸ್ ಅವರ 117ನೇ ಜನ್ಮ ದಿನೋತ್ಸವ
ದಿನಾಂಕ 20.01.2014, ಸಂಜೆ 6ಗಂಟೆಗೆ
ಗಾಯನ: ಮೈಸೂರು ಹರೀಶ್ ಹಾಗೂ ತಂಡ

ದಿನಾಂಕ 23.01.2014 ಐತಿಹಾಸಿಕ ರಾಮಸ್ವಾಮಿ ವೃತ್ತದಲ್ಲಿ ಜಾಗೃತಿ ಕಾರ್ಯಕ್ರಮ

ಕೆರೆಗಾಗಿ ಕರೆ-ಅಳ್ಳಾಲಸಂದ್ರ ಕೆರೆ ಸ್ವಚ್ಛತೆ ಕಾರ್ಯಕ್ರಮ

ಕೆರೆಗಾಗಿ ಕರೆ-ಅಳ್ಳಾಲಸಂದ್ರ ಕೆರೆ ಸ್ವಚ್ಛತೆ ಕಾರ್ಯಕ್ರಮ

ಸ್ವಾಮಿ ವಿವೇಕಾನಂದರ 151ನೇ ಜಯಂತಿ ಅಂಗವಾಗಿ ರಾಷ್ಟ್ರೀಯ ಯುವದಿನ ಹಾಗೂ ಶ್ರಮದಾನ ಕಾರ್ಯಕ್ರಮ
* ಜ.12ರಂದು ಬೆಳಗ್ಗೆ 6 ರಿಂದ 8
* ಸ್ಥಳ: ಯಲಹಂಕ ಉಪನಗರ, ಬೆಂಗಳೂರು
* ವಿವರಗಳಿಗೆ ಸಂಪರ್ಕಿಸಿ: ಎಸ್ ಟಿ ತಾಯಪ್ಪ : 98806 91071
* ವೆಬ್ ಸೈಟ್: www.yuvayelahanka.com
*ಶ್ರಮದಾನದ ನಂತರ ಉಪಹಾರದ ವ್ಯವಸ್ಥೆ ಇರುತ್ತದೆ

ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಉಪನ್ಯಾಸ

ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಉಪನ್ಯಾಸ

ಜಿ ಶ್ರೀನಿವಾಸಕುಮಾರ್ ನೆನಪಿನ ಉಪನ್ಯಾಸ ಮಾಲೆ -1
* ವಿಷಯ: ಇಂದಿನ ಅಸಮಾನತೆಗೆ ಮುಖಾಮುಖಿ- ಪರ್ಯಾಯ ಹುಡುಕಾಟ
ಉಪನ್ಯಾಸ : ಡಿ.ಎಸ್ ನಾಗಭೂಷಣ, ಸಮಾಜವಾದಿ ಚಿಂತಕರು, ಶಿವಮೊಗ್ಗ
* ಮುಖ್ಯ ಅತಿಥಿಗಳು : ದೇವನೂರು ಮಹಾದೇವ, ಚಿಂತಕರು, ಸಾಹಿತಿ
* ಮಲ್ಲಿಕಾ ಬಸವರಾಜು, ಕವಯತ್ರಿ, ತುಮಕೂರು
ಅಧ್ಯಕ್ಷತೆ: ರವಿವರ್ಮ ಕುಮಾರ್
ಪ್ರಸ್ತಾವನೆ: ಬಿ. ಮಹೇಶ್ ಹರವೆ, ಉಪನ್ಯಾಸಕರು

ದಿನಾಂಕ : ಜ.12, ಬೆಳಗ್ಗೆ 11 ಗಂಟೆಗೆ
ಸ್ಥಳ : ಶ್ರೀರಂಗ ಸಭಾಂಗಣ, ರಂಗಾಯಣ, ಮೈಸೂರು

ಕೆಂಗೇರಿ ಉಪನಗರ: ವಿವೇಕಾನಂದರ 151ನೆ ಜನ್ಮ ದಿನೋತ್ಸವ

ಕೆಂಗೇರಿ ಉಪನಗರ: ವಿವೇಕಾನಂದರ 151ನೆ ಜನ್ಮ ದಿನೋತ್ಸವ

ಸ್ವಾಮಿ ವಿವೇಕಾನಂದರ 151ನೆ ಜನ್ಮ ದಿನೋತ್ಸವದ ಅಂಗವಾಗಿ ಇದೇ 11 ಹಾಗೂ 12ರಂದು ಎರಡು ದಿನಗಳ ಕಾಲ ಕೆಂಗೇರಿ ಉಪನಗರದ ಗಣೇಶ ದೇವಸ್ಥಾ ನದ ಆಟದ ಮೈದಾನದಲ್ಲಿ ‘ಕೆಂಗೇರಿ ಯುವ ಜನೋತ್ಸವ' ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಚಂದನ್‌ಗೌಡ ತಿಳಿಸಿದ್ದಾರೆ.

* ಜ.12ರಂದು ನಡೆಯುವ ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಸ್ವಾತಂತ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಉದ್ಘಾಟಿಸಲಿದ್ದಾರೆ.
* ಮುಖ್ಯ ಅತಿಥಿಗಳಾಗಿ ಜ್ಞಾನಪೀಠ ಸಾಹಿತಿ ಡಾ. ಚಂದ್ರ ಶೇಖರ್ ಕಂಬಾರ, ನಾಡೋಜ ಡಾ.ಎಸ್.ಆರ್.ನಾಯಕ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್, ಪೀಟರ್ ಕ್ಯಾನಡಿ ಭಾಗವಹಿಸಲಿದ್ದಾರೆ.
* ಯುವ ಜನೋತ್ಸವ ನಡೆಯಲಿದ್ದು, ಮಾನವ ಹಕ್ಕುಗಳ ಹೋರಾಟಗಾರ ಎಂ.ರಾಜ ಉದ್ಘಾಟನೆ ಮಾಡಲಿದ್ದಾರೆ. ಇದೇ ವೇಳೆ ಬೃಹತ್ ಉದ್ಯೋಗ ಮೇಳ ನಡೆಯಲಿದ್ದು 75ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸಲಿವೆ.
* ಉದ್ಯೋಗ ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತರು ಹೆಚ್ಚಿನಮಾಹಿತಿಗಾಗಿ 88803-13626, 95 384-50057 ಸಂಪರ್ಕಿಸಬಹುದು.

English summary
Check out all the Upcoming Events in Bangalore, Mysore on Oneindia Kannada. Variety of events like Protection to save Lakes,Musical tribute to Raju and Mysore Anananthaswamy, Namo Brigade Mysore eventAhinda 10 Anniversary, Netaji SC Bose Birth anniversary and many more events across the state
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X