ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂದಿ ಹಿಲ್ಲಥಾನ್ : ಯಾಕಾಗಿ? ಏನಿದರ ಮಹತ್ವ?

By Madhusoodhan
|
Google Oneindia Kannada News

ಬೆಂಗಳೂರು, ಮೇ 30: ಯುನೈಟೆಡ್ ವೇ ಬೆಂಗಳೂರು ಆಶ್ರಯದಲ್ಲಿ "ನಂದಿ ಹಿಲ್ಲಥಾನ್ " ಜೂನ್ 12 ಭಾನುವಾರ ನಡೆಯಲಿದೆ. ಪರಿಸರ ಸಮತೋಲನ, ಜಾಗೃತಿ, ಕಸ ವಿಲೇವಾರಿ, ಸುಂದರ ರಸ್ತೆಗಳು ಎಂಬ ಪರಿಕಲ್ಪನೆ ಆಧಾರದಲ್ಲಿ ಮ್ಯಾರಥಾನ್ ನಡೆಯಲಿದೆ.

ನಂದಿ ಹಿಲ್ಲಥಾನ್ ಪ್ರಮುಖ ಅಂಶಗಳು
* ನಂದಿ ಬೆಟ್ಟದ ಬುಡದಲ್ಲಿ ಮ್ಯಾರಥಾನ್ ಓಟ ಆರಂಭವಾಗಲಿದೆ.[ಬುಗುರಿ, ಗೋಲಿ, ಗಿಲ್ಲಿದಾಂಡು ಆಡುತ್ತ ಮ್ಯಾರಥಾನ್ ಓಡಿ]
* ಸಂಗ್ರಹವಾಗುವ ಹಣವನ್ನು ಗ್ರಾಮೀಣ ಜನರ ಉದ್ಧಾರಕ್ಕೆ ಬಳಕೆ ಮಾಡಿಕೊಳ್ಳಲಾಗುವುದು.
* ತೃತೀಯ ಲಿಂಗಿಗಳು ಸಹ ಓಟದಲ್ಲಿ ಭಾಗವಹಿಸಲಿದ್ದಾರೆ.
* ಸ್ಥಳೀಯ ಯುವಕರು ಸಹಕಾರ ನೀಡಿಲಿದ್ದು ಮ್ಯಾರಥಾನ್ ನಲ್ಲಿ ಭಾಗವಹಿಸಲಿದ್ದಾರೆ
* ಅರಣ್ಯ ಇಲಾಖೆ ಮತ್ತು ತೋಟಗಾರಿಕಾ ಇಲಾಖೆ ಕಾರ್ಯಕ್ರಮಕ್ಕೆ ಸಹಕಾರ ನೀಡಲಿವೆ.

ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸ್ಥಳೀಯ ಯುವಕರು ಈಗಾಗಲೇ ಜನರಿಗೆ ಮಾಹಿತಿ ನೀಡಿ ಹಿಲ್ಲಥಾನ್ ಸಿದ್ಧತೆಯಲ್ಲಿ ತೊಡಗಿದ್ದಾರೆ. ಅಲ್ಲಲ್ಲಿ ಬ್ಯಾನರ್ ಗಳನ್ನು ಅಳವಡಿಕೆ ಮಾಡಲಾಗುತ್ತಿದೆ.

ಯಾರ್ಯಾರು ಭಾಗವಹಿಸಲಿದ್ದಾರೆ?

ಯಾರ್ಯಾರು ಭಾಗವಹಿಸಲಿದ್ದಾರೆ?

ಪರಿಸರ ವಾದಿ ಡಾ ಯಲ್ಲಪ್ಪ ರೆಡ್ಡಿ, , ಬೆಂಗಳೂರು ಪ್ರತಿಷ್ಠಾನದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀಧರ್ ಪಬ್ಬಿಶೆಟ್ಟಿ ಕಲ್ಪನಾ ಕೌರ್, ನಿಕೊಲ್ ಫರೀರಾ, ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿದ್ಯಾರಣ್ಯ, ಚಿಲುಮೆ, ಸೆ ಟ್ರೀಸ್, ಎನ್ ಫೋಲ್ಡ್, ಕಘಜ್, ಸೆಲ್ಕೋ ಫೌಂಡೇಶನ್, ಸಮಂಥಮ್ ಎನ್ ಜಿಒ ಗಳು ಮ್ಯಾರಥಾನ್ ಗೆ ಸಾಥ್ ನೀಡಲಿವೆ.

ಸಂಸ್ಥೆಗಳ ಸಹಕಾರ

ಸಂಸ್ಥೆಗಳ ಸಹಕಾರ

ಡೆಕೋರಾ, ಫೋರ್ಸ್, ಇಂದಿರಾನಗರ್ ಸೆಕೆಂಡ್ ಸ್ಟೇಜ್ ಲೀಗ್, ಸೋಮ ಸುಂದರಪಾಳ್ಯ ಅಭಿವೃದ್ಧಿ ಟ್ರಸ್ಟ್, ಸಿಫೋರ್ಸ್ ಸಂಜಯನಗರ್ ಸಂಸ್ಥೆಗಳು ಸಹಕಾರ ನೀಡಲಿವೆ.

ಯುನೈಟೆಡ್ ವೇ ಬೆಂಗಳೂರು

ಯುನೈಟೆಡ್ ವೇ ಬೆಂಗಳೂರು

ಸಮುದಾಯ ಅಭಿವೃದ್ಧಿ, ಶಿಕ್ಷಣ, ಪರಿಸರ ಉಳಿಸುವಲ್ಲಿ ಸದಾ ಮುಂದಿರುವ ಯುನೈಡೆಟ್ ವೇ ಬೆಂಗಳೂರು ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡಿದೆ. ಜನರಿಗೆ ಮೂಲ ಸೌಕರ್ಯ ನೀಡುವುದರೊಂದಿಗೆ ಜೀವನ ಕ್ರಮದಲ್ಲಿ ಬದಲಾವಣೆ ತರುವುದು ಸಂಸ್ಥೆಯ ಮುಖ್ಯ ಧ್ಯೇಯ.

ಸಾಮಾಜಿಕ ಕಾರ್ಯ

ಸಾಮಾಜಿಕ ಕಾರ್ಯ

ಮಕ್ಕಳಿಗೆ ಪೌಷ್ಟಿಕಾಂಶದ ಆಹಾರ ನೀಡುವುದು, ಆರೋಗ್ಯ ಶಿಬಿರ ನಡೆಸುವುದು ಮತ್ತು ಮೂಲ ಸೌಕರ್ಯ ಒದಗಿಸುವ ಕೆಲಸವನ್ನು ಯುನೈಡೆಟ್ ವೇ ಬೆಂಗಳೂರು ಆರಂಭದಿಂದ ಮಾಡಿಕೊಂಡು ಬಂದಿದೆ.

ಕಾರ್ಪೋರೇಟ್ ಪಾಲುದಾರರು

ಕಾರ್ಪೋರೇಟ್ ಪಾಲುದಾರರು

ಹಿಲ್ಲಥಾನ್ ಗೆ ಕಾರ್ಪೋರೇಟ್ ಕಂಪನಿಗಳು ಸಹಕಾರ ನೀಡುತ್ತಿವೆ. ತ್ರೀ ಎಂ, ಡಿಲೋಟ್, ಜಿಇ, ಟಾರ್ಗೆಟ್, ಥಾಮ್ಸನ್ ರಿಟರ್ನ್ಸ್, ಗೋಲ್ಡ್ ಮ್ಯಾನ್ ಸಾಚ್ಸ್, ಯುಟಿಸಿ, ಐಗೇಟ್ ಕಂಪನಿಗಳು ಸಾಥ್ ನೀಡಲಿವೆ.

ಮಾರ್ಗದರ್ಶನ

ಮಾರ್ಗದರ್ಶನ

ಒನ್ ಇಂಡಿಯಾ.ಕಾಮ್, ಎಸ್ ಆರ್ ನೋವಾ, ಐಗೇಟ್ಇಂಡಸ್ ಲಾ, ಮಣಿಪಾಲ್ ಫೌಂಡೇಶನ್, ಪಥಂಮ್ ಬುಕ್ಸ್, ಆಲ್ ಸ್ಟೇಟ್, ಅಲ್ಸೆಲ್ ಪಾರ್ಟನ್ಸ್, ನಾರ್ಥನ್ ಟ್ರಸ್ಟ್, ಟಿಐಇ ಬೆಂಗಳೂರು ಆಂಡ್ ಪೀಪಲ್ ಬಿಸಿನಸ್ ಇಂಡಿಯಾ ಕಂಪನಿಗಳ ಮಾರ್ಗದರ್ಶನದಲ್ಲಿ ಮ್ಯಾರಥಾನ್ ಓಟ ನಡೆಯಲಿದೆ.

ಎಲ್ಲಿಂದ ಆರಂಭ?

ಎಲ್ಲಿಂದ ಆರಂಭ?

ಸುಲ್ತಾನ ಪೇಟ್ ಸಮೀಪದ ಕಣಿವೆ ನಂದೀಶ್ವರ ದೇವಾಲಯದ ಸಮೀಪದ ಡಿಸ್ಕವರಿ ವಿಲೇಜ್ ಬಳಿಯಿಂದ ಮ್ಯಾರಥಾನ್ ಆರಂಭವಾಗಲಿದೆ. 21 ಕಿಮೀ ವ್ಯಾಪ್ತಿಯಲ್ಲಿ ಮ್ಯಾರಥಾನ್ ನಡೆಯಲಿದೆ. ಸ್ಥಳೀಯರು ಈಗಾಗಲೇ ಪ್ರಚಾರ ಮತ್ತು ಸಿದ್ಧತೆಯಲ್ಲಿ ತೊಗಡಿಕೊಂಡಿದ್ದಾರೆ.

English summary
Nandi Hillathon is a city wide fundraising event driven by United Way Bengaluru to protect, preserve and promote Bengaluru's treasure Nandi Hills. Marathon and Walkathon are organized on June 12, Sunday. Attractive prizes are there to win. Here id the Salient features of NANDI HILLATHON.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X