ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗ್ಳೂರಲ್ಲಿ ಸಾಕು ನಾಯಿ ಸುಸು ಮಾಡಿದರೂ ದಂಡ ಕಟ್ಬೇಕು!

|
Google Oneindia Kannada News

ಬೆಂಗಳೂರು, ಆ. 03: ಮನಸ್ಸಿಗೆ ಬಂದಂತೆ ಮನೆಯ ಕಸವನ್ನೆಲ್ಲ ತುಂಬಿ ಘಂಟೆ ಗಾಡಿಗೆ ನೀಡಿದರೆ ಇನ್ನು ಮುಂದೆ ದಂಡ ಕಟ್ಟಬೇಕಾಗುವುದು. ನಿಮ್ಮ ಮನೆ ಸಾಕು ಪ್ರಾಣಿ ಪಬ್ಲಿಕ್ ನಲ್ಲಿ ಸುಸು ಮಾಡಿದರೂ ನೀವೇ ದಂಡ ಕಟ್ಟಬೇಕು. ಘನ ತ್ಯಾಜ್ಯ ನಿರ್ವಹಣೆ ಜಾಗೃತಿ ಮತ್ತು ಕಟ್ಟುನಿಟ್ಟಿನ ಜಾರಿಗೆ ಮುಂದಾಗಿರುವ ಬಿಬಿಎಂಪಿ 'ದಂಡಕ್ರಮ' ಕ್ಕೆ ಮುಂದಾಗಿದೆ.

ಹಸಿ ತ್ಯಾಜ್ಯ, ಘನ ತ್ಯಾಜ್ಯ ಮತ್ತು ಒಣ ತ್ಯಾಜ್ಯಗಳನ್ನು ಮೂಲದಲ್ಲಿಯೇ ಬೇರ್ಪಡಿಸಿ ನೀಡಬೇಕು ಎಂದು ಬಿಬಿಎಂಪಿ ಹೇಳುತ್ತಲೇ ಬಂದಿದ್ದರೂ ನಾಗರಿಕರು ಗಮನ ನೀಡಿಲ್ಲ. ಹಾಗಾಗಿ ಆರಂಭದಲ್ಲೇ ಕಸ ವಿಂಗಡನೆ ಮಾಡಿ ನೀಡದ ಮನೆಗಳಿಗೆ 100 ರು. ಎರಡನೇ ಬಾರಿಗೆ 200 ರು. ದಂಡ ವಿಧಿಸಲಾಗುತ್ತದೆ. ವಾಣಿಜ್ಯ ಉದ್ದಿಮೆಗಳಿಗೆ ಮೊದಲನೆ ಬಾರಿಗೆ 500 ರು. 2 ನೇ ಬಾರಿಗೆ ಸಾವಿರ ರು, ದಂಡ ವಿಧಿಸಲು ಬಿಬಿಎಂಪಿ ಅಧಿಸೂಚನೆ ಹೊರಡಿಸಲಿದೆ.[ಕಸ ಹಾಕುವವರ ಫೋಟೋ ತೆಗೆದು ವಾಟ್ಸಪ್ ಮಾಡಿ]

bbmp

ಇದಲ್ಲದೇ ಮಲ, ಮೂತ್ರ ವಿಸರ್ಜಿಸುವುದು, ಉಗುಳುವುದನ್ನು ಮಾಡಿದರೂ ದಂಡ ತೆರಬೇಕಾಗುತ್ತದೆ. ಸಾಕು ಪ್ರಾಣಿಗಳನ್ನು ಹೊರಗೆ ಕರೆದುಕೊಂಡು ಹೋದಾಗ ಗಲೀಜು ಮಾಡಿದರೂ ನೀವೇ ದಂಡ ಕಟ್ಟಬೇಕು.

ಮೂಲದಲ್ಲಿಯೇ ಕಸ ವಿಂಗಡನೆ ಮಾಡಬೇಕು. ಇದು ಮರುಬಳಕೆಗೆ ಅನುವಾಗುತ್ತದೆ. ವೈಜ್ಞಾನಿಕ ವಿಲೇವಾರಿ ಸಾಧ್ಯವಾಗುತ್ತದೆ. ಸರಿಯಾಗಿ ಕಸ ವಿಂಗಡನೆ ಮಾಡದವರಿಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಬಿಬಿಎಂಪಿ ಆಯುಕ್ತ ಜಿ. ಕುಮಾರನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.[ಬೆಂಗಳೂರಲ್ಲಿ ಕಸ ಉಚಿತ, ಕಾಯಿಲೆ ಖಚಿತ]

ಬೆಂಗಳೂರಿನ ಅನೇಕ ಕಡೆ ಖಾಳಿ ನಿವೇಶನಗಳಲ್ಲಿ ಕಸ ತುಂಬಿಕೊಂಡಿದ್ದು ಮಾಲೀಕರಿಗೆ ಮೂರು ದಿನದಲ್ಲಿ ಸ್ವಚ್ಛ ಮಾಡುವಂತೆ ತಿಳಿಸಿ ನೋಟಿಸ್ ನೀಡಲಾಗುವುದು. ಮಾಲೀಕರು ಸ್ವಚ್ಛ ಮಾಡದಿದ್ದರೆ ಬಿಬಿಎಂಪಿಯೇ ಗುತ್ತಿಗೆದಾರರನ್ನು ಹಿಡಿದು ಕಸ, ಗಿಡಗಂಟೆ ತೆರವು ಮಾಡುತ್ತದೆ. ನಂತರ ಪ್ರತಿ ಚದರ ಅಡಿಗೆ ಎರಡು ರು. ವನ್ನು ದಂಡ ರೂಪದಲ್ಲಿ ವಸೂಲಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ

ದಂಡ ಪಟ್ಟಿ ನೋಡಿ
* ಉಗುಳುವುದು, ಮೂತ್ರ ವವಿಸರ್ಜನೆ: ಮೊದಲ ಸಲ 100, 2ನೇ ಸಲ 200
* ಮೂಲದಲ್ಲೇ ಕಸ ಬೇರ್ಪಡಿಸದಿದ್ದರೆ(ನಿವಾಸಿಗಳಿಗೆ): ಮೊದಲ ಸಲ 100, 2ನೇ ಸಲ 200
* ವಾಣಿಜ್ಯ ಕಟ್ಟಡಗಳಿಗೆ: ಮೊದಲ ಸಲ 500, 2ನೇ ಸಲ 1000
* ಉದ್ಯಾನ,ಕಟ್ಟಡ, ಸ್ಯಾನಿಟರಿ ತ್ಯಾಜ್ಯ: ಮೊದಲ ಸಲ 500, 2ನೇ ಸಲ 1000
* ಸಾಕು ಪ್ರಾಣಿಗಳಿಂದ ಗಲೀಜು: ಮೊದಲ ಸಲ 100, 2ನೇ ಸಲ 200

English summary
Bengaluru: BBMP body administrator has taken the important decision on the garbage disposal. People should keep the waste in a right manner, otherwise they will fined. BBMP commissioner G Kumar Naik to implement the new 'fine system' shortly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X