ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಜನತೆಯ ಬೆವರಿಳಿಸುತ್ತಿರುವ ಪವರ್ ಕಟ್

|
Google Oneindia Kannada News

ಬೆಂಗಳೂರು, ಏಪ್ರಿಲ್ 25: ನಗರದ ನಾನಾ ಬಡಾವಣೆಗಳಲ್ಲಿ ಕಳೆದ ಒಂದು ವಾರದಿಂದ ಪವರ್ ಕಟ್ ಆರಂಭವಾಗಿದೆ. ಮೊದಲು ಗಂಟೆಗಟ್ಟಲೆ ರಿಪೇರಿ ಎಂದು ತೆಗೆಯುತ್ತಿದ್ದವರು, ಪವರ್ ಕಟ್ ಇಲ್ಲ ಎನ್ನುತ್ತಲೇ ಬೆಳಗ್ಗೆ ಮತ್ತು ಸಂಜೆ ಒಂದು ಅಥವಾ ಎರಡು ಗಂಟೆ ವಿದ್ಯುತ್ ಕಡಿತ ಪ್ರಾರಂಭಿಸಿದ್ದಾರೆ.

ಆದರೆ ವಾಸ್ತವವಾಗಿ ವಿದ್ಯುತ್ ಕೊರತೆಯಿಂದ ಅನಿಯಮಿತ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿದೆ. ಬೇಸಿಗೆಯಲ್ಲಿ ಉಷ್ಣಾಂಶದಲ್ಲಿ ಏರಿಕೆ ಆಗಿರುವುದು ಫ್ಯಾನ್, ಎಸಿ ಹಾಗೂ ಕೂಲರ್ ಗಳಿಂದಾಗಿ ವಿದ್ಯುತ್ ಬಳಸುವವರ ಸಂಖ್ಯೆಯೂ ಏರುತ್ತಿದೆ.

ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಕೃಷಿಗೆ ಹಗಲಲ್ಲೂ ವಿದ್ಯುತ್ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಕೃಷಿಗೆ ಹಗಲಲ್ಲೂ ವಿದ್ಯುತ್

ಹೀಗಾಗಿ ಪೀಕ್ ಅವರ್ ನಲ್ಲಿ ಸರಬರಾಜು ವ್ಯತ್ಯಯ ಉಂಟಾಗುತ್ತಿದ್ದು, ಅನಿವಾರ್ಯವಾಗಿ ವಿದ್ಯುತ್ ಕಡಿತ ಮಾಡಬೇಕಾದ ಸ್ಥಿತಿ ಎದುರಾಗಿದೆ. ವಿದ್ಯುತ್ ಕಡಿತ ಸಮಸ್ಯೆ ರ್ಪೂ ಹಾಗೂ ಉತ್ತರ ಭಾಗದಲ್ಲೇ ಹೆಚ್ಚಾಗಿ ಕೇಳಿಬರುತ್ತದೆ. ಇಲ್ಲಿನ ಪ್ರದೇಶಕ್ಕೆ ಬೇಕಿರುಚ್ಟು ವಿದ್ಯುತ್ ಪೂರೈಸಲು ಮಾರ್ಗದ ಸಮಸ್ಯೆ ಇದೆ.

Unscheduled load shedding in Bengaluru since one week

ಪರಿಹಾರಕ್ಕಾಗಿ ಕೈಗೊಂಡಿರುವ ಕಾಮಗಾರಿ ಕಾಮಿತಿಯಲ್ಲಿ ಪೂರ್ಣಗೊಳ್ಳದಿರುವುದು ಸಮಸ್ಎಯಯನ್ನು ಜೀವಂತ ಇಟ್ಟಿದೆ. ಯಲಹಂಕ, ಹೆಬ್ಬಾಳ, ಕೆ.ಆರ್. ಪುರ, ಮಹದೇವಪುರ, ವೈಟ್ ಪೀಲ್ಡ್, ಜಾಲಹಳ್ಳಿ ಸೇರಿದಂತೆ ಹೊರಭಾಗದ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಿದೆ. ಹನುಮಂತನಗರ, ಜಯನಗರ, ಶ್ರೀನಿವಾಸನಗರ ಸೇರಿದಂತೆ ನಗರದ ಮಧ್ಯಭಾಗದಲ್ಲಿ ಹಲವು ಪ್ರದೇಶಗಳಲ್ಲಿಯೂ ಬೆಳಗ್ಗೆ ಒಂದು ತಾಸು ಮತ್ತು ಸಂಜೆ ಒಂದು ತಾಸು ವಿದ್ಯುತ್ ಕಡಿತ ಮಾಡಲಾಗುತ್ತಿದೆ.

ಬೆಸ್ಕಾಂ: ಒಂದೇ ದಿನ 6252 ದೂರು: ಬೆಸ್ಕಾಂ ವ್ಯಾಪ್ತಿಯ ನಗರದ ನಾಲ್ಕು ವಲಯದಲ್ಲಿ ಮಂಗಳವಾರ ಒಂದೇ ದಿನ 6,252 ದೂರುಗಳು ದಾಖಲಾಗಿದೆ. ವಿದ್ಯುತ್ ಕಡಿತ, ಕಂಬ ಬಿದ್ದಿರುವುದು ಸೇರಿದಂತೆ ನಾನಾ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಹಕರು ಈ ದೂರುಗಳನ್ನು ದಾಖಲಿಸಿದ್ದಾರೆ. ಆ ಪೈಕಿ 5,797 ದೂರುಗಳಿಗೆ ಸ್ಪಂದಿಸಿದ್ದು, 455 ಇನ್ನಷ್ಟೇ ನಿವಾರಣೆಯಾಗಬೇಕಿದೆ.

English summary
Taking shelter of untimely rain in Bengaluru last few days, power interruption in the city goes twice in a day minimum an hour each time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X