ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಡ ವಿದ್ಯಾರ್ಥಿಗಳ ಅಭ್ಯುದಯಕ್ಕೆ ನಿಂತ ಬಾಲಕನಿಗೆ ವಿಶ್ವಸಂಸ್ಥೆ ಆಹ್ವಾನ

|
Google Oneindia Kannada News

ಬೆಂಗಳೂರು, ಜನವರಿ 23: ಬಡ ವಿದ್ಯಾರ್ಥಿಗಳ ಏಳಿಗೆಗೆ ಟೊಂಕಕಟ್ಟಿ ನಿಂತ ಬಾಲಕ ಸಿದ್ಧಾಂತ್ ನನ್ನು ವಿಶ್ವಸಂಸ್ಥೆ ಆಹ್ವಾನಿಸಿದೆ.

ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಬಗ್ಗೆ 14 ವರ್ಷದ ಸಿದ್ಧಾಂತ್‌ಗೆ ಕಾಳಜಿ ಹೇಗೆ ಹುಟ್ಟಿಕೊಂಡಿತು ಎನ್ನುವುದನ್ನು ಅವರು ವಿವರಿಸುವುದು ಹೀಗೆ, ಒಂದು ದಿನ ಶಾಲೆಯಿಂದ ಮನೆಗೆ ಕಾರಿನಲ್ಲಿ ಹೋಗುತ್ತಿರುವಾಗ ಕುತೂಹಲಕ್ಕಾಗಿ ಡ್ರೈವರ್ ಬಳಿ ಅವರ ವಿದ್ಯಾಭ್ಯಾಸ ಅವರ ಕೆಲಸದ ಬಗ್ಗೆ ಕೇಳಿದೆ.

ಅದಕ್ಕೆ ಅವರು ಮನೆಯಲ್ಲಿ ತುಂಬಾ ಬಡತನವಿದ್ದ ಕಾರಣ ಎರಡನೇ ತರಗತಿಯವರೆಗೆ ಮಾತ್ರ ಓದಲು ಸಾಧ್ಯವಾಯಿತು ಹನ್ನೊಂದು ವರ್ಷಕ್ಕೆ ಡ್ರೈವರ್ ವೃತ್ತಿಗೆ ಅನಿವಾರ್ಯವಾಗಿ ಬರಬೇಕಾಯಿತು ಎಂದು ನೋವನ್ನು ಹಂಚಿಕೊಂಡರು.

ಇವರ ಮಾತು ಕೇಳಿದ ಬಳಿಕ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಏನಾದರೂ ಮಾಡಲೇಬೇಕು ಎಂದು ಪಣತೊಟ್ಟೆ, ಯುನೈಟೆಡ್ ನೇಷನ್ಸ್ ಡೆವಲಪ್‌ಮೆಂಟ್ ಗೋಲ್ ಸರ್ಚ್ ಮಾಡಿ ಅದರಲ್ಲಿರುವ ಅಂಶಗಳೆಲ್ಲವನ್ನೂ ಅರ್ಥಮಾಡಿಕೊಂಡೆ.

ಈ ಮಕ್ಕಳಿಗಾಗಿ ಏನು ಮಾಡಬೇಕೆಂದು ಅರ್ಥ ಮಾಡಿಕೊಡಲು ಹೆಚ್ಚು ಸಮಯ ಹಿಡಿಯಲಿಲ್ಲ.ಬಡವಿದ್ಯಾರ್ಥಿಗಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ನೀಡಲೇಬೇಕು ಎಂದು ನಿರ್ಧರಿಸಿ ನನ್ನ ಮೆಂಟರ್ ಬಳಿ ಈ ವಿಷಯ ಕುರಿತು ಚರ್ಚೆ ನಡೆಸಿದೆ. ಅದಾದ ಬಳಿಕ ಹತ್ತಿರದಲ್ಲಿದ್ದ ಟ್ಯೂಷನ್ ಸೆಂಟರ್‌ ಒಂದಕ್ಕೆ ಭೇಟಿ ನೀಡಿದೆ.

UNO invited Bengaluru boy to present his education work

ಅಲ್ಲಿ ವಿದ್ಯಾರ್ಥಿಗಳ ಬುದ್ಧಿ ಮಟ್ಟ ಅರ್ಥೈಸುವಿಕೆಯನ್ನು ಗಮನಿಸಿದಾಗ ಅವರು ವಿಜ್ಞಾನ, ಗಣಿತ ಹಾಗೂ ಇಂಗ್ಲಿಷ್ ವಿಷಯದಲ್ಲಿ ತುಂಬಾ ಹಿಂದಿದ್ದಾರೆ ಎನ್ನುವುದು ಅರಿವಾಯಿತು. ಪೂರ್ಣ ಶಿಕ್ಷ ಎನ್ನುವ ಪ್ರಾಜೆಕ್ಟ್ ಆರಂಭಿಸಿ ತಂತ್ರಜ್ಞಾನವನ್ನು ಬಳಸಿಕೊಂಡು ಅದರ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯವನ್ನು ಆರಂಭಿಸಿರುವುದಾಗಿ ಸಿದ್ಧಾಂತ್ ತಿಳಿಸಿದ್ದಾರೆ.

English summary
UNO invited Bengaluru boy to present his education work, Siddhant is visiting UnitedNations to present the work he has done in education for underprivileged children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X