ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

70ಕ್ಕೆ 73 ಅಂಕ ನೀಡಿ ಬೆಂಗಳೂರು ವಿಶ್ವವಿದ್ಯಾಲಯ ಎಡವಟ್ಟು!

|
Google Oneindia Kannada News

ಬೆಂಗಳೂರು, ಜನವರಿ 24: ರಾಜ್ಯ ಅತಿ ದೊಡ್ಡ ವಿಶ್ವವಿದ್ಯಾಲಯ ಖ್ಯಾತಿಗೊಳಗಾಗಿರುವ ಬೆಂಗಳೂರು ವಿಶ್ವವಿದ್ಯಾಲಯವು ಆಗಾಗ ಹಲವು ವಿಷಯಗಳಿಗೆ ಸುದ್ದಿ ಆಗುತ್ತಲೇ ಇರುತ್ತದೆ. ಈಗ ಗರಿಷ್ಠ ಅಂಕಕ್ಕಿಂತ ಮೂರು ಅಂಕ ಹೆಚ್ಚು ನೀಡುವ ಮೂಲಕ ಮತ್ತೊಂದು ಎಡವಟ್ಟು ಮಾಡಿಕೊಂಡು ನಗೆಪಾಟಲಿಗೀಡಾಗಿದೆ.

ಕೆಲವೊಮ್ಮೆ ಸಾಧಾರಣ ವಿದ್ಯಾರ್ಥಿಗಳಿಗೆ ಪಾಸ್ ಆದರೆ ಸಾಕು ಅಂತ ಅಂದುಕೊಂಡಿರುತ್ತಾರೆ. ಕನಿಷ್ಠ ಅಂಕ ಪಡೆಯಲು ಕೆಲ ವಿದ್ಯಾರ್ಥಿಗಳು ಹಗಲು ರಾತ್ರಿಯನ್ನದೇ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದಿರುತ್ತಾರೆ. ಆದರೆ ಬೆಂಗಳೂರು ವಿಶ್ವವಿದ್ಯಾಲಯ ಗರಿಷ್ಠಕ್ಕಿಂತ ಮೂರು ಅಂಕಗಳನ್ನು ಹೆಚ್ಚು ನೀಡಿದೆ.

ಬೆಂಗಳೂರು ವಿಶ್ವವಿದ್ಯಾಲಯವು 70 ಅಂಕದ ಪರೀಕ್ಷೆಗೆ 73 ಅಂಕ ನೀಡಿ ಮತ್ತೆ ಸುದ್ದಿಯಾಗಿದೆ. ಗರಿಷ್ಠ ಅಂಕಕ್ಕಿಂತ ಹೆಚ್ಚು ಅಂಕ ನೀಡಿದ ಬೆಂಗಳೂರು ವಿವಿ ವಿದ್ಯಾರ್ಥಿಗಳಿಗೆ ಬೇಕಾಬಿಟ್ಟಿ ಅಂಕಗಳನ್ನು ಕೊಟ್ಟಿದೆ. ಬಿ.ಕಾಂ 3ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಬೇಕಾಬಿಟ್ಟಿ ಅಂಕ ನೀಡಿದೆ ಎಂದು ತಿಳಿದುಬಂದಿದೆ. ಟ್ರಾವೆಲ್ ಏಜೆನ್ಸಿ ಆ್ಯಂಡ್ ಟೂರ್ ಆಪರೇಟರ್ ವಿಷಯ ಪರಿಕ್ಷೆಯಲ್ಲಿ ಈ ಎಡವಟ್ಟು ಬೆಳಕಿಗೆ ಬಂದಿದೆ.

Bangalore University made mistake by giving 73 Out of 70 Marks to Bcom 3rd Semester Students

2021ರ ಡಿಸೆಂಬರ್​ನಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಪರೀಕ್ಷೆ ನಡೆಸಿತ್ತು. 70 ಅಂಕ ಥಿಯರಿ ಮತ್ತು 30 ಅಂಕ ಇಂಟರ್ನಲ್ಸ್ ಸೇರಿ ಒಟ್ಟು 100 ಅಂಕ ನಿಗದಿ ಮಾಡಲಾಗಿತ್ತು. ಆದರೆ ಥಿಯರಿಯಲ್ಲಿ ಗರಿಷ್ಠ 70 ಅಂಕಕ್ಕೆ 73 ಅಂಕ ನೀಡಿದೆ. ಈ ಅಂಕಗಳನ್ನು ನೋಡಿ ವಿದ್ಯಾರ್ಥಿಗಳೇ ತಬ್ಬಿಬ್ಬಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಬಹುತೇಕ ಕಾಲೇಜುಗಳಲ್ಲಿ ಇದೇ ಎಡವಟ್ಟಾಗಿರುವುದು ತಿಳಿದುಬಂದಿದೆ.

ಸದ್ಯ ಈ ಅಂಕಗಳನ್ನು ಕಂಡ ವಿದ್ಯಾರ್ಥಿಗಳು ಕಾಲೇಜು ಗಮನಕ್ಕೆ ತಂದಿದ್ದಾರೆ. ಈ ಎಡವಟ್ಟನ್ನು ಬೆಂಗಳೂರ ವಿವಿ ಹೇಗೆ ಸರಿಪಡಿಸುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

ಕುಲಸಚಿವ ಹುದ್ದೆಗಾಗಿ ಹಗ್ಗಜಗ್ಗಾಟ
ಕುಲಸಚಿವ ಕುರ್ಚಿಗಾಗಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕುಸ್ತಿ ಶುರುವಾಗಿತ್ತು. ಅಧಿಕಾರ ಸ್ವೀಕಾರಕ್ಕಾಗಿ ಇಬ್ಬರ ನಡುವೆ ಹೈಡ್ರಾಮಾ ನಡೆದಿದೆ. ಬೆಂಗಳೂರು ಕುಲಸಚಿವ ಸ್ಥಾನಕ್ಕೆ ಪ್ರೊ.ಕೊಟ್ರೇಶ್ ಹೊಸದಾಗಿ ನೇಮಕಗೊಂಡಿದ್ದಾರೆ. ನವೆಂಬರ್ 26ರಂದು ರಾಜ್ಯ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿತ್ತು.

ಆದರೆ ಹಾಲಿ ಕುಲಸಚಿವೆ ಕೆ. ಜ್ಯೋತಿ ಬೇರೆ ಯಾವುದೇ ಇಲಾಖೆಗೆ ವರ್ಗಾವಣೆ ಆಗಿರಲಿಲ್ಲ. ಇದು ತಿಳಿದಿದ್ದರೂ ಹಾಲಿ ಕುಲಸಚಿವೆ ಇಲ್ಲದ ಸಮಯದಲ್ಲಿ ಪ್ರೊ.ಕೊಟ್ರೇಶ್ ಕಡತಗಳಿಗೆ ಸಹಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

English summary
Education: Bangalore University made mistake by giving 73 out of 70 Marks to B.com 3rd Semester Students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X