ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚೈನಾ ಹೂಗಳ ವಿರುದ್ಧ ಬೆಂಗಳೂರಲ್ಲಿ ವಿನೂತನ ಪ್ರತಿಭಟನೆ

|
Google Oneindia Kannada News

Recommended Video

ಉಪ ಚುನಾವಣೆ ಘೋಷಣೆ ಬಗ್ಗೆ HDK ಟ್ವೀಟ್

ಬೆಂಗಳೂರು, ಸೆಪ್ಟೆಂಬರ್ 29 : ಚೈನಾ ಪ್ಲಾಸ್ಟಿಕ್ ಹೂಗಳ ಬಳಕೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಬೆಂಗಳೂರಿನಲ್ಲಿ ವಿನೂತನ ಪ್ರತಿಭಟನೆ ನಡೆಯಿತು. 10 ಲಕ್ಷ ರೂ. ಮೌಲ್ಯದ ಹೂಗಳನ್ನುಉಚಿತವಾಗಿ ಹಂಚಿ ನೂರಾರು ಜನರು ಪ್ರತಿಭಟನೆ ನಡೆಸಿದರು.

ಭಾನುವಾರ ದಕ್ಷಿಣ ಭಾರತದ ಹೂ ಬೆಳೆಗಾರರ ಸಂಘದ ವತಿಯಿಂದ ಲಾಲ್ ಬಾಗ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಉಚಿತವಾಗಿ ಹೂಗಳನ್ನು ಹಂಚಿ, ಪ್ಲಾಸ್ಟಿಕ್ ಹೂ ಬಳಕೆಯಿಂದ ಪರಿಸರದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸಲಾಯಿತು.

ಚಾಮರಾಜನಗರಕ್ಕೆ ಬಂತು ಕಬ್ಬು ಕಟಾವು ಯಂತ್ರ: ರೈತರಿಗೆ ತಂತು ಖುಷಿಚಾಮರಾಜನಗರಕ್ಕೆ ಬಂತು ಕಬ್ಬು ಕಟಾವು ಯಂತ್ರ: ರೈತರಿಗೆ ತಂತು ಖುಷಿ

ಹೂ ಬೆಳೆಗಾರರನ್ನು ಬೀದಿಗೆ ತಳ್ಳಿರುವ ಚೈನಾದಿಂದ ಆಮದುಗೊಳ್ಳುವ ಪ್ಲಾಸ್ಟಿಕ್ ಹೂಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಹೂ ಮಾರಾಟಕ್ಕೆ ಸೂಕ್ತ ವ್ಯವಸ್ಥೆಯನ್ನು ಮಾಡಬೇಕು ಎಂದು ಪ್ರತಿಭಟನಾನಿರತರು ಸರ್ಕಾರವನ್ನು ಒತ್ತಾಯಿಸಿದರು.

ಸೇವಂತಿಗೆ ಬೆಳೆದು ಲಾಭದ ಸಿಹಿ ಸವಿದ ಹಾಸನದ ರೈತಸೇವಂತಿಗೆ ಬೆಳೆದು ಲಾಭದ ಸಿಹಿ ಸವಿದ ಹಾಸನದ ರೈತ

ಕೃತಕ ಹೂಗಳಿಂದಾಗಿ ಪ್ರತಿ ಏಕರೆಗೆ 50 ಲಕ್ಷ ರೂಪಾಯಿ ಬಂಡವಾಳವನ್ನು ಹೂಡುವ ಮೂಲಕ ಪಾಲಿ ಹೌಸ್ ಸೇರಿದಂತೆ ಹಲವಾರು ಉಪಕರಣಗಳನ್ನು ಖರೀದಿ ಮಾಡಿ ಹೂ ಬೆಳೆದ ರೈತರಿಗೆ ಸರಿಯಾದ ಪ್ರತಿಫಲ ಸಿಗುತ್ತಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಬಂಪರ್ ಬೆಲೆಯ ನಿರೀಕ್ಷೆಯಲ್ಲಿ ಚಿತ್ರದುರ್ಗದ ಈರುಳ್ಳಿಬಂಪರ್ ಬೆಲೆಯ ನಿರೀಕ್ಷೆಯಲ್ಲಿ ಚಿತ್ರದುರ್ಗದ ಈರುಳ್ಳಿ

ಪರಿಸರಕ್ಕೆ ಹಾನಿ

ಪರಿಸರಕ್ಕೆ ಹಾನಿ

ಪ್ಲಾಸ್ಟಿಕ್ ಬಳಸಿ ತಯಾರಿಸಿರುವ ಕೃತಕ ಹೂಗಳು ಸುಲಭವಾಗಿ ಕೊಳೆಯುವಂತಹವಲ್ಲ. ಕಾಲ ಕ್ರಮೇಣ ಭೂಮಿಗೆ ಹಾಗೂ ನೀರಿಗೆ ಸೇರಿ ಪರಿಸರವನ್ನು ಹಾಳುಗೆಡವುತ್ತವೆ ಎಂದು ಪ್ರತಿಭಟನಾನಿರತರು ಆತಂಕ ವ್ಯಕ್ತಪಡಿಸಿದರು.

ಕೃತಕ ಹೂಗಳ ಬಳಕೆ ಹೆಚ್ಚಾಗುತ್ತಿದೆ

ಕೃತಕ ಹೂಗಳ ಬಳಕೆ ಹೆಚ್ಚಾಗುತ್ತಿದೆ

ದೆೇಶದ ಶೆೇಕಡಾ 78 ರಷ್ಟು ಭಾಗದ ಜನರು ಈಗಲೂ ಕೃಷಿ ಮೇಲೆ ಅವಲಂಬಿತರಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಹಬ್ಬಗಳಲ್ಲಿ, ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಕೃತಕ ಹೂಗಳ ಬಳಕೆ ಹೆಚ್ಚಾಗುತ್ತಿದೆ. ಇದೇ ರೀತಿಯ ಬಳಕೆ ಹೆಚ್ಚಾದಲ್ಲಿ ನೈಸರ್ಗಿಕ ಹೂಗಳ ಬಳಕೆ ಸಂಪೂರ್ಣ ಕಡಿಮೆಯಾಗಲಿದ್ದು, ಹೂಗಳ ಬಳಕೆ ಸಂಪೂರ್ಣ ಕಡಿಮೆಯಾಗಲಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೂವಿನ ಬಳಕೆ ನಿಷೇಧಿಸಿ

ಹೂವಿನ ಬಳಕೆ ನಿಷೇಧಿಸಿ

ರಾಜ್ಯ ಹಾಗೂ ದೇಶದ ಪ್ರಮುಖ ಹೂ ಬೆಳೆಗಾರರ ಹಬ್ ಆಗಿರುವ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಹೂ ಬೆಳೆಗಾರರ ರೈತರ ಹಿತಾಸಕ್ತಿಯನ್ನು ಕಾಪಾಡಲು ಕೃತಕ ಹೂಗಳ ಬಳಕೆಯನ್ನು ನಿಷೇಧಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಹೂವು ರಸ್ತೆಗೆ ಚೆಲ್ಲುವುದು ನೋವಿನ ಸಂಗತಿ

ಹೂವು ರಸ್ತೆಗೆ ಚೆಲ್ಲುವುದು ನೋವಿನ ಸಂಗತಿ

ಕಷ್ಟಪಟ್ಟು ಬೆಳೆದ ಹೂಗಳನ್ನು ರಸ್ತೆಯಲ್ಲಿ ಚೆಲ್ಲುವುದು ನಮಗೆ ತುಂಬಾ ನೋವು ತರುವ ಸಂಗತಿಯಾಗಿದೆ. ಈ ಹೂಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡುವ ಮೂಲಕ ನಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದೇವೆ ಎಂದರು.

English summary
South Indian Flower Growers Association members staged protest in-front of Lalbagh, Bengaluru and demand the government to ban China flowers in state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X