ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆ ಅಗೆತಕ್ಕೆ ವಿರೋಧ, ಕ್ಯಾಂಪಸಿನಲ್ಲಿ ಕತ್ತಲೆ

By Mahesh
|
Google Oneindia Kannada News

ಬೆಂಗಳೂರು, ಜ.2: ಅನಗತ್ಯವಾಗಿ ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ನವರು ರಸ್ತೆ ಅಗೆದು ಹಾಳು ಮಾಡುತ್ತಿದ್ದಾರೆ ಎಂದು ಹೇಳಿ ಬೆಂಗಳೂರಿನ ವಿವಿ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದು ಈಗ ತಿರುಗುಬಾಣವಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಕ್ಯಾಂಪಸಿನಲ್ಲಿ ಪವರ್ ಪ್ರಾಬ್ಲಂ. ಬೆಳಗ್ಗಿನಿಂದ ಸಂಜೆ ತನಕ ವಿದ್ಯುತ್ ಕಡಿತಗೊಳಿಸಲಾಗಿದೆ.

ಬೆಂಗಳೂರು ವಿವಿಯ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ನಾಲ್ಕೈದು ದಿನಗಳಿಂದ ಪವರ್ ಪ್ರಾಬ್ಲಂ ಇದೆ. ಬೆಳಗ್ಗೆ ಹೋಗೋ ಕರೆಂಟ್ ಬರೋದು ಸಂಜೆಯೇ. ಬಂದ್ರೂ ಕಣ್ಣಾಮುಚ್ಚಾಲೆ ಆಡುತ್ತೆ. ಇದ್ರಿಂದ, ಕ್ಯಾಂಪಸ್ ‍ನಲ್ಲಿರುವ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕುಡಿಯೋಕೂ ನೀರಿಲ್ಲ ಸ್ನಾನಕ್ಕೂ ನೀರಿಲ್ಲ. ಅಷ್ಟೇ ಅಲ್ದೇ ವಿವಿ ಒಳಗೆಡೆ ಇರುವ ಬ್ಯಾಂಕ್, ಪೋಸ್ಟ್ ಆಫೀಸ್ ಮತ್ತು ಟೆಲಿಫೋನ್ ಎಕ್ಸಚೇಂಜ್ ಕೆಲಸಕ್ಕೆ ಸಾಕಷ್ಟು ತೊಡಕಾಗಿದೆ. ಕಂಪ್ಯೂಟರ್ ‍ಗಳೆಲ್ಲ ಶಟ್ ‍ಡೌನ್ ಆಗಿದೆ. ಬೆಸ್ಕಾಂಗೆ ಫೋನ್ ಮಾಡಿದ್ರೆ, ನಿಮ್ಮ ಉಪ ಕುಲಪತಿಗಳ ಹತ್ರ ಹೇಳಿ ಅಂತಾರಂತೆ. ಕೆಪಿಟಿಸಿಎಲ್ ಸಂಸ್ಥೆಯವರಿಗೆ ರಸ್ತೆ ಅಗೆಯಲು ಅಡ್ಡಿಪಡಿಸಿದ್ದು ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿದೆ.

ಏನಿದು ಸಮಸ್ಯೆ: ಕೆಲ ತಿಂಗಳ ಹಿಂದೆಯಷ್ಟೇ ಹದಗೆಟ್ಟಿದ್ದ ವಿವಿ ಕ್ಯಾಂಪಸ್ ‍ನ ರಸ್ತೆ ಡಾಂಬರಿಕರಣ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿತ್ತು..ಆದ್ರೆ ಈಗ ಬೆಸ್ಕಾಂ ತನ್ನ ಹೊಸದೊಂದು ನೆಲ ಮಾಳಿಗೆಯಲ್ಲಿ ಲೈನ್ ಹಾಕೋಕೆ ವಿವಿ ರಸ್ತೆ ಅಗೆಯೋಕೆ ಅನುಮತಿ ಕೇಳಿದೆ.

BU’s Resistance to Dig Up Road Leaves Campus Powerless

ಅದ್ರಲ್ಲೂ ಹೊಸದಾಗಿ ಡಾಂಬರಿಕರಣ ಮಾಡಿರೋ ರಸ್ತೆಯ ಮಧ್ಯಬಾಗದಲ್ಲಿ ಅಗೆಯೋ ಪ್ಲಾನ್ ಬೆಸ್ಕಾಂನದು. ಆದ್ರೆ, ಇದಕ್ಕೆ ಒಪ್ಪದ ಬೆಂಗಳೂರು ವಿವಿ ಕ್ಯಾಂಪಸ್ ‍ನಲ್ಲೇ ಬದಲಿ ವ್ಯವಸ್ಥೆ ಕಲ್ಪಿಸಿಕೊಡುತ್ತೇವೆ ಅನ್ನೋದನ್ನ ಬೆಸ್ಕಾಂ ಕೇಳ್ತಿಲ್ಲ. ಈ ಜಗಳದಿಂದಾಗಿ ಬೆಸ್ಕಾಂ ಪವರ್ ಕಟ್ ಮಾಡಿ ಕಾಟ ಕೊಡ್ತಿದೆ ಅಂತಾರೆ ಬೆಂಗಳೂರು ವಿವಿ ಉಪ ಕುಲಪತಿ ಪ್ರೊ. ತಿಮ್ಮೇಗೌಡ.

ಕರೆಂಟ್ ಕಟ್ ಮಾಡಿ ಬೆಸ್ಕಾಂನವರು ನಮ್ಮನ್ನು ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸುತ್ತಿದ್ದಾರೆ. ಆದರೆ, ನಾವು ಯಾವುದೇ ಕಾರಣಕ್ಕೂ ರಸ್ತೆ ಅಗೆತಕ್ಕೆ ಆಸ್ಪದ ಕೊಡುವುದಿಲ್ಲ ಎಂದು ತಿಮ್ಮೇಗೌಡ ಹೇಳಿದರು.

ರಸ್ತೆ ರಿಪೇರಿಗಾಗಿ ಬಿಬಿಎಂಪಿ ಸುಮಾರು 12 ಕೋಟಿ ಖರ್ಚು ಮಾಡಿದೆ. ಆದರೆ, ಸೋಮನಹಳ್ಳಿ ಸ್ಟೇಷನ್(ಕನಕಪುರ ರಸ್ತೆ) ನಿಂದ ವಿಶ್ವೇಶ್ವರಯ್ಯ ಲೇಔಟ್ ಗೆ ಪವರ್(66 ಕೆ.ವಿ) ನೀಡಬೇಕಾದರೆ ವಿವಿಯಲ್ಲಿ ರಸ್ತೆ ಅಗೆಯಲೇ ಬೇಕು ಎಂದು ಕೆಪಿಟಿಸಿಎಲ್ ಹೇಳಿದೆ.ಡಿಸೆಂಬರ್ 31 ರಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾಗಿದೆ. ವಿವಿ ಹಾಗೂ ಬೆಸ್ಕಾಂನ ಮುಸುಕಿನ ಗುದ್ದಾಟಕ್ಕೆ ವಿವಿ ವಿದ್ಯಾರ್ಥಿಗಳು- ಸಿಬ್ಬಂದಿಗಳು ಕಷ್ಟ ಪಡ್ತಿದ್ದಾರೆ.

English summary
The Bangalore University’s Jnana Bharathi campus is in darkness since three days. The BESCOM disconnected electricity supply to the campus after the BU’s resistance to KPTCL proposal to dig road to lay power cables.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X