ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Phd ಪ್ರವೇಶ ಪ್ರಕ್ರಿಯೆ ಅಕ್ರಮ ಮತ್ತು ಕುಲಪತಿ ಸರ್ವಾಧಿಕಾರ ಧೋರಣೆ

|
Google Oneindia Kannada News

ಬೆಂಗಳೂರು, ಮಾರ್ಚ್‌ 15: ಪಿಎಚ್ ಡಿ ನೇಮಕಾತಿಯಲ್ಲಿನ ಅಕ್ರಮ ಹಾಗೂ ಕುಲಪತಿ ವೇಣುಗೋಪಾಲ್ ಸರ್ವಾಧಿಕಾರಿ ಧೋರಣೆ ಖಂಡಿಸಿ ಬೆಂಗಳೂರು ವಿಶ್ವವಿದ್ಯಾಲಯವನ್ನು ಬಂದ್ ಮಾಡಲಾಗಿದೆ. ಸುಮಾರು 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೀದಿಗೆ ಇಳಿಯಲಿದ್ದು, ವಿವಿಯ ಎಲ್ಲಾ ಭಾಗಗಳಿಗೆ ಬೀಗ ಜಡಿಯುತ್ತಿದ್ದಾರೆ. ಎರಡು ವರ್ಷವಾದರೂ ಪಿಎಚ್ ಡಿ ನೇಮಕಾತಿ ಸಂಬಂಧ ಉಂಟಾಗಿರುವ ಗೊಂದಲ ನಿವಾರಿಸದ ಕಾರಣ ವಿದ್ಯಾರ್ಥಿ ಸಮುದಾಯ ಇದೀಗ ಹೋರಾಟಕ್ಕೆ ಇಳಿದಿದೆ.

ಯುಜಿಸಿ ನಿಯಮ ಗಾಳಿಗೆ : ರಾಜ್ಯದ ಯಾವುದೇ ವಿವಿಗಳಲ್ಲಿ ಅನುಸರಿಸದ ಅವೈಜ್ಞಾನಿಕ ಪದ್ದತಿಯನ್ನು ಅನುಸರಿಸಿ ಕೌನ್ಸಿಲಿಂಗ್ ಪದ್ಧತಿಯನ್ನು ಬೆಂಗಳೂರು ವಿವಿ ಅನುಸರಿಸುತ್ತಿದೆ. ಯುಜಿಸಿ ನಿಯಮಾವಳಿಗಳ ಪ್ರಕಾರ ಪ್ರತಿ ಪ್ರವೇಶಾತಿ ಪ್ರಕ್ರಿಯೆಯಲ್ಲಿ ಸಾಮಾನ್ಯ ವರ್ಗಕ್ಕೆ 55%, ಹಿಂದುಳಿದ ವರ್ಗಗಳಿಗೆ 50% ಮತ್ತು ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ 45% ಅರ್ಹತಾ ಅಂಕಗಳನ್ನು ನಿಗದಿಪಡಿಸಬೇಕು. ಈ ಎಲ್ಲಾ ನಿಯಮ ಗಾಳಿಗೆ ತೂರಿ ಕಳೆದ ಎರಡು ವರ್ಷದಿಂದ ಪಿಎಚ್ ಡಿ ಪ್ರವೇಶ ಪ್ರಕ್ರಿಯೆ ಗೊಂದಲದ ಗೂಡಾಗಿದೆ. ಇದಕ್ಕೆ ವಿವಿಯ ಕುಲಪತಿ ವೇಣುಗೋಪಾಲ್ ಸರ್ವಾಧಿಕಾರಿ ಧೋರಣೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಸೌರಶಕ್ತಿ ಮೊರೆ ಹೋದ ಬೆಂಗಳೂರು ವಿಶ್ವವಿದ್ಯಾಲಯಸೌರಶಕ್ತಿ ಮೊರೆ ಹೋದ ಬೆಂಗಳೂರು ವಿಶ್ವವಿದ್ಯಾಲಯ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಶಿಫಾರಸ್ಸುಗಳಲ್ಲಿ ಅಂತರಶಿಸ್ತೀಯ ಸಂಶೋಧನೆ ( ಇಂಟರ್ ಡಿಸಿಪ್ಲಿನರಿ ರಿಸರ್ಚ್ ) ಗಳಿಗೆ ಅವಕಾಶ ನಿರಾಕಾರಿಸಲಾಗಿದೆ. ಈ ಹಿಂದೆ ಬೆಂಗಳೂರು ವಿವಿಯಲ್ಲಿ ಅತೀ ಹೆಚ್ಚು ಅಂತರ್ ಶಿಸ್ತೀಯ ಸಂಶೋಧನೆಗಳನ್ನು ಮಂಡಿಸಿ ದಾಖಲೆ ಬರೆದಿತ್ತು. ಆದರೆ ಈ ಬಾರಿ ಬೆಂಗಳೂರು ವಿವಿಯಲ್ಲಿ ಇಂಟರ್ ಡಿಸಿಪ್ಲಿನರಿ ರಿಸರ್ಚ್ ಗಳಿಗೆ ಅವಕಾಶ ನಿರಾಕರಿಸಲಾಗಿದೆ. ಆದರೆ ಬೆಂಗಳೂರು ವಿವಿಯಲ್ಲಿ ಯಾವುದೇ ವಿನಾಯ್ತಿ ನೀಡದೆ ಪ್ರವೇಶಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಇದೀಗ ವಿದ್ಯಾರ್ಥಿಗಳು ಬೆಂಗಳೂರು ವಿವಿ ಆಡಳಿತ ವಿಭಾಗದ ಕಚೇರಿ ಮುಂದೆ ಜಮಾಯಿಸುತ್ತಿದ್ದು, ಕುಲಪತಿ ವೇಣುಗೋಪಾಲ್ ಅವರ ಸರ್ವಾಧಿಕಾರ ಧೋರಣೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ಪಿಜಿ ವಿದ್ಯಾರ್ಥಿ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

Bangalore University Bandh Against Irregularities in PhD Appointments

Recommended Video

BS Yediyurappa! ನಮ್ಮ ಜನ ಬುದ್ದಿ ಕಲಿಯಲ್ಲ ರೀ..! | Oneindia Kannada

ನಿವೃತ್ತಿಗೆ ಆರು ತಿಂಗಳು ಬಾಕಿ ಇರುವ ಪ್ರಾಧ್ಯಾಪಕರಿಗೆ ಪಿಎಚ್ ಡಿ ಮಾರ್ಗದರ್ಶನ ನೀಡಲು ಅವಕಾಶ ನಿರಾಕರಿಸಲಾಗಿದೆ. ಇದರಿಂದ 80 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪಿಎಚ್ ಡಿ ಪದವಿ ಆಸೆ ಮಣ್ಣು ಪಾಲಾಗಿದೆ. 2016 ರಿಂದ ಪ್ರವೇಶ ಪ್ರಕ್ರಿಯೆ ನಡೆಸದ ವಿವಿಯ ಧೋರಣೆಯಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಕಳೆದ 5ವರ್ಷಗಳಿಂದ ಪಿಎಚ್ ಡಿ ಪ್ರಕ್ರಿಯೆ ನಡೆಸದ ಹಿನ್ನಲೆ ಸಹಾಯಕ, ಸಹ ಹಾಗೂ ಪ್ರಾಧ್ಯಾಪಕರಿಗೆ ತಲಾ ಒಂದು ಸೀಟ್ ಹೆಚ್ಚುವರಿ‌ ಮಾಡಬೇಕು. ನಮ್ಮ ಬೇಡಿಕೆ ಈಡೇರಿಸದಿದ್ದರೆ ಸಾಂಕೇತಿಕ ಪ್ರತಿಭಟನೆ ಅನಿರ್ಧಿಷ್ಟ ಅವಧಿಗೆ ಮುಂದುವರೆಸಲಾಗುವುದು. ಕುಲಪತಿ ವೇಣುಗೋಪಾಲ್ ತಮ್ಮ ಸರ್ವಾಧಿಕಾರ ಧೋರಣೆ ಬಿಟ್ಟು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

English summary
Bangalore University Bandh Against Irregularities in PhD Appointments and and the dictatorial attitude of Chancellor Venugopal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X